twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಪ್ರೇಮಿ ಗುರುದತ್, ಮಧುರ ನೆನಪು

    By ಕುಮುದವಲ್ಲಿ ಅರುಣ್ ಮೂರ್ತಿ, ಬೆಂಗಳೂರು
    |
    <ul id="pagination-digg"><li class="previous"><a href="/bollywood/guru-dutt-born-as-kannadiga-brought-up-as-bengali-075604.html">« Previous</a>

    ದುರಂತಮಯ ವೈಯಕ್ತಿಕ ಜೀವನ ಹೊಂದಿದ್ದ ಗುರುದತ್ ಆ ನೋವನ್ನು ಮರೆಯಲು ಚಿತ್ರ ನಿರ್ಮಾಣ ಹಾಗೂ ನಿರ್ದೇಶನದ ಮೊರೆ ಹೋದ. ತನ್ನ ನೋವು ಹಾಗೂ ಕನಸುಗಳನ್ನು ಚಿತ್ರಗಳ ಮೂಲಕ ಬಿಂಬಿಸಿದ. ಆತ ನಟಿಸಿದ 'ಸಾಹೀಬ್ ಬೀವಿ ಔರ್ ಗುಲಾಮ', 'ಚೌದವೀ ಕಾ ಚಾಂದ್','ಆರ್ ಪಾರ್', 'ಸುಹಾಗನ್' ಇವತ್ತಿಗೂ ಸ್ಮರಣೀಯ. ಆತ ನಟಿಸಿ ನಿರ್ದೇಶಿಸಿದ 'ಕಾಗಜ್ ಕೆ ಫೂಲ್' ಮತ್ತು 'ಪ್ಯಾಸಾ' ಚಿತ್ರಗಳು ಇವತ್ತಿಗೂ ಹಿಂದಿ ಚಿತ್ರರಂಗದ ಮೈಲಿಗಲ್ಲುಗಳು.

    ಪ್ರೇಮದ ನವಿರು ಭಾವನೆಗಳನ್ನು ಸೊಗಸಾಗಿ ಚಿತ್ರೀಕರಿಸುವ ಮೂಲಕ ಹಿಂದಿ ಸಿನಿಮಾಗಳಿಗೆ ಸೂಕ್ಷ್ಮತೆ ತಂದುಕೊಟ್ಟ ಗುರುದತ್ ತಮ್ಮ ಸಮಕಾಲೀನ ನಟ, ನಿರ್ದೇಶಕರನ್ನು ಪ್ರಭಾವಗೊಳಿಸಿದಾತ. ಅತ್ಯಂತ ಬಡತನದಿಂದ ಬಂದಿದ್ದರೂ ಹಿಂದಿ ಚಿತ್ರರಂಗದ ದಂತಕತೆಯಾದಾತ. ವೈಯಕ್ತಿಕ ಜೀವನದ ನೋವು, ವೃತ್ತಿ ಜೀವನದ ಅನಿವಾರ್ಯತೆಗಳು ತಂದುಕೊಟ್ಟ ಆಘಾತ ಮರೆಯಲಾಗದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗ ಗುರುದತ್‌ಗೆ ಕೇವಲ 39 ವರ್ಷ ವಯಸ್ಸು.

    Guru Dutt

    "ಚೌದವೀಕಾ ಚಾಂದ್ ಹೋ..." ಹಾಡನ್ನು ಮೊಟ್ಟ ಮೊದಲ ಬಾರಿಗೆ ದೂರದರ್ಶನದಲ್ಲಿ ನೋಡಿದಾಗ ನನಗೆ 10, 12 ವರ್ಷ. ಅದೇನೋ ಮೊದಲ ನೋಟದಲ್ಲೇ ಪ್ರೇಮ ಹುಟ್ಟುತ್ತೆ ಅನ್ನೋದಾದ್ರೆ ...ನಾನು ಆವತ್ತೇ ಗುರುದತ್ ರನ್ನ ಮನಸಾರೆ ಇಷ್ಟಪಟ್ಟೆ. ಈಗಲೂ ಅವರೇ ನನ್ನ ಮೊದಲ ಪ್ರೇಮಿ. "ಜಾನೆ ಓ ಕೈಸೆ ಲೋಗ್ ಥೆ ಜಿನ್ ಕೆ ಪ್ಯಾರ ಕೊ ಪ್ಯಾರ್ ಮಿಲಾ, ಹಮ್ ನೆ ತೊ ಜಬ್ ಕಲಿಯಾಂ ಮಾಂಗೀ ಕಾಂಟೊಂ ಕಾ ಹಾರ ಮಿಲಾ..' ಎನ್ನುವ ಆ ಹಾಡು ನೋಡಿದಾಗಲೆಲ್ಲಾ...ಛೇ, ನಾನಾದ್ರೂ 'ಮಾಲಾಸಿನ್ಹ ' ಆಗ್ಬಾರದಿತ್ತಾ ಅಂತ ಪರಿತಪಿಸಿದ್ದೂ ಇದೆ.

    ಗುರುದತ್ ನ ಹಣೆಯ ಮೇಲೆ ಮೂಡುವ ನೆರಿಗೆ ನನ್ನ ಅದೆಷ್ಟು ಆಕರ್ಷಿಸಿತ್ತು ಅಂದ್ರೆ...ನಾ ಮದುವೆಯಾಗೋ ಹುಡುಗನ ಹಣೆಯ ಮೇಲೆ ಥೇಟ್ ಹಾಗೇ ನೆರಿಗೆ ಮೂಡಬೇಕು ಅಂತ ದಿನಾ ದೇವರಲ್ಲಿ ಬೇಡಿಕೊಳ್ತಾ ಇದ್ದೆ. ಗುರುದತ್ ಅಮರರಾಗಿದ್ದು ಅಕ್ಟೋಬರ್ 10, 1964.

    ನನ್ನ ಜನ್ಮದಿನ ಅಕ್ಟೋಬರ್ 10 ನಾನು ಗುರುದತ್ ರನ್ನು ಇಷ್ಟಪಡೋಕೆ ಶುರು ಮಾಡಿದಾಗಿನಿಂದ...ಆ ದಿನವನ್ನು ಪ್ರಾರಂಭಿಸೋದೇ ಅವರ ಸ್ಮರಣೆಯೊಂದಿಗೆ ಅಂತಹ ನನ್ನ 'ಗುರುದತ್ ನ ಜನ್ಮದಿನ ಇವತ್ತು ಚಲನಚಿತ್ರರಂಗ ಇರುವವರೆಗೂ...ಇವರಂತಹ ಕಲಾವಿದರು ನಮ್ಮ ಜೊತೆ ಇದ್ದೇ ಇರುತ್ತಾರೆ. (ಕೃಪೆ: ಕುಮುದವಲ್ಲಿ ಫೇಸ್ ಬುಕ್)

    <ul id="pagination-digg"><li class="previous"><a href="/bollywood/guru-dutt-born-as-kannadiga-brought-up-as-bengali-075604.html">« Previous</a>

    English summary
    Bollywood legendary film director, producer and actor Guru Dutt was born in Mysore on 9 July 1925. The actor is most famous for making lyrical and artistic films within the context of popular Hindi cinema of the 1950s. On the occasion of the Birth Anniversary of the Legend we bring to you a series of anecdotes from his life. A write up by Kumudavalli Arun Murthy.
    Tuesday, July 9, 2013, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X