»   » ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್

ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಲ್ಮಾನ್ ಖಾನ್ ತಂದೆ ಸಲೀಂ ಅವರ ದತ್ತು ಪುತ್ರಿ ಅರ್ಪಿತಾ ಎಂದರೆ ಸಲ್ಮಾನ್ ಗೆ ಎಲ್ಲಿಲ್ಲಿದ ಅಕ್ಕರೆ. ತಂಗಿಗಾಗಿ ವೈಯಕ್ತಿಕ ರಾಗ, ದ್ವೇಷವನ್ನು ಮರೆತು ಆಕೆಯ ಸುಖ ಸಂತೋಷಕ್ಕಾಗಿ ಸಲ್ಲೂ ಎಂಥಾ ತ್ಯಾಗಕ್ಕೂ ಸಿದ್ಧನಾಗಿ ನಿಂತಿರುವುದನ್ನು ಕಂಡ ಕಿಂಗ್ ಖಾನ್ ಮನಸು ಕರಗಿದೆ. ಸಲ್ಲೂ ತಂಗಿ ಅರ್ಪಿತಾಳನ್ನು ಹರಸಲು ಬಂದಿದ್ದಾನೆ.

ಅರ್ಪಿತಾ ಖಾನ್ ಅವರ ಮದುವೆ ಸಂಗೀತ್ ಮಹೋತ್ಸವಕ್ಕೂ ಮುನ್ನ ಅರ್ಪಿತಾಳಿಗೆ ಬಾಲಿವುಡ್ ನ 'ಬಿಗ್ ಬ್ರದರ್' ಗಳ ಸಿಹಿ ಮುತ್ತು ಸಿಕ್ಕಿದೆ. ಎಡಬದಿಯಲ್ಲಿ ಕಿಂಗ್ ಖಾನ್ ಶಾರುಖ್ ಹಾಗೂ ಬಲಬದಿಯಲ್ಲಿ ಸಲ್ಮಾನ್ ಖಾನ್ ನಿಂತು ಅರ್ಪಿತಾ ತಲೆಗೆ ಮುತ್ತಿಟ್ಟು ತಮ್ಮ ತಂಗಿಗೆ ಶುಭ ಹಾರೈಸಿದ್ದಾರೆ.

ಸ್ವತಃ ಅರ್ಪಿತಾ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆ ಮೂಲಕ ಕೆಲ ಚಿತ್ರಗಳನ್ನು ಹೊರಹಾಕಿದ್ದಾರೆ. ಮಿಕ್ಕಂತೆ ಸಂಗೀತ್ ಸಮಾರಂಭದ ಚಿತ್ರಗಳು ಲಭ್ಯವಿಲ್ಲ. ಶಾರುಖ್-ಅರ್ಪಿತಾ ಹಾಗೂ ಸಲ್ಮಾನ್ ಇರುವ ಅವಿಸ್ಮರಣೀಯ ಚಿತ್ರವನ್ನು ನಟ ಅತುಲ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.

PICTURE PERFECT: Shahrukh And Salman Bless Arpita On Her Sangeet Ceremony

ಈ ಚಿತ್ರ ನೋಡಿದ ಹಲವಾರು ಮಂದಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶಾರುಖ್ ಹಾಗೂ ಸಲ್ಮಾನ್ ನಡುವೆ ರಾಗದ್ವೇಷಗಳ ಯಜ್ಞ ನಡೆದಿತ್ತು ದ್ವೇಷದ ಬೆಂಕಿಗೆ ತುಪ್ಪ ಸುರಿಯಲು ಇದೇ ಸಕಾಲ ಎಂದು ತಿಳಿದಿದ್ದವರೇ ಶಾಕ್ ಆಗಿದೆ. ತಂಗಿ ಅರ್ಪಿತಾಳಿಗಾಗಿ ಬಾಲಿವುಡ್ ನ ದಿಗ್ಗಜರು ಒಂದಾಗಿದ್ದಾರೆ.

ಹೈದರಾಬಾದಿನ ಫಲಾಕ್ನೂಮ ಪ್ಯಾಲೇಸ್ ನಲ್ಲಿ ನ.18ರಂದು ಅರ್ಪಿತಾ ಖಾನ್ ಹಾಗೂ ಆಕೆ ಗೆಳೆಯ ಆಯುಷ್ ಶರ್ಮ ಅವರ ಮದುವೆ ನೆರವೇರಲಿದೆ. ಸದ್ಯಕ್ಕೆ ಮದುವೆ ಬಜೆಟ್ 1 ಕೋಟಿ ರು ಎಂದು ನಿಗದಿಪಡಿಸಲಾಗಿದೆ. ನ.21 ರಂದು ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಪ್ರೀತಿಯ ತಂಗಿ ಅರ್ಪಿತಾ ಖಾನ್ ಅವರ ಮದುವೆ ಸಂಭ್ರಮದಲ್ಲಿ ಇಡೀ ಹಿಂದಿ ಚಿತ್ರರಂಗವೇ ಮುಳುಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರಿಗೆ ಮದುವೆಗೆ ಆಹ್ವಾನ ನೀಡಿರುವ ಸಲ್ಮಾನ್ ಖಾನ್ ಅವರು ಹೈದರಾಬಾದ್ ನಲ್ಲಿದ್ದಾರೆ.

English summary
The picture shared by none other than Salman Khan's sister Arpita Khan in her Instagram account could make many go happy. Arpita Khan's Sangeet ceremony was attended by many B-Town celebs.
Please Wait while comments are loading...

Kannada Photos

Go to : More Photos