ರಾಮಲೀಲಾ ಜೋಡಿ ದೀಪಿಕಾ ರಣವೀರ್ ಕೃಷ್ಣಲೀಲೆ

Posted by:

ರಾಮಲೀಲಾ ಚಿತ್ರ ನಾಯಕ ರಣವೀರ್ ಸಿಂಗ್ ಹಾಗೂ ನಾಯಕಿ ದೀಪಿಕಾ ಪಡುಕೋಣೆ ನಡುವೆ ಏನೋ ನಡೆದಿದೆ ಎಂದು ಗುಸು ಗುಸು ಪಿಸು ಪಿಸು ಸುದ್ದಿ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದು ಹಳೆ ಸುದ್ದಿ. ಇತ್ತೀಚಿನ ಗಾಳಿ ವರದಿ ಪ್ರಕಾರ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ರಣವೀರ್ ಸಿಂಗ್ ತನ್ನ ಗರ್ಲ್ ಫ್ರೆಂಡ್ ದೀಪಿಕಾ ನೋಡಲು ಕುಂಟುತ್ತಾ ಹೋಗಿದ್ದನಂತೆ.

'ಗಂಧೆ' ಚಿತ್ರದಲ್ಲಿ ಅರ್ಜುನ್ ಕಪೂರ್ ಹಾಗೂ ಪ್ರಿಯಾಂಕಾ ಛೋಪ್ರಾ ಜೊತೆ ಕೋಲ್ಕತ್ತಾದಲ್ಲಿ ಚಿತ್ರೀಕರಣದಲ್ಲಿರುವಾಗಲೇ ಕಾಲಿಗೆ ರಣವೀರ್ ಪೆಟ್ಟು ಮಾಡಿಕೊಂಡಿದ್ದ. ತಕ್ಷಣ ಮುಂಬೈಗೆ ತೆರಳಿದ ರಣವೀರ್ ವಿಶ್ರಾಂತಿ ಪಡೆಯುವ ಬದಲು ದೀಪಿಕಾ ಶೂಟಿಂಗ್ ಸ್ಪಾಟ್ ಗೆ ಹಾಜರಾದನಂತೆ. ಇವರಿಬ್ಬರ ಪ್ರೇಮ ಸಲ್ಲಾಪ ನೋಡಿ ಶೂಟಿಂಗ್ ನಡೆಯುವುದೇ ಅನುಮಾನ ಎಂದು ಚಿತ್ರತಂಡ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದು ಸುಳ್ಳಲ್ಲ.

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ದೀಪಿಕಾ ಕೊನೆಗೆ ರಣವೀರ್ ಗೆ ತಿಳಿ ಹೇಳಿ ಹೋಟೆಲ್ ರೂಮ್ ನಲ್ಲಿ ಕಾದಿರು ಬರ್ತೀನಿ ಅಂದಳಂತೆ. ರಣವೀರ್ ಹೋಟೆಲ್ ನಲ್ಲಿ ಕಾಯುತ್ತಾ ಕುಳಿತ್ತಿದ್ದನಂತೆ.

ರಾಮ್ ಲೀಲಾ ಚಿತ್ರದ ಪ್ರಣಯ ದೃಶ್ಯಗಳಲ್ಲಿ ಉತ್ತಮ ಹೊಂದಾಣಿಕೆ ತೋರಿರುವ ಈ ಜೋಡಿ ಆಧುನಿಕ ರೋಮಿಯೋ, ಜ್ಯೂಲಿಯಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ಈ ಹೊಸ ಜೋಡಿ ಶೂಟಿಂಗ್ ತಾಣದಲ್ಲಿ ಕಂಡಾಗ ಸಿಕ್ಕ ಚಿತ್ರಗಳು ಇಲ್ಲಿದೆ ನೋಡಿ ಆನಂದಿಸಿ...

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ಈ ಚಿತ್ರ ಖಂಡಿತಾ ಶೂಟಿಂಗ್ ಸ್ಪಾಟ್ ನಲ್ಲಿ ತೆಗೆದಿದ್ದಲ್ಲ. ಭಾರತದಿಂದ ಆಚೆ ಎಲ್ಲೋ ಶೂಟಿಂಗ್ ಗೆ ಹೋಗಿದ್ದಾಗ ಹೋಟೆಲ್ ರೂಮ್ ಬಳಿ ತೆಗೆದ ಚಿತ್ರ

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ರಣವೀರ್ ಸಿಂಗ್ ಜೊತೆಯಲ್ಲಿ ದೀಪಿಕಾ ಬೋಟ್ ರೈಡ್

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ಸಂಜಯ್ ಲೀಲಾ ಬನ್ಸಾಲಿ ಅವರ ಮಹತ್ವಾಕಾಂಕ್ಷೆ ಚಿತ್ರ ರಾಮ್ ಲೀಲಾದ ಶೂಟಿಂಗ್ ನಲ್ಲಿ ದೀಪಿಕಾ ಜೊತೆ ರಣವೀರ್ ಸಿಂಗ್

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ದೀಪಿಕಾಗೆ ಎಷ್ಟನೇ ಮುತ್ತೋ ಲೆಕ್ಕ ಇಟ್ಟವರು ಯಾರು?

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ಮಾಧ್ಯಮದವರ ಕಣ್ಣಿಗೆ ಮೊದಮೊದಲು ಇಬ್ಬರು ಕಾಣಿಸಿಕೊಂಡಾಗ ತೆಗೆದ ಚಿತ್ರ

ದೀಪಿಕಾ-ರಣವೀರ್ ಪ್ರಣಯ ಚಿತ್ರಗಳು

ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ದೀಪಿಕಾ ಹಾಗೂ ರಣವೀರ್

Read more about: deepika padukone, ranveer singh, bollywood, gossip, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಬಾಲಿವುಡ್, ಗಾಸಿಪ್

English summary
The chemistry between the Ram Leela co-stars Ranveer Singh and Deepika Padukone is the talk of the town off late. The latest rumour about their alleged link up is that Ranveer Singh, with an injured leg specially went to see his lady love Deepika in Wai.

Kannada Photos

Go to : More Photos