twitter
    For Quick Alerts
    ALLOW NOTIFICATIONS  
    For Daily Alerts

    ಧೂಮ್ 3 ಗಳಿಕೆಗೆ 'ಕಿಕ್' ನೀಡಲು ಸಲ್ಲೂ ಸಜ್ಜು

    By * ಜೇಮ್ಸ್ ಮಾರ್ಟಿನ್
    |

    ಕಿಕ್ ಚಿತ್ರದಲ್ಲಿ ಲಾಜಿಕ್ ಇಲ್ಲ ಬರೀ ಸಲ್ಲೂ ಮ್ಯಾಜಿಕ್. ನೈಜತೆ ಹುಡುಕದಿದ್ದರೆ ಚಿತ್ರ ಪಕ್ಕಾ ಪೈಸಾ ವಸೂಲ್, ಸಲ್ಮಾನ್ ಅಭಿಮಾನಿಗಳಿಗೆ ಹಬ್ಬದ ಕೊಡುಗೆ ಎಂಬ ಮಾತುಗಳು ವಿಮರ್ಶಕರಿಂದ ಕೇಳಿ ಬಂದಿತ್ತು. ಆದರೆ, ಬಿಡುಗಡೆಯಾದ ಒಂದು ವಾರದಲ್ಲೇ 150 ಕೋಟಿ ರು ಗಳಿಕೆ ಕ್ಲಬ್ ಸೇರುವ ಮೂಲಕ ಸಲ್ಮಾನ್ ಖಾನ್ ಚುರುಕು ಮುಟ್ಟಿಸಿದ್ದಾರೆ.

    ಈ ವರ್ಷ ಬಿಡುಗಡೆಯಾದ ಎಲ್ಲಾ ಚಿತ್ರಗಳ ದಾಖಲೆ ಮುರಿದಿರುವ ಸಲ್ಲೂ ಚಿತ್ರ ಈಗ ಧೂಮ್ 3 ಹಿಂದೆ ಬಿದ್ದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಕ್ ವಿಲನ್, ಹಾಲಿಡೇ, 2 ಸ್ಟೇಟ್ಸ್ ಹಾಗೂ ಜೈ ಹೋ ಗಳಿಸಿದ ಮೊತ್ತವನ್ನು ಕಿಕ್ ಹಿಂದಿಕ್ಕಿ ಮುನ್ನಡೆ ಪಡೆದುಕೊಂಡಿದೆ. [ವಿಮರ್ಶೆ: ಸಲ್ಮಾನ್ 'ಕಿಕ್' ಪೈಸಾ ವಸೂಲ್]

    ಅಮೀರ್ ಖಾನ್, ಕತ್ರೀನಾ ಕೈಫ್, ಅಭಿಷೇಕ್ ಬಚ್ಚನ್ ನಟನೆಯ ಧೂಮ್3 ಚಿತ್ರ ಒಂದು ವಾರದಲ್ಲೇ 167.6 ಕೋಟಿ ರು ಬಾಚಿತ್ತು. ಈಗ ಒಂದು ವಾರದಲ್ಲೇ 150 ಕೋಟಿ ರು ದಾಟಿದ ದಾಖಲೆಯನ್ನು ಸಲ್ಮಾನ್ ಖಾನ್ ಅವರ ಚಿತ್ರ ಕಿಕ್ ಬರೆದಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ ಹೊರತು ಪಡಿಸಿ ಚಿತ್ರದ ತೆರಿಗೆ ಪಾವತಿ ನಂತರ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿ ಇಲ್ಲಿ ತನಕದ ಒಟ್ಟಾರೆ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿ ಇಲ್ಲಿದೆ.

    ಕಳೆದ ಒಂದು ದಶಕದಲ್ಲಿ ಹಿಂದಿ ಚಿತ್ರರಂಗ ಸಾಕಷ್ಟು ಬೆಳೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಹಿಂದಿ ಚಿತ್ರಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಇದು ಪರೋಕ್ಷವಾಗಿ ಪ್ರಾದೇಶಿಕ ಭಾಷೆ ಚಿತ್ರಗಳಿಗೂ ಲಾಭ ತರುತ್ತದೆ ಎನ್ನಬಹುದು.

