ಕಪ್ಪು ದಿರಿಸಿನಲ್ಲಿ ಕರಾವಳಿ ಸುಂದರಿ ಐಶ್

Posted by:

ಐಶ್ವರ್ಯ ರೈ ತನ್ನ ಮಾಡೆಲಿಂಗ್ ದಿನಗಳಿಂದಲೂ ತನ್ನ ಅಂಗ ಸೌಷ್ಟವ ಕಾಯ್ದುಕೊಂಡಿದ್ದಲ್ಲದೆ, ಉತ್ತಮ ಫೋಟೋಜೆನಿಕ್ ರೂಪದರ್ಶಿಯಾಗಿ ಬೆಳದವರು. ಸೌಂದರ್ಯಕ್ಕೆ ಅನ್ವರ್ಥ ನಾಮದಂತಿರುವ ಐಶ್ವರ್ಯಾಗೆ ಬೆಕ್ಕಿನ ಕಣ್ಣುಗಳು ಇನ್ನಷ್ಟು ಸೊಗಸು ಹೆಚ್ಚಿಸಿದೆ.

2010ರಲ್ಲಿ ಗುಜಾರಿಶ್ ಚಿತ್ರದ ನಂತರ ಆಕೆ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ತಾಯ್ತನದ ಸುಖ ಅನುಭವಿಸಲು ಅವಶ್ಯವಾದ ಬ್ರೇಕ್ ಪಡೆದಿದ್ದಾಳೆ. ಆದರೆ, ಐಶ್ ಸ್ಟಾರ್ ಗಿರಿ ಕಮ್ಮಿಯಾಗಿಲ್ಲ. ಜ್ಯುವೆಲ್ಲರಿ ಕಂಪನಿಗಳಿಗೆ ಈಗಲೂ ಐಶ್ ಫೇವರೀಟ್. ಖ್ಯಾತ ಛಾಯಾಗ್ರಹಕರಿಗೆ ಐಶ್ ಫೋಟೋ ತೆಗೆಯುವುದೇ ಆನಂದ.

ಐಶ್ವರ್ಯಾ ರೈಗೆ ಕಪ್ಪು ಬಣ್ಣದ ದಿರಿಸು ಇಷ್ಟವೋ ಅಥವಾ ಆಕೆಗೆ ಅದು ಅಷ್ಟು ಚೆನ್ನಾಗಿ ಒಪ್ಪುತ್ತದೆ ಎಂದು ಎಲ್ಲರೂ ಇಷ್ಟಪಡುತ್ತಾರೋ ಗೊತ್ತಿಲ್ಲ. ಆದರೆ, ಐಶ್ ಕಪ್ಪು ದಿರಿಸಿನಲ್ಲಿ ಕಾಣುವಷ್ಟು ಸುಂದರವಾಗಿ ಮತ್ತೊಂದು ಬಣ್ಣದ ವಸ್ತ್ರದಲ್ಲಿ ಕಾಣಿಸುವುದಿಲ್ಲ ಎಂದು ಖ್ಯಾತ ವಸ್ತ್ರ ವಿನ್ಯಾಸಗಾರರು ಹೇಳುತ್ತಾರೆ.

ಕಪ್ಪು ಬಣ್ಣದ ದಿರಿಸಿನಲ್ಲಿ ಕರ್ನಾಟಕದ ಕರಾವಳಿಯ ಶ್ವೇತ ಸುಂದರಿ ಐಶ್ವರ್ಯಾ ರೈ ಮಿಂಚಿದ ಚಿತ್ರಗಳನ್ನು ಒಟ್ಟು ಮಾಡಿ ಆಕೆ ಅಭಿಮಾನಿಗಳಿಗೆ ತಲುಪಿಸುವ ಕೆಲಸ ನಮ್ಮದು.. ಚಿತ್ರ ಸರಣಿಯಲ್ಲಿ ಐಶ್ ಸುಂದರ ಚಿತ್ರಗಳ ಜೊತೆ ಕೆಲ ಸಂಗತಿಗಳು ನಿಮ್ಮ ಮುಂದೆ...

ಕಪ್ಪು ಡ್ರೆಸ್ ನಲ್ಲಿ ಐಶ್

ಐಶ್ವರ್ಯಾ ರೈ ಶಾಸ್ತ್ರೀಯ ನೃತ್ಯಗಾರ್ತಿ ಹೇಗಿದೆ ನನ್ನ ಪೋಸ್ ಎನ್ನುವಂತಿದೆ

ಹಾಲಿವುಡ್ ನಲ್ಲಿ ಐಶ್

ಹಾಲಿವುಡ್ ನ ಟ್ರಾಯ್ ಚಿತ್ರದಲ್ಲಿ ಬ್ರಾಡ್ ಪಿಟ್ ಜೊತೆ ನಟಿಸುವ ಅವಕಾಶವನ್ನು ಐಶ್ವರ್ಯಾ ರೈ ಎಡಗೈಯಿಂದ ಪಕ್ಕಕ್ಕೆ ಸರಿಸಿದ್ದರು. ಮುಂದೆ ಪಿಂಕ್ ಪ್ಲಾಂಥರ್ ಚಿತ್ರದಲ್ಲಿ ನಟಿಸಿದರು.

