»   » ಮೋದಿ ಪಿಎಂ ಆದರೆ ದೇಶ ಬಿಡ್ತೀನಿ ಎಂದಿರಲಿಲ್ಲ: ಎಸ್ಸಾರ್ಕೆ

ಮೋದಿ ಪಿಎಂ ಆದರೆ ದೇಶ ಬಿಡ್ತೀನಿ ಎಂದಿರಲಿಲ್ಲ: ಎಸ್ಸಾರ್ಕೆ

Posted by:
Subscribe to Filmibeat Kannada

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಪರಿತಪಿಸಬೇಕಾಗುತ್ತದೆ. ಅಂಥಹದ್ದೇ ಒಂದು ಪ್ರಸಂಗ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಗೆ ಎದುರಾಗಿದೆ. ಮೋದಿ ಪ್ರಧಾನಿಯಾದರೆ ತಾನು ದೇಶ ಬಿಡುತ್ತೇನೆ ಎಂದು ನಕಲಿ ಟ್ವಿಟ್ಟರ್ ಅಕೌಂಟ್ ಬಳಸಿ ಶಾರುಖ್ ಹೆಸರಿಗೆ ಕಳಂಕ ತಂದಿದ್ದರು.

ಈ ಟ್ವೀಟ್ ಅಂತರ್ಜಾಲವೆಂಬ ಮಹಾಸಮುದ್ರಕ್ಕೆ ಹೊಕ್ಕ ಮೇಲೆ ಸುನಾಮಿಯನ್ನೇ ಎಬ್ಬಿಸಿತು. ಈ ಬಗ್ಗೆ ಶಾರುಖ್ ಕಡೆಗೆ ಸ್ಪಷ್ಟೀಕರಣ ನೀಡುವಂತಾಯಿತು. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಾವು ಆ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

shahrukh khan

ಮಾಧ್ಯಮಗಳ ಮುಂದೆ ಸದಾ ಬುದ್ಧಿವಂತಿಕೆಯಿಂದ, ಔಚಿತ್ಯಪೂರ್ಣವಾಗಿ, ಡಿಪ್ಲೊಮ್ಯಾಟಿಕ್ ಆಗಿ ಮಾತನಾಡುವ ಶಾರುಖ್ ಅವರಿಗೆ ಈ ಘಟನೆಯಿಂದ ಕೊಂಚ ಬೇಸರವಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ, "What a solid mandate given by the people. It proves again that the only constant is change. Now to move forward with strong and active faith, India." ಎಂದಿದ್ದರು.


ಇದಿಷ್ಟನ್ನು ಹೊರತುಪಡಿಸಿ ಅವರು ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ. ಆದರೆ ಯಾರೋ ಮಾಡಿದ ತಪ್ಪಿಗೆ ಶಾರುಖ್ ಬಲಿಯಾಗಬೇಕಾಯಿತು. ಈ ಹಿಂದೊಮ್ಮೆ ಮುಂಬೈ ಮೇಲೆ ಭಯೋತ್ಪಾದಕರು (26/11) ದಾಳಿ ಮಾಡಿದ ಘಟನೆಯನ್ನು ಶಾರುಖ್ ತೀವ್ರವಾಗಿ ಖಂಡಿಸಿದ್ದರು.

ಇಷ್ಟಕ್ಕೂ ಈ ವಿವಾದಕ್ಕೆ ಕಾರಣರಾದ ಆಸಾಮಿ ಎಂದರೆ ಕಮಲ್ ರಸೀದ್ ಖಾನ್ ಎಂಬುವವರು. ಮೇ.16ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಾವಾಗುತ್ತಿದ್ದಂತೆ ಒಂದು ಟ್ವೀಟ್ ಹಾಕಿ ಗುಲ್ಲೆಬ್ಬಿಸಿದರು. ಜೊತೆಗೆ ಒಂದು ಫೋಟೋವನ್ನೂ ಲಗತ್ತಿಸಿದ್ದರು.


ಆ ಫೋಟೋದಲ್ಲಿ ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೇಬ್ ಅಕ್ತರ್ ಕೂಡ ಇದ್ದಾರೆ. ಶಾರುಖ್ ಟ್ವಿಟ್ಟರ್ ಹ್ಯಾಂಡಲ್ ಮಾಡಿ "ಮೋದಿ ಪಿಎಂ ಆದರೆ ದೇಶ ಬಿಡ್ತೀನಿ ಎಂದು ಪ್ರಾಮಿಸ್ ಮಾಡಿದ್ದರು. ಈಗ ಭಾರತ ಬಿಡಲು ರೆಡಿಯಾಗಿ" ಎಂಬರ್ಥದ ಸಾಲುಗಳನ್ನು ಹಾಕಿದ್ದರು. ಅನಾವಶ್ಯಕವಾಗಿ ಶಾರುಖ್ ಹೆಸರನ್ನು ಪ್ರಸ್ತಾಪಿಸಿ 'ದೇಶದ್ರೋಹಿ' ಚಿತ್ರದ ಈ ನಟ ಮಸಿಬಳಿದಿದ್ದ.

English summary
Bollywood megastar Shahrukh Khan on Monday cleared the air over fake tweets going viral that he will leave India if Narendra Modi becomes prime minister of India. The angry, SRK, took to the microblogging site Twitter, to trash away the rumours about the alleged statement.
Please Wait while comments are loading...

Kannada Photos

Go to : More Photos