»   » ಸಿಟಿ ಮಾರ್ಕೆಟ್ ನಲ್ಲಿ 'ವಾತ್ಸಾಯನ ಕಾಮಸೂತ್ರ' ಪರಿಮಳ

ಸಿಟಿ ಮಾರ್ಕೆಟ್ ನಲ್ಲಿ 'ವಾತ್ಸಾಯನ ಕಾಮಸೂತ್ರ' ಪರಿಮಳ

Written by: ರವಿಕಿಶೋರ್
Subscribe to Filmibeat Kannada

ಈ ರೀತಿಯ ಚಿತ್ರಗಳು ಬಂದು ಬಹಳ ಸಮಯವೇ ಸರಿದು ಹೋಗಿದೆ. ಜನ ಈ ರೀತಿಯ ಚಿತ್ರಗಳನ್ನು ಮರೆತೂ ಹೋಗಿದ್ದರು. ಇನ್ನು ಈ ರೀತಿಯ ರಸಭರಿತ ವಯಸ್ಕರ ಚಿತ್ರಗಳನ್ನು ನಿರೀಕ್ಷಿಸುವ ಮಾತೆಲ್ಲಿ. ಇದೀಗ ಅಂತಹದ್ದೇ ಒಂದು ಪರಿಮಳಭರಿತ ಚಿತ್ರ ತೆರೆಗೆ ಬರುತ್ತಿದೆ.

ನಮ್ಮ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸಿಟಿ ಮಾರ್ಕೆಟ್ ಸಹ ಒಂದು. ಇಂತಹ ಜಾಗದಲ್ಲಿ 'ವಾತ್ಸಾಯನ ಕಾಮಸೂತ್ರ' ಅಂದ್ರೆ ಜನ ಮುಗಿಬಿದ್ದು ನೋಡುವುದಿಲ್ಲವೇ. ಹೌದು ಅಲ್ಲಿನ ಪರಿಮಳ ಚಿತ್ರಮಂದಿರಕ್ಕೆ ಅಪ್ಪಳಿಸುತ್ತಿದೆ ಹಿಂದಿಯ 'ವಾತ್ಸಾಯನ ಕಾಮಸೂತ್ರ 2' ಚಿತ್ರ.

Movie Vatsyayana Kamasutra 2 releases on 6th February

ಬೆಂಗಳೂರಿನ ಕೋಕಿಲ, ನರೇಂದ್ರ, ಗುರುಸಿದ್ದೇಶ್ವರ ಚಿತ್ರಮಂದಿರಗಳು ಸೇರಿದಂತೆ ಮೈಸೂರಿನ ಸ್ಟರ್ಲಿಂಗ್, ಬಾಲಾಜಿ, ರತ್ನಮಹಲ್ (ಬನ್ನೂರು), ನ್ಯೂಚಿತ್ರ (ಮಂಗಳೂರು) ಹಾಗೂ ನಟರಾಜ (ಮುಳಬಾಗಿಲು) ಚಿತ್ರಮಂದಿರಗಳಲ್ಲಿ 'ಕಾಮಸೂತ್ರ' ನೋಡಬಹುದು.

ಶುಕ್ರವಾರದಿಂದ (ಫೆ.6) ಕಾಮಸೂತ್ರ ಅಮೋಘ ಆಟ ಶುರು. ಸಂಜಯ್ ಖಂಡೇಲ್ ವಾಲಾ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಬಾಬಾ ಜಾಗೀರ್ ದಾರ್ ಹಾಗೂ ಸಂಜಯ್ ಖಂಡೇಲ್ ವಾಲಾ ಅಭಿನಯಿಸಿದ್ದಾರೆ.

ಈ ಚಿತ್ರದ ವಿಶೇಷವೇನೆಂದರೆ ಸೆನ್ಸಾರ್ ಗೆ ಕಳುಹಿಸಿದ ಒಂಬತ್ತು ತಿಂಗಳ ಬಳಿಕ ಕ್ಲಿಯರೆನ್ಸ್ ಪಡೆದಿರುವುದು. ಕಡೆಗೆ 'ಎ' ಸರ್ಟಿಫಿಕೇಟ್ ನೊಂದಿಗೆ ತೆರೆಕಾಣುತ್ತಿದೆ. 'ಕಾಮಸೂತ್ರ' ಎಂಬ ಶೀರ್ಷಿಕೆಯನ್ನು ಯಾವುದೇ ಚಿತ್ರಕ್ಕೆ ನೀಡಲು ಸೆನ್ಸಾರ್ ಸುತಾರಾಂ ಒಪ್ಪಲ್ಲ.

ಆದರೆ ಕಾಮಸೂತ್ರ ಎಂಬುದು ಹಿಂದೂ ಪುರಾಣಗಳ ಒಂದು ಭಾಗವಾಗಿದೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಲೈಂಗಿಕ ಶಿಕ್ಷಣ ಸಿಕ್ಕಂತಾಗುತ್ತದೆ ಎಂದು ಸೆನ್ಸಾರ್ ಮಂಡಳಿಗೆ ನಿರ್ದೇಶಕರು ತಿಳಿಸಿದ್ದರು. ಆದರೂ ಸೆನ್ಸಾರ್ ಇದೊಂದು ಅಶ್ಲೀಲ ಚಿತ್ರ ಎಂಬ ಕಾರಣಕ್ಕೆ ಅನುಮತಿ ನೀಡಿರಲಿಲ್ಲ.

English summary
Hindi movie Vatsyayana Kamasutra Part II release on 6th February in Bengaluru, Mysure and many parts of Karnataka. The movie is being directed by Sanjay Khandelwal.
Please Wait while comments are loading...

Kannada Photos

Go to : More Photos