»   » ಮದ್ವೆಗೂ ಮುನ್ನ ಶಾಹಿದ್ ಕ್ಯಾಮರಾ ಕಣ್ಣಿಗೆ ಕಾಣಿಸಿದ್ದು ಹೀಗೆ

ಮದ್ವೆಗೂ ಮುನ್ನ ಶಾಹಿದ್ ಕ್ಯಾಮರಾ ಕಣ್ಣಿಗೆ ಕಾಣಿಸಿದ್ದು ಹೀಗೆ

Posted by:
Subscribe to Filmibeat Kannada

ಬಾಲಿವುಡ್ ಕ್ಯೂಟ್ ಸ್ಟಾರ್ ಶಾಹೀದ್ ಕಪೂರ್ ಇಂದು ಮೀರಾ ರಜಪೂತ್ ಜೊತೆ ಮದುವೆಯಾಗುತ್ತಿದ್ದಾರೆ, ಮದುವೆಯ ಹಿಂದಿನ ದಿನವಾದ ನಿನ್ನೆ ಸಂಗೀತ ಸಮಾರಂಭದಲ್ಲಿ ಭಾಗವಹಿಸಲು ದೆಹಲಿ ಕಡೆ ಪ್ರಯಾಣ ಬೆಳೆಸಿರುವ ಶಾಹಿದ್ ಕಪೂರ್, ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು.

ಇಂದು (ಜುಲೈ7) ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್ ಗುರ್ ಗಾಂವ್ ನಲ್ಲಿ ಹಸೆಮಣೆ ಏರಲಿದ್ದಾರೆ. ಶಾಹೀದ್ ಕಪೂರ್ ಹೆತ್ತವರಾದ ಪಂಕಜ್ ಕಪೂರ್, ಮತ್ತು ಸುಪ್ರೀಯಾ ಪಾಟಕ್, ಶಾಹಿದ್ ಗಿಂತ ಮೊದಲೇ ಮದುವೆ ಸಮಾರಂಭದ ಜಾಗಕ್ಕೆ ತಲುಪಿ ಮದುವೆಯ ಕಾರ್ಯಗಳಿಗೆ ತಯಾರಿ ನಡೆಸಿದ್ದಾರೆ.

ಐಎಎನ್ಎಸ್ ಮಾಹಿತಿ ಪ್ರಕಾರ ಈಗಾಗಲೇ ಶಾಹಿದ್ ಕಪೂರ್ ಮದುವೆಗಾಗಿ ಟ್ರಿಡೆಂಟ್, ಹಾಗೂ ಗುರ್ ಗಾಂವ್ ನ ಸುಮಾರು 50 ರೂಮ್ ಗಳನ್ನು ಮದುವೆ ಮನೆ ಸದಸ್ಯರಿಗೆ ಹಾಗೂ ಅತಿಥಿಗಳಿಗಾಗಿ ಮೀಸಲಿರಿಸಲಾಗಿದೆ.

ಮಾಹಿತಿಗಳ ಪ್ರಕಾರ ಶಾಹಿದ್ ಮದುವೆ ಸಮಾರಂಭದಲ್ಲಿ ಕೇವಲ ತುಂಬಾ ಹತ್ತಿರದ ಸಂಭಂಧಿಗಳು ಮತ್ತು ಗೆಳೆಯರು ಮಾತ್ರ ಭಾಗವಹಿಸುತ್ತಾರಂತೆ. ಇನ್ನುಳಿದಂತೆ ಇದೇ ಜುಲೈ 12 ರಂದು ಮುಂಬೈ ನಲ್ಲಿ ದೊಡ್ಡ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಬಾಲಿವುಡ್ ನ ಖ್ಯಾತ ನಟ-ನಟಿಯರು ಭಾಗವಹಿಸಲಿದ್ದಾರೆ.

ಇನ್ನೂ ಶಾಹಿದ್ ಹತ್ತಿರದ ಗೆಳೆಯ ಡಿಸೈನರ್ ಕುನಾಲ್ ರಾವಲ್, 10 ತರಹದ ಡ್ರೆಸ್ಸ್ ಗಳನ್ನು ಮದುವೆಗಾಗಿ ತಯಾರು ಮಾಡಿದ್ದಾರೆ. ಹಾಗೆಯೇ ಅನಾಮಿಕ ಖನ್ನ ಅವರು ಮೀರಾ ರಜಪೂತ್ ಅವರಿಗೆ ಡ್ರೆಸ್ಸ್ ಡಿಸೈನ್ ಮಾಡಿದ್ದಾರಂತೆ.

ಶಾಹಿದ್ ಮದುವೆಗೆ ಹೊರಡುವ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕಾಗ

ಶಾಹಿದ್ ಕಪೂರ್

ಶಾಹಿದ್ ಕಪೂರ್

ಬಾಲಿವುಡ್ ನಟ ಶಾಹಿದ್ ಕಪೂರ್ ತಮ್ಮ ಮದುವೆಗೆ ಹೊರಡುತ್ತಿರುವ ಸಂದರ್ಭ

ಶಾಹಿದ್

ಶಾಹಿದ್

ಶಾಹಿದ್ ಕಪೂರ್ ಆಪ್ತರೊಂದಿಗೆ ವಿಮಾನ ನಿಲ್ದಾಣದತ್ತ

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಶಾಹಿದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ

 ಶಾಹಿದ್ ಮದುವೆ

ಶಾಹಿದ್ ಮದುವೆ

ಶಾಹಿದ್ ಮದುವೆ ದೆಹಲಿಯಲ್ಲಿ ನಡೆಯಲಿದೆ

ಶಾಹಿದ್ ಮದುವೆಯ ಸ್ಥಳದಲ್ಲಿ

ಶಾಹಿದ್ ಮದುವೆಯ ಸ್ಥಳದಲ್ಲಿ

ಶಾಹಿದ್ ಮದುವೆ ಸಮಾರಂಭ ಇಂದು ದೆಹಲಿಯಲ್ಲಿ ನಡೆಯುತ್ತಿದೆ.

English summary
Bollywood actor Shahid Kapoor is all set for his wedding with Mira Rajput. The actor was clicked by snaps at the Mumbai airport, when he was leaving for Delhi for his sangeet ceremony.
Please Wait while comments are loading...

Kannada Photos

Go to : More Photos