»   » ಬಾಲಿವುಡ್ ಬೆಡಗಿಯರ ಸಂಭಾವನೆ ಪಟ್ಟಿ ಬಹಿರಂಗ

ಬಾಲಿವುಡ್ ಬೆಡಗಿಯರ ಸಂಭಾವನೆ ಪಟ್ಟಿ ಬಹಿರಂಗ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ನಾಯಕರ ನಟರ ಸಂಭಾವನೆಗೆ ಹೋಲಿಸಿದರೆ ನಾಯಕಿಯರ ಸಂಭಾವನೆ ಕಮ್ಮಿ ಎಂಬುದು ಜಗತ್ತಿಗೆ ತಿಳಿದಿರುವ ವಿಚಾರ. ನಾಯಕ ನಟರಿಗಿಂತ ನಾವೇನು ಕಮ್ಮಿ? ನಮಗ್ಯಾಕೆ ಸಂಭಾವನೆಯಲ್ಲಿ ತಾರತಮ್ಯ? ಎಂದು ಪ್ರಬುದ್ಧ ನಟಿ ವಿದ್ಯಾಬಾಲನ್ ಕೂಗಿದ್ದು ನಿರ್ಮಾಪಕರ ಕಿವಿಗೆ ಬಿದ್ದ ಹಾಗೆ ಕಾಣುತ್ತಿಲ್ಲ.

ಹೇಳಿ ಕೇಳಿ ನಟಿಮಣಿಯರ ವೃತ್ತಿ ಬದುಕಿನ ಆಯಸ್ಸು ತೀರಾ ಕಮ್ಮಿ. ಸಪೂರ ಸುಂದರಿಯ ಸೊಂಟದಳತೆಗೂ ಕಡಿಮೆ ಅವಧಿಯ ಕಾಲ ನಾಯಕಿಯರಾಗಿ ಮೆರೆಯುವ ಚಾನ್ಸ್ ಇರುತ್ತದೆ ಅಷ್ಟೆ. ಇರೋ ಅವಧಿಯಲ್ಲಿ ಅಭಿಮಾನಿಗಳಿಗೊಂದಿಷ್ಟು ಮನರಂಜನೆ ನೀಡಿ ತಾವೂ ಒಂದಿಷ್ಟು ದುಡ್ಡು ಮಾಡಿಕೊಳ್ಳೋಣ ಎಂದರೆ ಆಗುತ್ತಿಲ್ಲ ಎಂದು ಬೆಡಗಿಯರು ಗೊಣಗುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದಾಗಲಾದರೂ ಹೆಚ್ಚು ಸಂಭಾವನೆ ನೀಡುತ್ತಾರೆ ಎಂಬ ಆಶಯ ಇದೆ ಎಂದು 'ಕ್ವೀನ್' ಕಂಗನಾ, 'ಕಹಾನಿ' ವಿದ್ಯಾ ಆಸೆ ಇಟ್ಟುಕೊಂಡಿದ್ದಾರೆ. ನಾಯಕ-ನಾಯಕಿ ಸಂಭಾವನೆ ವಿಷಯದಲ್ಲಿ ಏಕಿಷ್ಟು ತಾರತಮ್ಯ ಎಂದು ಹೆಚ್ಚು ಗಳಿಕೆ ಹೊಂದಿರುವ ಕತ್ರೀನಾ ಕೂಡಾ ಪ್ರಶ್ನಿಸಿದ್ದಾರೆ. [ಹೆಚ್ಚು ಸಂಭಾವನೆ ಗಳಿಸುವ ನಾಯಕರು]

ದಕ್ಷಿಣ ಭಾರತ ಚಿತ್ರರಂಗದಂಥೆ ಬಾಲಿವುಡ್ ನಲ್ಲೂ ಸಂಭಾವನೆ ವಿಷಯದಲ್ಲಿ ನಾಯಕ ನಟರದ್ದೇ ಮೇಲುಗೈ. ತಾರೆಗಳ ಸಂಭಾವನೆ ಇಷ್ಟೇ ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟ. ಹೆಚ್ಚುಕಡಿಮೆ ಇಷ್ಟಿರಬಹುದು ಎಂಬ ಲೆಕ್ಕಾಚಾರ ಹಾಕಿ ಹೇಳಬಹುದು. [ದಕ್ಷಿಣದ ನಟಿಯರ ಸಂಭಾವನೆ ವಿವರ]

ಬಾಲಿವುಡ್ ಬೆಡಗಿಯರು ಇತ್ತೀಚೆಗೆ ಚಿತ್ರವೊಂದಕ್ಕೆ ಪಡೆದ ಸಂಭಾವನೆ ಅಧಾರವಾಗಿಟ್ಟುಕೊಂಡು ಈ ಸರಣಿಯಲ್ಲಿ ಟಾಪ್ ನಾಯಕಿಯರನ್ನು ಕೂಡಿಸಲಾಗಿದೆ.. ಮುಂದೆ ಓದಿ...

