»   » ಮೆನಿ ಹ್ಯಾಪಿ ರಿಟರ್ನ್ಸ್ ಡಿಯರ್ ಬಿಪಾಶಾ

ಮೆನಿ ಹ್ಯಾಪಿ ರಿಟರ್ನ್ಸ್ ಡಿಯರ್ ಬಿಪಾಶಾ

Posted by:
Subscribe to Filmibeat Kannada

ಒಮ್ಮೆ ಕಣ್ಮುಚ್ಚಿಕೊಂಡು ಹಾಗೆ ಸುಮ್ಮನೆ ಬಾಲಿವುಡ್ ತಾರೆ ಬಿಪಾಶಾ ಬಸುರನ್ನು ನೆನಪಿಸಿಕೊಳ್ಳಿ ! ಆಹಾ ಆಕೆಯ ಆಕರ್ಷಕ ಮೈಮಾಟ, ಸುಂದರವಾದ ಕಣ್ಣುಗಳು, ಮೃದುವಾದ ಕೆನ್ನೆ, ತೊಂಡೆ ಹಣ್ಣಿನಂತ ತುಟಿ, ಎತ್ತರದ ನಿಲುವು, ಮೋಹಕ ನಗೆ ಅಬ್ಬಬ್ಬಾ ಏನು ಚೆಲುವು...ಎಲ್ಲವೂ ಕಣ್ಣ ಮುಂದೆ ಸುಳಿಯುತ್ತವೆ.

ಈ ಬಂಗಾಳಿ ಬೆಡಗಿಯರೇ ಹೀಗೇ ಏನೋ? ವರ್ಷಗಳು ಉರುಳುತ್ತಿದ್ದರೂ ತಮ್ಮ ದೇಹದ ಸೌಂದರ್ಯ ಕಳೆಗುಂದದಂತೆ ಜಾಗ್ರತೆ ವಹಿಸುತ್ತಾರೆ. ಬಾಕ್ಸ್ ಆಫೀಸಲ್ಲಿ ಬಿಪಾಶಾ ಬಸು ಚಿತ್ರಗಳು ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ಅಭಿಮಾನಿಗಳ ಹೃದಯಲ್ಲಿ ಮಾತ್ರ ಸದ್ದು ಮಾಡುತ್ತಲೇ ಇದ್ದಾರೆ.

ಮೂವತ್ನಾಲಕ್ಕರ ಹರೆಯಕ್ಕೆ ಅಡಿಯಿಟ್ಟ ಬಿಪಾಶಾ

ಮೂವತ್ನಾಲಕ್ಕರ ಹರೆಯಕ್ಕೆ ಅಡಿಯಿಟ್ಟ ಬಿಪಾಶಾ

ಇಷ್ಟೆಲ್ಲಾ ಹೇಳಲು ಕಾರಣ, ಇಂದು (ಜ.7) ಬಿಪಾಶಾ ಹುಟ್ಟುಹಬ್ಬ. ಮೂವತ್ನಾಲಕ್ಕನೇ ವರ್ಷಕ್ಕೆ ಬಿಪಾಶಾ ಅಡಿಯಿಡುತ್ತಿದ್ದಾರೆ. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಡಿಯರ್ ಬಿಪಾಶಾ. ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಪಾಶಾಗೆ ಹುಟ್ಟುಹಬ್ಬದ ಸಂದೇಶಗಳು ಪ್ರವಾಹವೇ ಹರಿದುಬರುತ್ತಿದೆ.

ಈ ಬಾರಿ ಗೋವಾದಲ್ಲಿ ಬರ್ತ್ ಡೇ ಸೆಲಿಬ್ರೇಷನ್

ಈ ಬಾರಿ ಗೋವಾದಲ್ಲಿ ಬರ್ತ್ ಡೇ ಸೆಲಿಬ್ರೇಷನ್

ಈ ಸಲ ಗೋವಾದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ ಬಿಪಾಶಾ. ಈ ಕಾರ್ಯಕ್ರಮಕ್ಕೆ ತೀರಾ ಆಪ್ತರಾದ 35 ಮಂದಿಗೆ ಆಹ್ವಾನ ನೀಡಿದ್ದಾರೆ. "ನನ್ನ ಪ್ರಕಾರ ಹುಟ್ಟುಹಬ್ಬ ಎಂದರೆ ಒಂದು ದಿನದ ಸಂಭ್ರಮವಲ್ಲ. ತಿಂಗಳೆಲ್ಲಾ ಸಂಭ್ರಮಿಸುವ ಹಬ್ಬ.

ಬಿಪಾಶಾ ಎಂದರೆ ಗಾಢವಾದ ಕಾಮನೆ ಎಂದರ್ಥ!

ಬಿಪಾಶಾ ಎಂದರೆ ಗಾಢವಾದ ಕಾಮನೆ ಎಂದರ್ಥ!