    ಮೊದಲ ವಾರದ ಒಟ್ಟಾರೆ ಗಳಿಕೆ ಹೀಗಿದೆ

    ಮೊದಲ ವಾರದ ಒಟ್ಟಾರೆ ಗಳಿಕೆ ಹೀಗಿದೆ

    * ಶುಕ್ರವಾರ: 26.40 ಕೋಟಿ ರು
    * ಶನಿವಾರ: 27.15 ಕೋಟಿ ರು
    * ಭಾನುವಾರ : 30.18 ಕೋಟಿ ರು.
    * ಸೋಮವಾರ: 14.41 ಕೋಟಿ ರು.
    * ಮಂಗಳವಾರ : 28.89 ಕೋಟಿ ರು.
    * ಬುಧವಾರ : 21.66 ಕೋಟಿ ರು.
    * ಗುರುವಾರ: 19.17 ಕೋಟಿ ರು.

    ಕಿಕ್ ಒಟ್ಟಾರೆ ಗಳಿಕೆ ಮೊತ್ತ 200 ಕೋಟಿ ರು ದಾಟಿದೆ

    ಕಿಕ್ ಒಟ್ಟಾರೆ ಗಳಿಕೆ ಮೊತ್ತ 200 ಕೋಟಿ ರು ದಾಟಿದೆ

    ವಿಶ್ವದಾದ್ಯಂತ ಕಿಕ್ ಗಳಿಕೆ ಮೊತ್ತ ಲೆಕ್ಕಾಚಾರದಂತೆ ಒಂದು ವಾರದೊಳಗೆ 206.9 ಕೋಟಿ ರು ಬಾಚಿದೆ. ಧೂಮ್3 ಚಿತ್ರ ಬಿಟ್ಟರೆ ವೇಗವಾಗಿ 200 ಕೋಟಿ ಕ್ಲಬ್ ಸೇರಿರುವುದು ಸಲ್ಲೂ ಸ್ಟೈಲ್. ಈ ಮೂಲಕ ಚೆನ್ನೈ ಎಕ್ಸ್ ಪ್ರೆಸ್ ದಾಖಲೆ ಮುರಿದ ಸಲ್ಮಾನ್ ಖಾನ್.

    ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸಾಧನೆ

    ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸಾಧನೆ

    ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು. ಕಿಕ್ ಕೂಡಾ ಅದೇ ಹಾಡಿ ಹಿಡಿಯಿತು.

    ಆದರೆ, 2013ರಲ್ಲಿ ದಬ್ಬಾಂಗ್ ದಾಖಲೆಯನ್ನು ಧೂಮ್ 3, ಕ್ರಿಶ್ 3 ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಮುರಿಯಿತು. ಕೇವಲ 100 ಕೋಟಿ ರು ಅಷ್ಟೇ ಅಲ್ಲ ಹಿಂದಿ ಚಿತ್ರಗಳು 200-400 ಕೋಟಿ ರು ಗಳಿಕೆ ಕ್ಲಬ್ ಕೂಡಾ ಓಪನ್ ಆಗಿವೆ.
    ಧೂಮ್ 3 ಗಳಿಕೆಯಲ್ಲಿ ಸದ್ಯಕ್ಕೆ ಕಿಂಗ್

    ಧೂಮ್ 3 ಗಳಿಕೆಯಲ್ಲಿ ಸದ್ಯಕ್ಕೆ ಕಿಂಗ್

    ಬಜೆಟ್: 150 ಕೋಟಿ ರು
    ನಿವ್ವಳ ಗಳಿಕೆ: 533 ಕೋಟಿ ರು
    ಭಾರತದಲ್ಲಿ : 351.29 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 150.06 ಕೋಟಿ ರು

    ಚೆನ್ನೈ ಎಕ್ಸ್ ಪ್ರೆಸ್ ಗಳಿಕೆ ವಿವರ

    ಚೆನ್ನೈ ಎಕ್ಸ್ ಪ್ರೆಸ್ ಗಳಿಕೆ ವಿವರ

    ಬಜೆಟ್: 75 ಕೋಟಿ ರು
    ನಿವ್ವಳ ಗಳಿಕೆ: 420 ಕೋಟಿ ರು
    ಭಾರತದಲ್ಲಿ : 300 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 120 ಕೋಟಿ ರು

    ಹೃತಿಕ್ ರೋಷನ್ ಅವರ ಕ್ರಿಶ್ 3

    ಹೃತಿಕ್ ರೋಷನ್ ಅವರ ಕ್ರಿಶ್ 3

    ಬಜೆಟ್: 115 ಕೋಟಿ ರು
    ನಿವ್ವಳ ಗಳಿಕೆ: 415 ಕೋಟಿ ರು
    ಭಾರತದಲ್ಲಿ : 362 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 53 ಕೋಟಿ ರು