ಕತ್ರೀನಾ ಕೈಫ್ #1
  

ಕತ್ರೀನಾ ಕೈಫ್ #1

ಎಕ್ ಥಾ ಟೈಗರ್, ಜಬ್ ತಕ್ ಹೇ ಜಾನ್, ಧೂಮ್ 3 ಬ್ಲಾಕ್ ಬ್ಲಾಸ್ಟರ್ ಚಿತ್ರಗಳಿಗೆ ಕತ್ರೀನಾ ಕೈಫ್ 8 ರಿಂದ 15 ಕೋಟಿ ರು ತನಕ ಸಂಭಾವನೆ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

ಕರೀನಾ ಕಪೂರ್ #2
  

ಕರೀನಾ ಕಪೂರ್ #2

ಗೋರಿ ತೇರೆ ಪ್ಯಾರ್ ಮೇ ಚಿತ್ರ ನೆಲಕಚ್ಚಿದರೂ ಆ ಚಿತ್ರಕ್ಕಾಗಿ ಕರೀನಾ 10 ರಿಂದ 14 ಕೋಟಿ ರು ಪಡೆದಿದ್ದರು ಎಂಬ ಸುದ್ದಿ ಬಂದಿದೆ. ಹೀಗಾಗಿ ಎರಡನೇ ಸ್ಥಾನ ಕರೀನಾ ಪಾಲಾಗಿದೆ.

ವಿದ್ಯಾ ಬಾಲನ್ #3
  

ವಿದ್ಯಾ ಬಾಲನ್ #3

ಕಹಾನಿ, ಶಾದಿ ಕೆ ಸೈಡ್ ಎಫೆಕ್ಟ್ ಚಿತ್ರಗಳಿಗೆ ಸುಮಾರು 5 ರಿಂದ 9 ಕೋಟಿ ರು ರ ಆಸುಪಾಸಿನಷ್ಟು ಮೊತ್ತ ಎಣಿಸಿರುವ ಡರ್ಟಿ ಪಿಕ್ಚರ್ ಖ್ಯಾತಿ ವಿದ್ಯಾ ಬಾಲನ್ ಗೆ ತಮ್ಮ ಸಂಭಾವನೆ ವಿಷ್ಯದಲ್ಲಿ ಅಸಮಾಧಾನ ಇದ್ದೇ ಇದೆ.

ಪ್ರಿಯಾಂಕಾ ಚೋಪ್ರಾ #4
  

ಪ್ರಿಯಾಂಕಾ ಚೋಪ್ರಾ #4

ಡಾನ್ 2 ಕಾಲದಿಂದಲೂ 5 ಕೋಟಿ ರುಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಪ್ರಿಯಾಂಕಾ ಚೋಪ್ರಾ ಕ್ರೀಶ್ 3, ಫ್ಲಾಪ್ ಆದ 'ಗುಂಡೆ' ಚಿತ್ರದ ಹೊತ್ತಿಗೆ 9 ಕೋಟಿ ರು ತನಕ ಸಂಭಾವನೆ ಗಳಿಸತೊಡಗಿದರು.

ದೀಪಿಕಾ ಪಡುಕೋಣೆ #5
  

ದೀಪಿಕಾ ಪಡುಕೋಣೆ #5

ತನ್ನ ಸಮಕಾಲೀನ ಸ್ಟಾರ್ ನಟಿಯರಿಗಿಂತ ಹೆಚ್ಚಿನ ಸರಣಿ ಹಿಟ್ ಚಿತ್ರಗಳನ್ನು (100ಕೋಟಿ ರು.ಗೂ ಅಧಿಕ ಮೊತ್ತ ಗಳಿಕೆ) ನೀಡಿರುವ ದೀಪಿಕಾ ಪಡುಕೋಣೆ ತಮ್ಮ ಸಂಭಾವಣೆ ಮೊತ್ತವನ್ನು ಮಾತ್ರ ಏರಿಸಿಲ್ಲ. ಯೇ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್, ರಾಮ್ ಲೀಲಾ, ಕೊಚ್ಚಡಿಯಾನ್ ಚಿತ್ರದ ನಟಿ 5 ರಿಂದ 8 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

ಅನುಷ್ಕಾ ಶರ್ಮ #6
  

ಅನುಷ್ಕಾ ಶರ್ಮ #6

ಜಬ್ ತಕ್ ಹೇ ಜಾನ್ ನಂತರ ಚಿತ್ರಕ್ಕಿಂತ ಗಾಸಿಪ್ ಸುದ್ದಿಗಳಿಂದ ಹೆಚ್ಚು ಚಾಲ್ತಿಯಲ್ಲಿರುವ ಅನುಷ್ಕಾ ಶರ್ಮ ಚಿತ್ರವೊಂದಕ್ಕೆ 3 ರಿಂದ 8 ಕೋಟಿ ರು ಪಡೆಯುತ್ತಿದ್ದಾರೆ.

