twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್ ಮಂಡಳಿ ಕೆಂಗಣ್ಣಿಗೆ ಗುರಿಯಾದ ಕತ್ರಿನಾ ಕೈಫ್ 'ಬ್ರಾ'

    By ಸೋನು ಗೌಡ
    |

    ಬಾಲಿವುಡ್ ಚಿತ್ರಗಳ ಮೇಲೆ ಸೆನ್ಸಾರ್ ಮಂಡಳಿ ಸಮರ ಸಾರೋದು ಇತ್ತೀಚಿಗೆ ಮಾಮೂಲಿ ಆಗಿಬಿಟ್ಟಿದೆ. ಈ ಮೊದಲು ಶಾಹೀದ್ ಕಪೂರ್ ಮತ್ತು ಆಲಿಯಾ ಭಟ್ ಕಾಣಿಸಿಕೊಂಡಿದ್ದ 'ಉಡ್ತಾ ಪಂಜಾಬ್' ಚಿತ್ರದ ಸೆನ್ಸಾರ್ ವಿಚಾರದಲ್ಲಿ, ಸೆನ್ಸಾರ್ ಮಂಡಳಿ ದೊಡ್ಡ ರಂಪ ಮಾಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

    ಇದೀಗ 'ಉಡ್ತಾ ಪಂಜಾಬ್' ಚಿತ್ರಕ್ಕೆ ಒದಗಿದ ಸಂಕಷ್ಟ ಕತ್ರಿನಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ಬಾರ್ ಬಾರ್ ದೇಖೊ' ಚಿತ್ರಕ್ಕೂ ಬಂದೊದಗಿದೆ. ಈ ಬಾರಿ 'ಬಾರ್ ಬಾರ್ ದೇಖೊ' ಸೆನ್ಸಾರ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ.[ಕತ್ರಿನಾ ಕೈಫ್ ಸಪೂರ ಸೊಂಟಕ್ಕೆ ಬಾಬಾ ರಾಮ್ ದೇವ್ ಸವಾಲ್]

    ನಿತ್ಯಾ ಮೆಹ್ರಾ ನಿರ್ದೇಶನದ 'ಬಾರ್ ಬಾರ್ ದೇಖೊ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗಿದ್ದು, ಸೆನ್ಸಾರ್ ಅಂಗಳಕ್ಕೆ ಬಂದು ನಿಂತಿದೆ. ಆದರೆ ಸೆನ್ಸಾರ್ ಮಂಡಳಿಯವರು ಹೊಸ ಖ್ಯಾತೆ ತೆಗೆದಿದ್ದಾರೆ.

    ಅಷ್ಟಕ್ಕೂ ಸೆನ್ಸಾರ್ ಮಂಡಳಿಗೆ ಇಷ್ಡವಾಗದೇ ಇರುವಂತಹ ದೃಶ್ಯ ಏನಿತ್ತು?, 'ಬಾರ್ ಬಾರ್ ದೇಖೊ' ಚಿತ್ರದಲ್ಲಿ. ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದ್ದಾದರೂ ಯಾಕೆ?,, ಎಲ್ಲವನ್ನು ಓದಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

    'ಬ್ರಾ'ವನ್ನು ಕೆಕ್ಕರಿಸಿ ನೋಡಿದ ಸೆನ್ಸಾರ್ ಮಂಡಳಿ

    'ಬ್ರಾ'ವನ್ನು ಕೆಕ್ಕರಿಸಿ ನೋಡಿದ ಸೆನ್ಸಾರ್ ಮಂಡಳಿ

    'ಉಡ್ತಾ ಪಂಜಾಬ್' ಚಿತ್ರದಲ್ಲಿ ಡ್ರಗ್ಸ್ ಸೆನ್ಸಾರ್ ಮಂಡಳಿ ಕೆಂಗಣ್ಣಿಗೆ ಗುರಿಯಾದ್ರೆ, 'ಬಾರ್ ಬಾರ್ ದೇಖೊ' ಚಿತ್ರದಲ್ಲಿ ಕತ್ರಿನಾ ಹಾಕಿದ್ದ 'ಬ್ರಾ' ಯಾಕೋ ಸೆನ್ಸಾರ್ ಮಂಡಳಿಗೆ ಇಷ್ಟವಾಗಿಲ್ಲವಂತೆ.[ಮಾಜಿ ಪ್ರೇಮಿಗಳಿಗೆ ದಕ್ಕಿದ ವರ್ಷದ ಸುಂದರ-ಸುಂದರಿ ವೋಗ್ ಬ್ಯೂಟಿ ಪ್ರಶಸ್ತಿ]

