»   » ಚಿತ್ರಗಳಲ್ಲಿ ಹಾಟ್ ಬ್ಯೂಟಿಯ ಯೋಗ ಭಂಗಿಗಳು

ಚಿತ್ರಗಳಲ್ಲಿ ಹಾಟ್ ಬ್ಯೂಟಿಯ ಯೋಗ ಭಂಗಿಗಳು

Written by: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಜಗತ್ತಿನ ಕಲರ್ ಫುಲ್ ಬೆಡಗಿ ನರ್ಗೀಸ್ ಫಕ್ರಿ. ತಮ್ಮ ಅಂಕುಡೊಂಕು ದೇಹವನ್ನು ಪ್ರದರ್ಶಿಸುತ್ತಾ ಆಗಾಗ ಕಲಾರಸಿಕರ ಕಣ್ಣುತಂಪು ಮಾಡುತ್ತಿರುವುದು ಗೊತ್ತೇ ಇದೆ. ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮದ ಜೊತೆಗೆ ತಪ್ಪದೆ ಯೋಗಾಭ್ಯಾಸವನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗೆ ಯೋಗ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿ ಯುವಕರ ನಿದ್ದೆಗೆ ತಣ್ಣೀರೆರಚಿದ್ದಾರೆ. ಯೋಗದ ವಿವಿಧ ಭಂಗಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಸೌಂದರ್ಯದ ಗುಟ್ಟನ್ನು ಈ ಮೂಲಕ ನರ್ಗೀಸ್ ಫಕ್ರಿ ರಟ್ಟು ಮಾಡಿದ್ದಾರೆ.

ಈ ಹಿಂದೊಮ್ಮೆ ನರ್ಗೀಸ್ ಫಕ್ರಿ ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಅಂದಚೆಂದವನ್ನು ತೆರೆದಿಟ್ಟಿದ್ದರು. ನರ್ಗೀಸ್ ಹೇಳಿಕೇಳಿ ಮಾಡೆಲ್ ಪ್ರಪಂಚದಿಂದ ಬಂದವರು. ಬಟ್ಟೆ ಹಾಕುವುದಕ್ಕಿಂತಲೂ ಕಳಚುವುದೇ ಇವರಿಗೆ ಸಲೀಸು. 'ರಾಕ್ ಸ್ಟಾರ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ. ಯೋಗಾಭ್ಯಾಸದ ಭಂಗಿಗಳ ಮೇಲೆ ಒಮ್ಮೆ ಕಣ್ಣಾಡಿಸಿ...

ಇನ್ನೂ ಚಂದ್ರಚಕೋರಿ ತರಹ ಕಾಣುವ ತಾರೆ

ಇನ್ನೂ ಚಂದ್ರಚಕೋರಿ ತರಹ ಕಾಣುವ ತಾರೆ

ನರ್ಗೀಸ್ ಫಕ್ರಿ ವಯಸ್ಸು ಮೇಲ್ನೋಟಕ್ಕೆ ಗೊತ್ತಾಗುವುದೇ ಇಲ್ಲ. ವಯಸ್ಸು ಮೂವತ್ತು ಮೂರು ದಾಟಿದ್ದರೂ ಇನ್ನೂ ಚಂದ್ರಚಕೋರಿ ತರಹ ಕಾಣುತ್ತಾರೆ. ಇದಕ್ಕೆಲಾ ಆಕೆಯ ಯೋಗಾಭ್ಯಾಸವೇ ಕಾರಣವಂತೆ.

ರಾಕ್ ಸ್ಟಾರ್ ಬಳಿಕ ಯಾವ ಚಿತ್ರವೂ ಸದ್ದು ಮಾಡಲಿಲ್ಲ

ರಾಕ್ ಸ್ಟಾರ್ ಬಳಿಕ ಯಾವ ಚಿತ್ರವೂ ಸದ್ದು ಮಾಡಲಿಲ್ಲ

'ರಾಕ್ ಸ್ಟಾರ್' ಚಿತ್ರದ ಬಳಿಕ ಬಂದ ಮದ್ರಾಸ್ ಕೆಫೆ ಚಿತ್ರ ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಆ ಬಳಿಕ 'ಪತಾ ಪೋಸ್ಟರ್ ನಿಕ್ಲಾ ಹೀರೋ' ಚಿತ್ರದ ಅತಿಥಿ ಪಾತ್ರ ಪೋಷಿಸಿದರು. ಆ ಚಿತ್ರವೂ ತೋಪಾಗಿದ್ದು ವಿಧಿ ವಿಪರ್ಯಾಸ.

2014ರಲ್ಲಾದರೂ ಅದೃಷ್ಟ ಬದಲಾಗುತ್ತದೆಯೇ?

2014ರಲ್ಲಾದರೂ ಅದೃಷ್ಟ ಬದಲಾಗುತ್ತದೆಯೇ?

ಇನ್ನು 2014ಕ್ಕೆ ಎರಡು ಹೊಸ ಚಿತ್ರಗಳ ಮೂಲಕ ನರ್ಗೀಸ್ ಫಕ್ರಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಒಂದು ಮೆಯಿನ್ ತೇರಾ ಹೀರೋ, ಷೌಕೀನ್ ಎಂಬ ಚಿತ್ರಗಳು.

