»   » ಮೋದಿ ಈಗ ದೇಶದ ನಾಯಕ, ದೇಶ ತೊರೆದ ಗಾಯಕ

ಮೋದಿ ಈಗ ದೇಶದ ನಾಯಕ, ದೇಶ ತೊರೆದ ಗಾಯಕ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಕಿರಿಕ್ ಖಾ ನ್ ಎಂದೇ ಖ್ಯಾತಿಯಾಗಿರುವ ಕಮಲ್ ಆರ್ ಖಾನ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ. 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗೆದ್ದರೆ ನಾನು ಭಾರತ ತೊರೆಯುತ್ತೇನೆ' ಎಂದಿದ್ದ ಗಾಯಕ ಕಮ್ ನಟ ಕಮಲ್ ಖಾನ್ ಈಗ ನುಡಿದಂತೆ ನಡೆದಿದ್ದಾನೆ ಭಾರತ ತೊರೆದು ದುಬೈ ಕಡೆಗೆ ಮುಖ ಮಾಡಿ ನಿಂತಿದ್ದಾನೆ.

ಬಿಗ್ ಬಾಸ್ 3 ಸ್ಪರ್ಧಿಯಾಗಿ ಕೂಡಾ ಜನರಿಗೆ ಒಂದಷ್ಟು ಮನರಂಜನೆ ಕೊಟ್ಟ ಕಮಲ್ ಖಾನ್, ಅನೇಕ ಬಾರಿ ಟ್ವೀಟ್ ವಾರ್ ಗಳಲ್ಲಿ ತೊಡಗಿದ್ದ. ಕೆಲವು ತಿಂಗಳುಗಳ ಹಿಂದೆ ' ನಾನು ಮೋದಿ ಅವರಿಗೆ ಚಾಲೆಂಜ್ ಮಾಡುತ್ತೇನೆ, ಅವರು ಪಿಎಂ ಆದರೆ, ನಾನು ನನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಕರಣ್ ಜೋಹರ್ ನನ್ನು ಮದುವೆಯಾಗುತ್ತೇನೆ' ಎಂದಿದ್ದ.

ಲೋಕಸಭೆ ಚುನಾವಣೆ 2014ರ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಬಿಜೆಪಿ ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಮಲ್ ಖಾನ್ ಟ್ವೀಟ್ ಗಳಿಗೆ ಬೆಲೆ ಇಲ್ಲದಿದ್ದರೂ ಉಡಾಫೆ ಮಾತುಗಳನ್ನು ಜನ ಗಣನೆಗೆ ತೆಗೆದುಕೊಳ್ಳದಿದ್ದರೂ ಕಮಲ್ ಯಾಕೋ ಈ ಬಾರಿ ತಮ್ಮ ಟ್ವೀಟ್ ಅನ್ನೇ ಸೀರಿಯಸ್ ಆಗಿ ತೆಗೆದುಕೊಂಡು ದೇಶ ತೊರೆದಿದ್ದಾನೆ. ಕಮಲ್ ಖಾನ್ ದೇಶವನ್ನು ಬಿಟ್ಟಾಗಿದೆ ಅದರೆ, ಲಿಂಗ ಪರಿವರ್ತನೆ ಕಥೆ ಏನು? ಮುಂದೆ ಓದಿ...[ಮಹೇಶ್ ಭಟ್ಟರ ಮಗಳೇ ನನ್ನ ಪತ್ನಿ ಕಣ್ರಿ!]

ದೇಶ ತೊರೆದ ಬಾಲಿವುಡ್ ನ ಕಿರಿಕ್ ಖಾನ್
  

ದೇಶ ತೊರೆದ ಬಾಲಿವುಡ್ ನ ಕಿರಿಕ್ ಖಾನ್

'ನಾನು ಮೋದಿ ಅವರಿಗೆ ಚಾಲೆಂಜ್ ಮಾಡುತ್ತೇನೆ, ಅವರು ಪಿಎಂ ಆದರೆ, ನಾನು ನನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಕರಣ್ ಜೋಹರ್ ನನ್ನು ಮದುವೆಯಾಗುತ್ತೇನೆ' ಎಂದಿದ್ದ.

  

ಮೋದಿಗೆ ಗೆಲುವು ನಾನು ದೇಶ ಬಿಟ್ಟೆ

ಮೋದಿಗೆ ಗೆಲುವು ನಾನು ದೇಶ ಬಿಟ್ಟೆ ಎಂದು ಕಮಲ್ ಟ್ವೀಟ್

  

ಕೊಟ್ಟ ವಚನ ಪಾಲಿಸಿದ್ದೇನೆ, ಆದರೆ

ಕೊಟ್ಟ ವಚನ ಪಾಲಿಸಿದ್ದೇನೆ, ಆದರೆ ನನ್ನ ನೆಚ್ಚಿನ ದೇಶವನ್ನು ತೊರೆಯುವುದು ಕಷ್ಟವಾಗುತ್ತಿದೆ

  

ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದ ಕಮಲ್

ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಸೋಲಿನ ಬಗ್ಗೆ ನನ್ನ ಭವಿಷ್ಯ ನಿಜವಾಗಿದೆ.

  

ನನ್ನ ಮೂರನೇ ಭವಿಷ್ಯ ನಿಜವಾಗಿದೆ

ನನ್ನ ಮೂರನೇ ಭವಿಷ್ಯ ನಿಜವಾಗಿದೆ ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ವಿರುದ್ಧ ಸೋಲುಂಟಾಗಿದೆ.

ಕಮಲ್ ಕೂಡಾ ಮುಂಬೈನಲ್ಲಿ ಅಭ್ಯರ್ಥಿಯಾಗಿದ್ದ
  

ಕಮಲ್ ಕೂಡಾ ಮುಂಬೈನಲ್ಲಿ ಅಭ್ಯರ್ಥಿಯಾಗಿದ್ದ

ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕಮಲ್ ರಷಿದ್ ಖಾನ್ ಸೋಲುಂಡಿದ್ದಾನೆ. ಸಮಾಜವಾದಿ ಪಕ್ಷ ಟಿಕೆಟ್ ನೀಡಲು ನಿರಾಕರಿಸಿತ್ತು.

  

ಶಾರುಖ್ ಬಗ್ಗೆ ನನಗೆ ಗೊತ್ತಿಲ್ಲ

ಶಾರುಖ್ ಬಗ್ಗೆ ನನಗೆ ಗೊತ್ತಿಲ್ಲ, ನಾನಂತೂ ದೇಶ ತೊರೆಯುತ್ತಿದ್ದೇನೆ. ಎಂದಿರುವ ಕಮಲ್, ಲಿಂಗ ಪರಿವರ್ತನೆ ಬಗ್ಗೆ ತುಟಿ ಬಿಚ್ಚಿಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟರ್ ಕಮಲ್ ಖಾನ್ ಜತೆ ದುಬೈಗೆ ಪ್ರಯಾಣ ಬೆಳೆಸಿದ್ದಾನೆ.

English summary
"Modi Ji has won and I am leaving India forever as promised," tweeted Kamaal R Khan today. According to his tweets he has already left India to Dubai with Shoaib Akhtar.
Please Wait while comments are loading...

Kannada Photos

Go to : More Photos