»   » ದುಬೈನಲ್ಲಿ ನಟಿ ಪ್ರಿಯಾಮಣಿ ಕ್ಯೂಟ್ ಜೊತೆ ಜೂಟ್

ದುಬೈನಲ್ಲಿ ನಟಿ ಪ್ರಿಯಾಮಣಿ ಕ್ಯೂಟ್ ಜೊತೆ ಜೂಟ್

Written by: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ 'ಅಂಬರೀಶ' ಚಿತ್ರದಲ್ಲಿ ಅಭಿನಯಿಸುತ್ತಿರುವ ಸೌತ್ ಇಂಡಿಯನ್ ಬ್ಯೂಟಿ ಪ್ರಿಯಾಮಣಿ ಸದ್ಯಕ್ಕೆ ದುಬೈನಲ್ಲಿ ಹಾಯಾಗಿ ಕಾಲ ಕಳಿಯುತ್ತಿದ್ದಾರೆ. ಆದರೆ ಯಾವುದೇ ಚಿತ್ರದ ಶೂಟಿಂಗ್ ನಿಮಿತ್ತ ಪ್ರಿಯಾಮಣಿ ಅಲ್ಲಿಗೆ ಹೋಗಿಲ್ಲ. ಇನ್ಯಾಕೆ ಹೋದರೋ...

ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರು ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಸ್ವಲ್ಪ ಸಮಯ ಸಿಕ್ಕಿದ್ದೇ ತಡ ಕೋತಿ ಕೋಳಿ ಆಟ ಶುರುವಚ್ಚಿಕೊಂಡಿದ್ದಾರೆ. ಅಂದರೆ ಅಲ್ಲಿನ ಮೂಕ ಪ್ರಾಣಿಗಳ ಜೊತೆ ಕಾಲ ಕಳೆದು ತಮ್ಮ ಪ್ರೀತಿ ವಾತ್ಸಲ್ಯವನ್ನು ಹೊರಹಾಕಿದರು. [ಮದಿರೆಯ ಜೊತೆಗೆ ಮಾದಕ ತಾರೆ ಪ್ರಿಯಾಮಣಿ]

ದುಬೈನ ಪ್ರಾಣಿ ದಯಾ ಸಂಘವೊಂದಕ್ಕೆ ಭೇಟಿ ನೀಡಿ ಅಲ್ಲಿನ ಪ್ರಾಣಿಗಳ ಜೊತೆ ಸ್ವಲ್ಪ ಸಮಯ ಕಳೆದಿದ್ದಾರೆ. ಜೊತೆಗೆ ಒಂದಷ್ಟು ಫೋಟೋಗಳನ್ನು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿನ ಕ್ಯೂಟ್ ಪ್ರಾಣಿಗಳ ಜೊತೆ ಜೂಟಾಟ ಆಡಿದ ಚಿತ್ರಗಳು ಸ್ಲೈಡ್ ನಲ್ಲಿ ನೋಡಿ.

ಮೂಕ ಪ್ರಾಣಿಗಳ ಜೊತೆ ಅಮೂಲ್ಯ ಸಮಯ

ಮೂಕ ಪ್ರಾಣಿಗಳ ಜೊತೆ ಅಮೂಲ್ಯ ಸಮಯ

ದುಬೈನ ತನ್ನ ಸ್ನೇಹಿತರಿಗೆ ಸಂಬಂಧಿಸಿದ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿನ ಮೂಕ ಜೀವಿಗಳ ಜೊತೆ ತಮ್ಮ ಅಮೂಲ್ಯ ಸಮಯವನ್ನು ಕಳೆದರು ಪ್ರಿಯಾಮಣಿ.

ಪ್ರಿಯಾ ಕೋಮಲ ಕೈ ಮೇಲೆ ಮಂಗಟ್ಟೆ

ಪ್ರಿಯಾ ಕೋಮಲ ಕೈ ಮೇಲೆ ಮಂಗಟ್ಟೆ

'ಮಂಗಟ್ಟೆ' (Horn Bill) ಹಕ್ಕಿಯನ್ನು ತಮ್ಮ ಕೋಮಲವಾದ ಕೈ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದರು. ಅದರ ಉದ್ದದ ಕೊಕ್ಕು ಹತ್ತಿರದಿಂದ ಕಂಡು ಬೆರಗಾದರು.

ತುಂಬಾ ರಿಲ್ಯಾಕ್ಸ್ ಆದರಂತೆ ಪ್ರಿಯಾಮಣಿ

ತುಂಬಾ ರಿಲ್ಯಾಕ್ಸ್ ಆದರಂತೆ ಪ್ರಿಯಾಮಣಿ

ಈ ರೀತಿಯಾಗಿ ಮೂಕ ಜೀವಿಗಳ ಜೊತೆ ಕಳೆಯುವುದರಿಂದ ಮನಸ್ಸಿಗೆ ಎಷ್ಟೋ ಹಾಯಿ ಎನ್ನಿಸುತ್ತದೆ. ತುಂಬಾ ರಿಲ್ಯಾಕ್ಸ್ ಆಗಿದ್ದಾಗಿ ಪ್ರಿಯಾಮಣಿ ಹೇಳಿದ್ದಾರೆ.

ಕ್ಯೂಟ್ ಗೆಳೆಯರನ್ನು ಪರಿಚಯಿಸಿದವರಿಗೆ ಥ್ಯಾಂಕ್ಸ್

ಕ್ಯೂಟ್ ಗೆಳೆಯರನ್ನು ಪರಿಚಯಿಸಿದವರಿಗೆ ಥ್ಯಾಂಕ್ಸ್

ಈ ರೀತಿಯ ಅದೆಷ್ಟೋ ಮೂಕ ಜೀವಿಗಳನ್ನು ಸಾಕಿ ಸಲಹುತ್ತಿರುವ ತನ್ನ ಫ್ರೆಂಡ್ ಅವುಗಳ ಜೊತೆ ಕಳೆಯುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಂಬರೀಶ ಚಿತ್ರದಲ್ಲಿ ಸ್ಮಿತಾ ಪಾತ್ರದಲ್ಲಿ ಪ್ರಿಯಾ

ಅಂಬರೀಶ ಚಿತ್ರದಲ್ಲಿ ಸ್ಮಿತಾ ಪಾತ್ರದಲ್ಲಿ ಪ್ರಿಯಾ

ಇನ್ನು 'ಅಂಬರೀಶ' ಚಿತ್ರದಲ್ಲಿ ಪ್ರಿಯಾಮಣಿ ಅವರ ಪಾತ್ರದ ಹೆಸರು ಸ್ಮಿತಾ. ಲಕ್ಷ್ಮಿ ಚಿತ್ರದ ಬಳಿಕ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಪ್ರಿಯಾಮಣಿ.

English summary
South lass Priyamani is presently in Dubai. This time the actress is not in Dubai for any movie's shooting or award ceremony, but she is on a pleasant holiday weekend. The actress, who posted her schedule on her micro-blogging site Twitter was seen having a gala time with animals in Dubai.
Please Wait while comments are loading...

Kannada Photos

Go to : More Photos