ಗಾಸಿಪ್ ಸುದ್ದಿಗಳಿಗೂ ನರ್ಗೀಸ್ ಆಹಾರವಾಗಿದ್ದರು

ಗಾಸಿಪ್ ಸುದ್ದಿಗಳಿಗೂ ನರ್ಗೀಸ್ ಆಹಾರವಾಗಿದ್ದರು

ರಾಕ್ ಸ್ಟಾರ್ ಚಿತ್ರದ ಬಳಿಕ ಹಲವು ಗಾಸಿಪ್ ಸುದ್ದಿಗಳಿಗೂ ನರ್ಗೀಸ್ ಆಹಾರವಾಗಿದ್ದರು. ಆ ಚಿತ್ರದ ನಾಯಕ ನಟ ರಣಬೀರ್ ಕಪೂರ್ ಜೊತೆ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ನಮ್ಮಿಬ್ಬರ ಗೆಳೆತನಕ್ಕೆ ಅಪಾರ್ಥ ಬೇಡ

ನಮ್ಮಿಬ್ಬರ ಗೆಳೆತನಕ್ಕೆ ಅಪಾರ್ಥ ಬೇಡ

ಇತ್ತೀಚೆಗೆ ಪತ್ರಿಕೆಯೊಂದರ ಜೊತೆ ಮಾತನಾಡುತ್ತಾ, ರಣಬೀರ್ ಜೊತೆಗೆ ತನಗೆ ಉತ್ತಮ ಸ್ನೇಹಸಂಬಂಧವಿದೆ. ಆದರೆ ನಮ್ಮಿಬ್ಬರ ನಡುವೆ ಪ್ರೀತಿ ಪ್ರೇಮ ಪ್ರಣಯವಂತೂ ಇಲ್ಲ. ನಮ್ಮಿಬ್ಬರ ಗೆಳೆತನವನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದಿದ್ದರು.

ಬೇರೆ ಅರ್ಥ ಅರ್ಥೈಸಿಕೊಳ್ಳುವುದು ಸರಿಯಲ್ಲ

ಬೇರೆ ಅರ್ಥ ಅರ್ಥೈಸಿಕೊಳ್ಳುವುದು ಸರಿಯಲ್ಲ

ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ರಣಬೀರ್ ಗಿಂತಲೂ ಹಾಟ್ ಆಗಿದ್ದ ಅದೆಷ್ಟೋ ಪುರುಷರ ಜೊತೆಗೆ ಕೆಲಸ ಮಾಡಿದ್ದೇನೆ. ಅವರೊಂದಿಗೆ ತುಂಬಾ ಕ್ಲೋಸ್ ಆಗಿದ್ದೆ. ಗ್ಲಾಮರ್ ಫೀಲ್ಡ್ ನಲ್ಲಿ ಇದೆಲ್ಲಾ ಮಾಮೂಲಿ. ಅದನ್ನು ಬೇರೆ ಅರ್ಥ ಅರ್ಥೈಸಿಕೊಳ್ಳುವುದು ಸರಿಯಲ್ಲ.

ಇದುವರೆಗೂ ಯಾರೊಂದಿಗೂ ಮಲಗಿಲ್ಲ

ಇದುವರೆಗೂ ಯಾರೊಂದಿಗೂ ಮಲಗಿಲ್ಲ

ಇದುವರೆಗೂ ಯಾರೊಂದಿಗೂ ಸಂಬಂಧ ಇಟ್ಟುಕೊಂಡಿಲ್ಲ. ಐ ಮೀನ್ ಯಾರೊಂದಿಗೂ ಮಲಗಿಲ್ಲ (ದೈಹಿಕ ಸಂಪರ್ಕ) ಎಂದು ನಿರ್ಭಿಡೆಯಿಂದ ಹೇಳಿದ್ದಾರೆ ನರ್ಗೀಸ್.

ಬಾಲಿವುಡ್ ನಲ್ಲಿ ನೆಲೆಕಂಡುಕೊಳ್ಳಲು ಕನವರಿಕೆ

ಬಾಲಿವುಡ್ ನಲ್ಲಿ ನೆಲೆಕಂಡುಕೊಳ್ಳಲು ಕನವರಿಕೆ

ನರ್ಗೀಸ್ ಫಕ್ರಿ ಪಾಕಿಸ್ತಾನಿ ಮೂಲದ ಅಮೆರಿಕನ್ ರೂಪದರ್ಶಿಯಾದರೂ ಬಾಲಿವುಡ್ ನಲ್ಲಿ ನೆಲೆಕಂಡುಕೊಳ್ಳಬೇಕೆಂದು ಕನವರಿಸುತ್ತಿರುವ ತಾರೆ. ಇದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುತ್ತಲೇ ಇದ್ದಾರೆ. ಈಗ ಯೋಗಾಭ್ಯಾಸದ ಒಂದು ಪರ್ವ ಅಷ್ಟೆ.

ಕನ್ನಡದಲ್ಲೂ ಅಭಿನಯಿಸ್ತೀನಿ ಎಂದಿದ್ದರು

ಕನ್ನಡದಲ್ಲೂ ಅಭಿನಯಿಸ್ತೀನಿ ಎಂದಿದ್ದರು

ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತೀರಾ ಎಂದು ಕೇಳಿದ್ದಕ್ಕೆ, "ಖಂಡಿತ ಅಭಿನಯಿಸಬೇಕು ಎಂಬ ಆಸೆ ತಮಗೂ ಇದೆ. ಆದರೆ ತಮಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು ದೊಡ್ಡ ಸಮಸ್ಯೆ" ಎಂದಿದ್ದಾರೆ. ತಾನು ಇನ್ನೂ ಹಿಂದಿ ಭಾಷೆಯನ್ನೇ ಸರಿಯಾಗಿ ಕಲಿತಿಲ್ಲ ಎನ್ನುತ್ತಾರೆ ನರ್ಗೀಸ್.

English summary
Bollywood hot beauty Nargis Fakhri shows off yoga moves. She is an American Actress and Model, she is Making step into Bollywood with Rockstar Movie, Pairing with Ranbir Kapoor.
Please Wait while comments are loading...

Kannada Photos

Go to : More Photos