ಸೋನಾಕ್ಷಿ ಸಿನ್ಹಾ #7
  

ಸೋನಾಕ್ಷಿ ಸಿನ್ಹಾ #7

ಬಾಲಿವುಡ್ ನ ಲಕ್ಕಿ ಸ್ಟಾರ್ ಸೋನಾಕ್ಷಿ ಸಿನ್ಹಾ ಅವರು ದಬ್ಬಾಂಗ್ ಸರಣಿ, ರೌಡಿ ರಾಥೋರ್, ಫ್ಲಾಪ್ ಆದ ಬುಲೆಟ್ ರಾಜ, ಇತ್ತೀಚೆಗೆ ಹಿಟ್ ಆದ ಹಾಲಿಡೇ ಚಿತ್ರ ಸೇರಿದಂತೆ ಲೆಕ್ಕ ಹಾಕಿದರೆ ಚಿತ್ರವೊಂದಕ್ಕೆ 3 ರಿಂದ 7 ಕೋಟಿ ರು ಗಳಿಸುತ್ತಿದ್ದಾರೆ.

ಬಿಪಾಶಾ ಬಸು #8
  

ಬಿಪಾಶಾ ಬಸು #8

ರಾಜ್ 3, ಹಮ್ ಶಕಲ್ಸ್ ನಟಿ ಬಿಪಾಶಾ ಬಸು ಸಂಭಾವನೆ ವಿಷ್ಯದಲ್ಲಿ ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ ಚಿತ್ರವೊಂದಕ್ಕೆ 4 ರಿಂದ 5 ಕೋಟಿ ರು ಮಾತ್ರ ಪಡೆಯುತ್ತಿದ್ದಾರೆ.

ಸೋನಮ್ ಕಪೂರ್ #9
  

ಸೋನಮ್ ಕಪೂರ್ #9

ರಾಂಝಾನಾ ಚಿತ್ರದ ಯಶಸ್ಸಿನ ನಂತರ ಭಾಗ್ ಮಿಲ್ಕಾ ಭಾಗ್ ನಲ್ಲೂ ಸೋನಮ್ ಯಶಸ್ಸು ಕಂಡರೂ ಬೇವಕೂಫಿಯಾ ನೆಲಕಚ್ಚಿದ್ದರಿಂದ ಸಂಭಾವನೆ ಏರಿಕೆಯಾಗಲೇ ಇಲ್ಲ. ಚಿತ್ರವೊಂದಕ್ಕೆ ಸೋನಮ್ 2.5 ಕೋಟಿ ರು ಗಳಿಸುತ್ತಿದ್ದಾರೆ.

ಕಂಗನಾ ರಾನೌತ್ #10
  

ಕಂಗನಾ ರಾನೌತ್ #10

ಕ್ವೀನ್ ಚಿತ್ರದ ಯಶಸ್ವಿ ನಟಿ ಕಂಗನಾಗೆ ಹಣಗಳಿಕೆಗಿಂತ ಪಾತ್ರವೇ ಮುಖ್ಯವಾದರೂ ಸಂಭಾವನೆ ವಿಷಯದಲ್ಲಿರುವ ತಾರತಮ್ಯದ ಬಗ್ಗೆ ಬೇಸರವಿದೆ. 'ರಿವಾಲ್ವರ್ ರಾಣಿ' ಚಿತ್ರವೊಂದಕ್ಕೆ 3 ರಿಂದ 4.5 ಕೋಟಿ ರು ಪಡೆಯುತ್ತಿದ್ದಾರೆ.

ಜಾಕ್ವಲೀನ್ ಫರ್ನಾಂಡೀಸ್ #11
  

ಜಾಕ್ವಲೀನ್ ಫರ್ನಾಂಡೀಸ್ #11

ಹೌಸ್ ಫುಲ್ 2, ರೇಸ್ 2, ಮರ್ಡರ್ 2 ಹೀಗೆ ಸರಣಿ ಚಿತ್ರಗಳ ಎರಡನೇ ಭಾಗದ ಅಧಿನಾಯಕಿ ಜಾಕ್ವಲೀನ್ ಗೆ ಸಂಭಾವನೆ ವಿಷಯದಲ್ಲಿ 'ಕಿಕ್' ಸಿಕಿಲ್ಲ. ಚಿತ್ರವೊಂದಕ್ಕೆ ಈ ಸಿಂಹಳದ ಸುಂದರಿ 3 ರಿಂದ 4 ಕೋಟಿ ಪಡೆಯುತ್ತಾರೆ.

ಆಸೀನ್ #12
  

ಆಸೀನ್ #12

ಗಜಿನಿ, ಕಿಲಾಡಿ 786, ಬೋಲ್ ಬಚ್ಚನ್, ರೆಡಿ, ಹೌಸ್ ಫುಲ್ 2 ಚಿತ್ರದ ನಾಯಕಿ ಆಸೀನ್ ಚಿತ್ರ ವೊಂದಕ್ಕೆ 3-4 ಕೋಟಿ ರು ಪಡೆದುಕೊಂಡಿದ್ದಾರೆ.

English summary
What we did get to know is what these Bollywood actresses are roughly paid per film. Yes!. check what these actresses are allegedly being paid, for one can not be sure if the price that has been leaked is true or not.
Please Wait while comments are loading...

Kannada Photos

Go to : More Photos