ಬಿಪಶಾರಿಗೆ 'ಬೊನ್ನಿ' ಎಂಬ ಮುದ್ದಾದ ಅಡ್ಡಹೆಸರು ಇದೆ. ಬಿಪಶಾ ಎಂದರೆ 'ಗಾಢವಾದ ಕಾಮನೆ' ಎಂಬ ಅರ್ಥವೂ ಉಂಟಂತೆ. ತನ್ನ ಹದಿನೇಳನೆ ವಯಸ್ಸಿನಲ್ಲೇ ಖ್ಯಾತ ಫೋರ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಬಿಪಶಾ ಪ್ರವರ್ಧಮಾನಕ್ಕೆ ಬಂದರು.

ರಾಜ್ 3 ಮೂಲಕ ಮತೊಮ್ಮೆ ಪ್ರೇಕ್ಷಕರ ಮುಂದೆ

ರಾಜ್ 3 ಮೂಲಕ ಮತೊಮ್ಮೆ ಪ್ರೇಕ್ಷಕರ ಮುಂದೆ

ಬೆಳ್ಳಿಪರದೆಯನ್ನು ಅಲಂಕರಿಸುವುದಕ್ಕೂ ಮುನ್ನ ಸೋನು ನಿಗಂ ಅವರ ಆಲ್ಬಂನಲ್ಲಿ ಬಿಪಶಾಗೆ ಸ್ಥಾನ ಸಿಕ್ಕಿತ್ತು. 'ರಾಜ್' ಮತ್ತು 'ಜಿಸ್ಮ್' ಬಿಪಾಶಾರಿಗೆ ಹೆಸರು ತಂದುಕೊಟ್ಟ ಚಿತ್ರಗಳು. ಈಗ 'ರಾಜ್ 3' ಮೂಲಕ ಮತ್ತೊಮ್ಮೆ ಪ್ರೇಕ್ಷಕರ ನಿದ್ದೆಕೆಡಿಸಲು ಬರುತ್ತಿದ್ದಾರೆ.

ಗಜರ್ ಕ ಹಲ್ವಾ ಎಂದರೆ ಬಿಪಾಶಾಗೆ ಪಂಚಪ್ರಾಣ

ಗಜರ್ ಕ ಹಲ್ವಾ ಎಂದರೆ ಬಿಪಾಶಾಗೆ ಪಂಚಪ್ರಾಣ

ಪುಸ್ತಕ ಓದುವುದು, ನೃತ್ಯ ಹಾಗೂ ತಾಯಿಗೆ ಒಳಾಂಗಣ ವಿನ್ಯಾಸದಲ್ಲಿ ಸಹಾಯ ಮಾಡುವುದು ಬಿಪಾಶಾ ನೆಚ್ಚಿನ ಹವ್ಯಾಸಗಳು. ಬಣ್ಣಗಳಲ್ಲಿ ನಸುಗೆಂಪು, ತಿಂಡಿಯಲ್ಲಿ ಗಜರ್ ಕ ಹಲ್ವಾ (ಕ್ಯಾರೆಟ್ ಹಲ್ವಾ), ಬಿಡುವಿನ ದಿನಗಳಲ್ಲಿ ಪ್ಯಾರಿಸ್, ನಟರಲ್ಲಿ ಜಾನ್ ಗ್ರಿಶಮ್ ಬಿಪಶಾಗೆ ಇಷ್ಟ.

ಮೆನಿ ಹ್ಯಾಪಿ ರಿಟರ್ನ್ಸ್ ಡಿಯರ್ ಬಿಪಾಶಾ

ಮೆನಿ ಹ್ಯಾಪಿ ರಿಟರ್ನ್ಸ್ ಡಿಯರ್ ಬಿಪಾಶಾ

ಸದ್ಯಕ್ಕೆ ಬಾಲಿವುಡ್ ನಟ ಜಾನ್ ಅಬ್ರಹಾಂ ಜೊತೆ ಟೂ ಬಿಟ್ಟಿದ್ದಾರೆ. ಈ ಮಧ್ಯೆ ಈಕೆಯ ಬೇಡಿಕೆ ಬಾಲಿವುಡ್ ಚಿತ್ರಜಗತ್ತಿನಲ್ಲಿ ದಿನೇ ದಿನೆ ಕುಸಿಯುತ್ತಿರುವುದು, ಸಾಲು ಸಾಲು ಚಿತ್ರಗಳು ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗುತ್ತಿರುವುದು ಸುಳ್ಳಲ್ಲ. 2013ರಲ್ಲಿ ಬಿಪಾಶಾಗೆ ಉತ್ತಮ ಪಾತ್ರಗಳು ಸಿಗಲಿ ಹಾಗೆಯೇ ವಿಜಯಲಕ್ಷ್ಮಿಯ ಕೃಪಾಕಟಾಕ್ಷವೂ ಇರಲಿ ಎಂದು ಹಾರೈಸೋಣ.

English summary
The gorgeous, bold Bong bombshell Bipasha Basu turns 34 today(Jan 7). We wish Many Many happy returns Bipasha. Check out Photos of Bipasha Basu Rare and Unseen Photo Gallery.
Please Wait while comments are loading...

Kannada Photos

Go to : More Photos