»   » ಅಶಕ್ತರಿಗೆ ಸಲ್ಮಾನ್ 'ಈದ್' ಮಹಾನ್ ಕೊಡುಗೆ

ಅಶಕ್ತರಿಗೆ ಸಲ್ಮಾನ್ 'ಈದ್' ಮಹಾನ್ ಕೊಡುಗೆ

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಈದ್ ಆಚರಣೆಗೂ ಮುನ್ನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಈದ್ ಉಲ್ ಫಿತ್ರ್ ಆಚರಿಸಿಕೊಂಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಶಕ್ತರಿಗೆ ಈದ್ ಕೊಡುಗೆಯಾಗಿ ಭಾರಿ ಆಫರ್ ನೀಡಿದ್ದಾರೆ.

ದಾನ ಧರ್ಮ ಸದ್ಭಾವನೆಗಳನ್ನು ವೃದ್ಧಿಸುವ ಈ ಹಬ್ಬ ಬಡವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಈದ್ ಅಂಗವಾಗಿ ಇಫ್ತಾರ್ ಕೂಟಗಳು, ದಾನ ಕಾರ್ಯಗಳು ಎಲ್ಲೆಡೆ ನಡೆಯುತ್ತದೆ. ಸಲ್ಮಾನ್ ಖಾನ್ ಅವರು ತಂದೆ ಸಲೀಂ ಖಾನ್, ಸೋದರರಾದ ಅರ್ಬಾಜ್ ಖಾನ್ ಹಾಗೂ ಸೊಹೈಲ್ ಖಾನ್ ಜತೆ ಹಬ್ಬ ಆಚರಿಸಿಕೊಂಡಿದ್ದಾರೆ. [ಅಮೀರ್, ಸಲ್ಮಾನ್, ಶಾರುಖ್ ಈದ್ ಆಚರಣೆ ಸಂಭ್ರಮ]

ಕಿಕ್ ಚಿತ್ರದ ಈಗಷ್ಟೇ 100 ಕೋಟಿ ಕ್ಲಬ್ ಸೇರಿದ ಖುಷಿಯಲ್ಲಿ ಈದ್ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು. ಇದೇ ಖುಷಿಯಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಬೀಯಿಂಗ್ ಹ್ಯೂಮನ್(Being Human) ಸಂಸ್ಥೆ ಮೂಲಕ ನೂರು ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ಘೋಷಿಸಿದ್ದಾರೆ.

ಈ ಮುಂಚೆ ಉದ್ಯೋಗ ಭರವಸೆ ನೀಡಿದ್ದ ಸಲ್ಮಾನ್
  

ಈ ಮುಂಚೆ ಉದ್ಯೋಗ ಭರವಸೆ ನೀಡಿದ್ದ ಸಲ್ಮಾನ್

100 ಹೃದ್ರೋಗಿ ಮಕ್ಕಳಿಗೆ ಉಚಿತ ಚಿಕಿತ್ಸೆ ಭರವಸೆ ನೀಡಿರುವ ಸಲ್ಮಾನ್ ಖಾನ್ ಅವರು ಈ ಮುಂಚೆ ಉದ್ಯೋಗ ಭರವಸೆ ನೀಡಿದ್ದರು. beinghumanworkshop.com ಗೆ ಭೇಟಿ ಕೊಡಿ ಎಂದು ಟ್ವೀಟ್ ಮಾಡಿದ್ದರು.

  

ಹಾರ್ಟ್ ಪ್ರಾಬ್ಲಂ ಮಕ್ಕಳೇ ಸಂಪರ್ಕಿಸಿ ಎಂದ ಟ್ವೀಟ್

ಹಾರ್ಟ್ ಪ್ರಾಬ್ಲಂ ಮಕ್ಕಳೇ ಸಂಪರ್ಕಿಸಿ ಎಂದು ಸಲ್ಮಾನ್ ಖಾನ್ ಟ್ವೀಟ್

  

ತಮಾಷೆ ಸಂದೇಶ ಕಳಿಸಬೇಡಿ ಎಚ್ಚರ

ತಮಾಷೆ ಸಂದೇಶ ಕಳಿಸಬೇಡಿ ಎಚ್ಚರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅನಗತ್ಯ ಸಂದೇಶ ಕಳಿಸಬೇಡಿ ಎಂದು ಟ್ವೀಟ್

  

ತಮಾಷೆ ಬೇಡ ಎಂದ ಸಲ್ಮಾನ್ ತಮಾಷೆ ಆದಾಗ

ತಮಾಷೆ ಬೇಡ ಎಂದ ಸಲ್ಮಾನ್ ತಮಾಷೆ ಆದ ಪ್ರಸಂಗ ನಡೆಯಿತು. ಬೀಯಿಂಗ್ ಹ್ಯೂಮನ್ ಸಂಸ್ಥೆ ಇಮೇಲ್ ಐಡಿ ನೀಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಇಮೇಲ್ ಐಡಿ ಎಂದು ಟ್ವೀಟ್ ಮಾಡುವ ಬದಲು ಫೀಮೇಲ್ ಐಡಿ ಎಂದು ಟ್ವೀಟ್ ಮಾಡಿದ್ದರು.

  

ಕ್ಷಮಿಸಿ ಎಂದು ಮೇಲ್ ಐಡಿ ಕೊಟ್ಟ ಸಲ್ಲೂ

ಕ್ಷಮಿಸಿ ಎಂದು ಮೇಲ್ ಐಡಿ ಕೊಟ್ಟ ಸಲ್ಲೂ

ಬೀಯಿಂಗ್ ಹ್ಯೂಮನ್ ಸಂಸ್ಥೆ
  

ಬೀಯಿಂಗ್ ಹ್ಯೂಮನ್ ಸಂಸ್ಥೆ

ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆ ದಾನ ದತ್ತಿ ಸಂಸ್ಥೆಯಾಗಿದ್ದು, ಅಶಕ್ತ, ದುರ್ಬಲ ವರ್ಗದ ಮಕ್ಕಳು, ಮಾರಕ ರೋಗ ಪೀಡಿತ ಮಕ್ಕಳ ಏಳಿಗೆ, ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಸಮಯ ಸಿಕ್ಕಾಗಲೆಲ್ಲ ಸಲ್ಮಾನ್ ಖಾನ್ ಅವರು ಈ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಡನೆ ಬೆರೆಯುತ್ತಾರೆ.

English summary
Bollywood superstar Salman Khan has announced that his Being Human (BH) charitable organisation will help "100 genuine patients" suffering from heart condition by providing them free treatment. Bollywood stars took it to Twitter to wish all fans and family a very Happy Eid.
Please Wait while comments are loading...

Kannada Photos

Go to : More Photos