    3 ಈಡಿಯಟ್ಸ್ ಚಿತ್ರದ ಗಳಿಕೆ

    3 ಈಡಿಯಟ್ಸ್ ಚಿತ್ರದ ಗಳಿಕೆ

    ಬಜೆಟ್: 35 ಕೋಟಿ ರು
    ನಿವ್ವಳ ಗಳಿಕೆ: 392 ಕೋಟಿ ರು
    ಭಾರತದಲ್ಲಿ : 267 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 125 ಕೋಟಿ ರು

    ಏಕ್ ಥಾ ಟೈಗರ್ ಚಿತ್ರದ ಗಳಿಕೆ

    ಏಕ್ ಥಾ ಟೈಗರ್ ಚಿತ್ರದ ಗಳಿಕೆ

    ಬಜೆಟ್: 75 ಕೋಟಿ ರು
    ನಿವ್ವಳ ಗಳಿಕೆ: 310 ಕೋಟಿ ರು
    ಭಾರತದಲ್ಲಿ : 241 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 69 ಕೋಟಿ ರು

    ಯೇ ಜವಾನಿ ಹೇ ದಿವಾನಿ ಗಳಿಕೆ

    ಯೇ ಜವಾನಿ ಹೇ ದಿವಾನಿ ಗಳಿಕೆ

    ಬಜೆಟ್: 50ಕೋಟಿ ರು
    ನಿವ್ವಳ ಗಳಿಕೆ: 301 ಕೋಟಿ ರು
    ಭಾರತದಲ್ಲಿ : 232 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 69 ಕೋಟಿ ರು

    ದಬ್ಬಾಂಗ್ 2 ಗಳಿಕೆ ಮೊತ್ತ

    ದಬ್ಬಾಂಗ್ 2 ಗಳಿಕೆ ಮೊತ್ತ

    ಬಜೆಟ್: 60 ಕೋಟಿ ರು
    ನಿವ್ವಳ ಗಳಿಕೆ: 251 ಕೋಟಿ ರು
    ಭಾರತದಲ್ಲಿ : 195 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 56 ಕೋಟಿ ರು

    ಶಾರುಖ್ ರಾ ಒನ್ ಗಳಿಕೆ

    ಶಾರುಖ್ ರಾ ಒನ್ ಗಳಿಕೆ

    ಬಜೆಟ್: 125 ಕೋಟಿ ರು
    ನಿವ್ವಳ ಗಳಿಕೆ: 240 ಕೋಟಿ ರು
    ಭಾರತದಲ್ಲಿ : 182 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 58 ಕೋಟಿ ರು

    ಬಾಡಿಗಾರ್ಡ್ ಚಿತ್ರದ ಗಳಿಕೆ

    ಬಾಡಿಗಾರ್ಡ್ ಚಿತ್ರದ ಗಳಿಕೆ

    ಬಜೆಟ್: 60 ಕೋಟಿ ರು
    ನಿವ್ವಳ ಗಳಿಕೆ: 230 ಕೋಟಿ ರು
    ಭಾರತದಲ್ಲಿ : 178 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 52 ಕೋಟಿ ರು

    ಶಾರುಖ್ ಡಾನ್ 2 ಚಿತ್ರದ ಮೊತ್ತ

    ಶಾರುಖ್ ಡಾನ್ 2 ಚಿತ್ರದ ಮೊತ್ತ

    ಬಜೆಟ್: 70 ಕೋಟಿ ರು
    ನಿವ್ವಳ ಗಳಿಕೆ: 217 ಕೋಟಿ ರು
    ಭಾರತದಲ್ಲಿ : 142 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 75 ಕೋಟಿ ರು

    ಸಲ್ಮಾನ್ ದಬ್ಬಾಂಗ್ ಚಿತ್ರ

    ಸಲ್ಮಾನ್ ದಬ್ಬಾಂಗ್ ಚಿತ್ರ

    ಬಜೆಟ್: 15 ಕೋಟಿ ರು
    ನಿವ್ವಳ ಗಳಿಕೆ: 215 ಕೋಟಿ ರು
    ಭಾರತದಲ್ಲಿ : 177 ಕೋಟಿ ರು
    ಸಾಗರೋತ್ತರ ದೇಶಗಳಲ್ಲಿ : 38 ಕೋಟಿ ರು

    English summary
    Salman Khan's Kick has finally crossed 200 crore mark at the Indian Box Office and has beaten Shahrukh Khan's Chennai Express first week Box Office Collection. Kick is now the second highest grossing movie for Salman Khan after Ek Tha Tiger and number 7 on the all time highest grossing movies in India.
    Friday, August 1, 2014, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X