ಬಹುಭಾಷಾ ಕೋವಿದೆ

ಐಶ್ವರ್ಯಾ, ಇಂಗ್ಲೀಷ್, ಹಿಂದಿ, ಕನ್ನಡ, ತುಳು, ತಮಿಳು ಹಾಗೂ ಉರ್ದು ಮಾತನಾಡಬಲ್ಲರು

ಬ್ರ್ಯಾಂಡ್ ಗರ್ಲ್

ಮಧ್ಯ ಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾಕ್ಕೆ ಕೋಕಾ ಕೋಲಾ ಬ್ರ್ಯಾಂಡ್ ಗರ್ಲ್ ಆಗಿದ್ದರು

ಕಪ್ಪು ಡ್ರೆಸ್ ನಲ್ಲಿ ಐಶ್

ಕಿರುತೆರೆಯಲ್ಲಿ ಡಬ್ಬಿಂಗ್ ಕಲಾವಿದೆ ಕೆಲಸಕ್ಕೆ ಅರ್ಜಿ ಹಾಕಿ ಫೇಲ್ ಆಗಿದ್ದರು

ವಿಶ್ವ ಖ್ಯಾತಿ ಪಡೆದ ಐಶ್

ಮೇಡಂ ಟುಸ್ಸಾಡ್ ಖ್ಯಾತ ಮ್ಯೂಸಿಯಂನಲ್ಲಿ ತನ್ನ ವ್ಯಾಕ್ಸ್ ಪ್ರತಿಮೆ ಹೊಂದಿದ ಮೊದಲ ಭಾರತೀಯ ನಟಿ

ಭೋಜನ ಕೂಟ ಮಿಸ್

ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರಿಂದ ಭೋಜನ ಕೂಟದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿತ್ತು. ಆದರೆ, ಕಾರಣಾಂತರದಿಂದ ಪಾಲ್ಗೊಳ್ಳಲು ಆಗಿರಲಿಲ್ಲ.

2004ರಲ್ಲಿ ಟೈಮ್ಸ್ ಪಟ್ಟಿಯಲ್ಲಿ

2004ರಲ್ಲಿ ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಐಶ್ವರ್ಯಾ ರೈ ಕೂಡಾ ಒಬ್ಬರು ಎಂದು ಟೈಮ್ಸ್ ಮ್ಯಾಗಜೀನ್ ಹೇಳಿದೆ.

ಐಶ್ ಅಭಿ ಜೋಡಿ

ಪತಿ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್

ಕಪ್ಪು ಡ್ರೆಸ್ ನಲ್ಲಿ ಐಶ್

ಕಪ್ಪು ಡ್ರೆಸ್ ನಲ್ಲಿ ಐಶ್

ಜ್ಯೂರಿಯಾಗಿ

ಕೇನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಜ್ಯೂರಿಯಾಗಿ ಆಯ್ಕೆಯಾದ ಮೊದಲ ಭಾರತೀಯ ನಟಿ

ಕಪ್ಪು ಡ್ರೆಸ್ ನಲ್ಲಿ ಐಶ್

9ನೇ ತರಗತಿಯಲ್ಲಿರುವಾಗಲೇ ಕ್ಯಾಮ್ಲಿನ್ ಪೆನ್ಸಿಲ್ ಗಾಗಿ ಜಾಹೀರಾತಿನಲ್ಲಿ ನಟನೆ

ಕಪ್ಪು ಡ್ರೆಸ್ ನಲ್ಲಿ ಐಶ್

ಐಶ್ವರ್ಯಾ ರೈ ಗೂಗಲ್ ನಲ್ಲಿ ಸರ್ಚ್ ನಲ್ಲಿ ಸದಾ ಟಾಪ್ ಇರುವಂತೆ ಆಕೆ ಹೆಸರಿನಲ್ಲಿ 17000 ವೆಬ್ ಸೈಟ್ ಕಾಣಸಿಗುತ್ತದೆ

ಕಪ್ಪು ಡ್ರೆಸ್ ನಲ್ಲಿ ಐಶ್

ಮಹಿಮಾ ಚೌಧುರಿ ಜೊತೆ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ನಂತರ ಕೋಕಾ ಕೋಲಾಗೆ ಹಾರಿದ ಐಶ್

ಕಪ್ಪು ಡ್ರೆಸ್ ನಲ್ಲಿ ಐಶ್

ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ಐಶ್ ಗೆ ಇಷ್ಟವಾದ ಸಬ್ಜೆಕ್ಟ್

ಕಪ್ಪು ಡ್ರೆಸ್ ನಲ್ಲಿ ಐಶ್

ಕುಚ್ ಕುಚ್ ಹೋತಾ ಹೇ, ಮುನ್ನಭಾಯಿ ಎಂಬಿಬಿಎಸ್, ಬಾಜಿರಾವ್ ಮಸ್ತಾನಿ ಚಿತ್ರಗಳಲ್ಲಿ ನಟಿಸಲು ಐಶ್ ನಿರಾಕರಣೆ

See next photo feature article

ಕಪ್ಪು ಡ್ರೆಸ್ ನಲ್ಲಿ ಐಶ್

ಗೆಳೆಯ ವಿವೇಕ್ ಓಬೆರಾಯ್ ಕೊಟ್ಟ ಮುದ್ದಾದ ನಾಯಿ ಮರಿಗೆ ಸನ್ ಶೈನ್ ಎಂದು ಐಶ್ ಹೆಸರಿಟ್ಟಿದ್ದಳು

Read more about: aishwarya rai, ಐಶ್ವರ್ಯ ರೈ, ಬಾಲಿವುಡ್, bollywood

English summary
Aishwarya Rai Bachchan is one if the most photographed women in India. She has not worked in any movie after Guzaarish (2010) but her stardom remains the same. Here are some rare and unknown facts about your favourite Bollywood actress Aishwarya.
Please Wait while comments are loading...

Kannada Photos

Go to : More Photos