»   » ಶಾರುಖ್ ಮುಂದಿನ ಚಿತ್ರದಲ್ಲಿ ರಣಬೀರ್ ಮಾಜಿ ಪ್ರಿಯತಮೆಯರು?

ಶಾರುಖ್ ಮುಂದಿನ ಚಿತ್ರದಲ್ಲಿ ರಣಬೀರ್ ಮಾಜಿ ಪ್ರಿಯತಮೆಯರು?

Posted by:
Subscribe to Filmibeat Kannada

ಶಾರುಖ್ ಖಾನ್ ಅವರ ಯಾವುದೇ ಸಿನಿಮಾ ನೋಡಿದ ನಂತರ ಅಭಿಮಾನಿಗಳು ಬಾಯ ಮೇಲೆ ಬೆರಳಿಟ್ಟು ಅವರ ಮುಂದಿನ ಸಿನಿಮಾ ಯಾವಾಗ ಬರುತ್ತೆ? , ಯಾವುದು? ಎಂದು ಚಿಂತಿಸುವುದು ಸಾಮಾನ್ಯ. ಈಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಅಂದಹಾಗೆ ನಿರ್ದೇಶಕ ಆನಂದ್ ಎಲ್ ರೈ ಅವರು ಶಾರುಖ್ ಖಾನ್ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಆನಂದ್ ಅವರ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಇಬ್ಬರು ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಬಾಲಿವುಡ್ ಬಾದ್ ಶಾ ಅವರ ಬಹು ನಿರೀಕ್ಷಿತ ಸಿನಿಮಾದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ಸ್ ಇಲ್ಲಿದೆ ನೋಡಿ..

ರಣಬೀರ್ ಮಾಜಿ ಪ್ರಿಯತಮೆಯರು ಒಂದೇ ಸ್ಕ್ರೀನ್ ನಲ್ಲಿ

ರಣಬೀರ್ ಮಾಜಿ ಪ್ರಿಯತಮೆಯರು ಒಂದೇ ಸ್ಕ್ರೀನ್ ನಲ್ಲಿ

ಬಿ ಟೌನ್ ನ ಇಬ್ಬರು ಲೀಡಿಂಗ್ ನಟಿಯರು ಒಂದೇ ಸ್ಕ್ರೀನ್ ಶೇರ್ ಮಾಡುವುದು ಒಂದು ರೀತಿ ಸ್ಪೆಷಲ್. ಆದ್ರೆ ಅತಿ ಹೆಚ್ಚು ಕುತೂಹಲ ವಿಷಯ ಅಂದ್ರೆ ರಣಬೀರ್ ಕಪೂರ್ ಅವರ ಇಬ್ಬರು ಮಾಜಿ ಪ್ರಿಯತಮೆಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಒಂದೇ ತೆರೆ ಮೇಲೆ ಕಾಣುವುದು. ಇಲ್ಲಿಯವರೆಗೆ ಒಬ್ಬರಿಗೊಬ್ಬರು ಪರಸ್ಪರ ಮಾತನಾಡದ ಹಾಗೂ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳದ ಈ ಇಬ್ಬರು ಈಗ ಶಾರುಖ್ ಚಿತ್ರದಲ್ಲಿ ಒಂದೇ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ.

ಲೇಟೆಸ್ಟ್ ನ್ಯೂಸ್ ಇದು...

ಲೇಟೆಸ್ಟ್ ನ್ಯೂಸ್ ಇದು...

ಆನಂದ್ ಎಲ್ ನಿರ್ದೇಶನದ ಶಾರುಖ್ ಖಾನ್ ಚಿತ್ರದಲ್ಲಿ ಕತ್ರಿನಾ ಕೈಫ್ ಪ್ರಖ್ಯಾತ ಬಾಲಿವುಡ್ ನಟಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದು, ದೀಪಿಕಾ ಪಡುಕೋಣೆ ಭಾರತದ ಹಳ್ಳಿ ಹುಡುಗಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರಂತೆ.

ಚಿತ್ರಕ್ಕೆ ತಾತ್ಕಾಲಿಕವಾಗಿ ಇಟ್ಟ ಟೈಟಲ್ ಇದು...

ಚಿತ್ರಕ್ಕೆ ತಾತ್ಕಾಲಿಕವಾಗಿ ಇಟ್ಟ ಟೈಟಲ್ ಇದು...

ಮೂಲಗಳ ಪ್ರಕಾರ ಈಗಾಗಲೇ ಚಿತ್ರಕ್ಕೆ 'ಕತ್ರಿನಾ ಮೇರಿ ಜಾನ್' ಎಂದು ಹೆಸರು ಇಡಲಾಗಿದೆಯಂತೆ. ಆದ್ರೆ ಇದು ಬೇಸಿಕ್ ಟೈಟಲ್ ಆಗಿದ್ದು, ತಾರಾಬಳಗ ಆಯ್ಕೆ ಮುಗಿದ ನಂತರ ಫೈನಲ್ ಆಗಿ ಇನ್ನೊಂದು ಹೆಸರು ಪ್ರಕಟಣೆ ಮಾಡಲಾಗುತ್ತದೆಯಂತೆ.

ಚಿತ್ರದ ಲುಕ್ ಬಗ್ಗೆ ಶಾರುಖ್ ಖಾನ್ ಮಾತು..

ಚಿತ್ರದ ಲುಕ್ ಬಗ್ಗೆ ಶಾರುಖ್ ಖಾನ್ ಮಾತು..

ಇತ್ತೀಚೆಗಷ್ಟೆ ಚಿತ್ರದ ಲುಕ್ ಬಗ್ಗೆ ಶಾರುಖ್ ಖಾನ್ ಮಾತನಾಡುವಾಗ, 'ನನ್ನ ನೋಟ 'ಅಪ್ಪು ರಾಜ' ದಲ್ಲಿ ಕಮಲ್ ಹಾಸನ್ ಇರುವುದಕ್ಕಿಂತ ವಿಭಿನ್ನವಾಗಿದೆ' ಎಂದಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಾರಂತೆ.

ಶಾರುಖ್ ಸಖತ್ ಡಿಮ್ಯಾಂಡ್ ಅಂತೇ?

ಶಾರುಖ್ ಸಖತ್ ಡಿಮ್ಯಾಂಡ್ ಅಂತೇ?

ನಿರ್ದೇಶಕ ಮತ್ತು ನಿರ್ಮಾಪಕರಾದ ಆನಂದ್ ರೈ ಅವರಿಗೆ ಶಾರುಖ್ ರನ್ನು ಹೀರೋ ಆಗಿ ಆಯ್ಕೆ ಮಾಡಿದ್ದು ಏಕೆ? ಎಂದು ಕೇಳಿದ ಪ್ರಶ್ನೆಗೆ, "ನಾನು ಯಾವಾಗಲು ಪಾತ್ರದ ಬೇಡಿಕೆ ಮೇಲೆ ಕಾಸ್ಟಿಂಗ್ ಮಾಡುತ್ತೇನೆ. ಆದರೆ ಶಾರುಖ್ ಖಾನ್ ಗೆ ಕಾಸ್ಟಿಂಗ್ ಮಾಡುವುದು ಪಾತ್ರದ ಬೇಡಿಕೆ ಮೇಲೆ ಆಧರಿಸಿರುತ್ತದೆ' ಎಂದಿದ್ದಾರೆ.

English summary
If reports are to be believed then this film which has been tentatively titled 'Katrina Meri Jaan' has Katrina Kaif playing a Bollywood superstar while Deepika Padukone essays a rural Indian girl.
Please Wait while comments are loading...

Kannada Photos

Go to : More Photos