»   » ಸಲ್ಮಾನ್ ವಿರುದ್ಧದ ಪ್ರಕರಣ ಖುಲಾಸೆ: ನಿರ್ಮಾಪಕರು ರಿಲೀಫ್

ಸಲ್ಮಾನ್ ವಿರುದ್ಧದ ಪ್ರಕರಣ ಖುಲಾಸೆ: ನಿರ್ಮಾಪಕರು ರಿಲೀಫ್

Posted by:
Subscribe to Filmibeat Kannada

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣದ ವಿಚಾರಣೆಯ ತೀರ್ಪು ಹೊರಬಿದ್ದಿದ್ದು, ಜೋಧಪುರ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಕಾರಣ ಅವರನ್ನು ಖುಲಾಸೆಗೊಳಿಸಿದೆ.[ಬಾಲಿವುಡ್‌ ನಲ್ಲಿ ಮೂವರು ದಿಗ್ಗಜರ ಸಂಗಮದ ಚಿತ್ರ ತೆರೆಗೆ]

ಸಲ್ಮಾನ್ ಖಾನ್ ರನ್ನು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಿಂದಲೂ ಖುಲಾಸೆ ಗೊಳಿಸಿರುವುದು ಅಭಿಮಾನಿಗಳಿಗೆ ಮತ್ತು ಸಿನಿಮಾ ನಿರ್ಮಾಪಕರಿಗೆ ಖುಷಿತಂದಿದೆ. ಸಲ್ಮಾನ್ ಖಾನ್ ಆರೋಪ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿದ್ದೇ ಆದಲ್ಲಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ಆಗುತ್ತಿತ್ತು. ಈಗ ಪ್ರಕರಣ ಖುಲಾಸೆಯಿಂದ ಆತಂಕದಲ್ಲಿದ್ದ ಸಿನಿಮಾ ನಿರ್ಮಾಪಕರು ಮತ್ತು ಅಭಿಮಾನಿಗಳು ನಿರಾಳರಾಗಿದ್ದಾರೆ.[ಸಲ್ಮಾನ್ ಖಾನ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಟೈಮ್ ಲೈನ್]

ಟ್ಯೂಬ್‌ಲೈಟ್ ಸಿನಿಮಾ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲಾ..

ಟ್ಯೂಬ್‌ಲೈಟ್ ಸಿನಿಮಾ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲಾ..

ಸಲ್ಮಾನ್‌ ಖಾನ್ ಮತ್ತು ವಿಶೇಷ ಪಾತ್ರದಲ್ಲಿ ಶಾರುಖ್ ಖಾನ್ ಅಭಿನಯಿಸುತ್ತಿರುವ 'ಟ್ಯೂಬ್‌ಲೈಟ್' ಸಿನಿಮಾ ನಿರ್ಮಾಣಕ್ಕೆ ಯಾವುದೇ ತೊಂದರೆ ಆಗದೇ ಎಂದಿನಂತೆ ಶೂಟಿಂಗ್ ಮುಂದುವರೆಯಲಿದೆ.[ಜೈಲು ಶಿಕ್ಷೆಯ ಭೀತಿಯಲ್ಲಿ ಸಲ್ಮಾನ್ ಖಾನ್]

ನಿರ್ಮಾಪಕರು ನಿರಾಳ

ನಿರ್ಮಾಪಕರು ನಿರಾಳ

ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಟ್ ಚಿತ್ರಕ್ಕೆ ಸಲ್ಮಾನ್ ಜೊತೆಗೆ ಕಬೀರ್ ಖಾನ್ ಬಂಡವಾಳ ಹೂಡಿದ್ದರು. ಆದ್ದರಿಂದ ಸ್ವಲ್ಪ ಆತಂಕದಲ್ಲಿ ಇದ್ದ ನಿರ್ಮಾಪಕರು ಪ್ರಕರಣ ಖುಲಾಸೆಗೊಂಡ ಕಾರಣ ನಿರಾಳರಾಗಿದ್ದಾರೆ.

ಸಲ್ಮಾನ್ ಖಾನ್ ಕೈಯಲ್ಲಿದ್ದ ಸಿನಿಮಾಗಳಿವು..

ಸಲ್ಮಾನ್ ಖಾನ್ ಕೈಯಲ್ಲಿದ್ದ ಸಿನಿಮಾಗಳಿವು..

ಟ್ಯೂಬ್‌ಲೈಟ್ ಜೊತೆಗೆ ಸಲ್ಮಾನ್‌ ಕೈಯಲ್ಲಿ, 'ಟೈಗರ್ ಝಿಂದಾ ಹೈ', 'ಕಬೀರ್ ಖಾನ್ಸ್ ನೆಕ್ಸ್ಟ್, 'ದಬಾಂಗ್ 3', 'ನೊ ಎಂಟ್ರಿ ಮೇನ್ ಎಂಟ್ರಿ' ಸಿನಿಮಾಗಳು ಇದ್ದವು. ಈ ಸಿನಿಮಾಗಳ ನಿರ್ಮಾಣಕ್ಕೆ ಈಗ ಯಾವುದೇ ತೊಂದರೆ ಇರುವುದಿಲ್ಲ.

ಅಭಿಮಾನಿಗಳ ಸಹಕಾರಕ್ಕೆ ಸಲ್ಮಾನ್ ಥ್ಯಾಂಕ್ಸ್

ಅಭಿಮಾನಿಗಳ ಸಹಕಾರಕ್ಕೆ ಸಲ್ಮಾನ್ ಥ್ಯಾಂಕ್ಸ್

ಸಲ್ಮಾನ್ ಖಾನ್ ಅವರು ತಮ್ಮ ವಿರುದ್ಧದ ಪ್ರಕರಣ ಖುಲಾಸೆ ಗೊಂಡ ನಂತರ ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ "ಎಲ್ಲಾ ರೀತಿಯ ಸಹಕಾರ ಮತ್ತು ಗುಡ್ ವಿಶ್ ಗೆ ಥ್ಯಾಂಕ್ಸ್' ಎಂದು ಟ್ವೀಟ್ ಮಾಡಿದ್ದಾರೆ.

English summary
Hours after Salman Khan was acquitted by a court in Jodhpur, the Bollywood star took to Twitter to thank his fans for their support. “Thank you for all the support and good wishes,” Salman wrote on the social media site.
Please Wait while comments are loading...

Kannada Photos

Go to : More Photos