    'ಆ' ದೃಶ್ಯಕ್ಕೆ ಕತ್ತರಿ

    'ಆ' ದೃಶ್ಯಕ್ಕೆ ಕತ್ತರಿ

    'ಬಾರ್ ಬಾರ್ ದೇಖೊ' ಚಿತ್ರದಲ್ಲಿ 'ಬ್ರಾ' ತೋರಿಸುವ ದೃಶ್ಯವೊಂದಿದ್ದು, ಆ ದೃಶ್ಯಕ್ಕೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸಲಹೆ ನೀಡಿದೆ. ಅಷ್ಟಕ್ಕೂ ಕತ್ರಿನಾ ಹಾಕಿರುವ ಆ 'ಬ್ರಾ'ದಲ್ಲಿ ಅಂತಹ ವಿಶೇಷತೆ ಏನಿದೆ ಅನ್ನೋದು ಸದ್ಯಕ್ಕೆ ಚಿತ್ರತಂಡದ ಮುಂದಿರುವ ಪ್ರಶ್ನೆ.[ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು]

    ಸಮಸ್ಯೆ ತಂದೊಡ್ಡಿದ 'ಸವಿತಾ ಭಾಬಿ'

    ಸಮಸ್ಯೆ ತಂದೊಡ್ಡಿದ 'ಸವಿತಾ ಭಾಬಿ'

    ಚಿತ್ರದಲ್ಲಿ ಎಲ್ಲೋ ಒಂದು ಕಡೆ ಪ್ರೇಕ್ಷಕರಲ್ಲಿ ಅಶ್ಲೀಲ ಭಾವ ಮೂಡಿಸುವ 'ಸವಿತಾ ಭಾಬಿ' ಎಂಬ ಪೋರ್ನ್ ಗ್ರಾಫಿಕ್ಸ್ ಮಹಿಳೆಯ ಹೆಸರನ್ನು ಬಳಸಿರೋದು ಯಾಕೋ ಸೆನ್ಸಾರ್ ಮಂಡಳಿಗೆ ಸರಿ ಕಾಣಲಿಲ್ಲ. ಆದ್ದರಿಂದ ಆ ದೃಶ್ಯಕ್ಕೆ ಹಾಗೂ ಪದಕ್ಕೆ ಕತ್ತರಿ ಪ್ರಯೋಗ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ.

    ಚಿತ್ರಕ್ಕೆ 'ಯು/ಎ' ಪ್ರಮಾಣಪತ್ರ

    ಚಿತ್ರಕ್ಕೆ 'ಯು/ಎ' ಪ್ರಮಾಣಪತ್ರ

    'ಬ್ರಾ' ಮತ್ತು 'ಸವಿತಾ ಭಾಬಿ' ಎರಡು ವಿಚಾರಕ್ಕೆ ಕತ್ತರಿ ಹಾಕಿ ನಂತರ ಸಿನಿಮಾ ರಿಲೀಸ್ ಮಾಡಿ ಅಂತ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣ ಪತ್ರ ನೀಡಿದೆ ಕಳುಹಿಸಿದೆ.

    ಗರಂ ಆದ ಚಿತ್ರತಂಡ

    ಗರಂ ಆದ ಚಿತ್ರತಂಡ

    ಸೆನ್ಸಾರ್ ಮಂಡಳಿಯ ಈ ಧೋರಣೆಗೆ ಚಿತ್ರತಂಡ ಕೊಂಚ ಗರಂ ಆಗಿದೆ. ಮಹಿಳೆಯರ ಒಳ ಉಡುಪಾದ 'ಬ್ರಾ' ತೋರಿಸುವುದರಲ್ಲಿ ಅಂತಹ ತಪ್ಪೇನಿದೆ?, ಸೆನ್ಸಾರ್ ಮಂಡಳಿ ಇನ್ನೂ ಪುರಾತನ ಕಾಲದಲ್ಲಿಯೇ ಬದುಕುತ್ತಿದೆ ಎಂದು ಚಿತ್ರತಂಡ ಸೆನ್ಸಾರ್ ಮಂಡಳಿ ವಿರುದ್ಧ ಕಿಡಿಕಾರಿದೆ.

    ಕಾಜೋಲ್ ತೋರಿಸಿರಲಿಲ್ಲವೇ.?

    ಕಾಜೋಲ್ ತೋರಿಸಿರಲಿಲ್ಲವೇ.?

    ಈ ಮೊದಲು 1995 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ಮತ್ತು ಕಾಜೋಲ್ ನಟಿಸಿದ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಚಿತ್ರದಲ್ಲಿ ಕೂಡ ಕಾಜೋಲ್ ಅವರು 'ಬ್ರಾ' ತೋರಿಸುವ ದೃಶ್ಯ ಇತ್ತು. ಆದರೆ ನಮ್ಮ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲು ಹೇಳಿದ್ದು ಎಷ್ಟು ಸರಿ, ಎಂದು ಚಿತ್ರತಂಡ ಸೆನ್ಸಾರ್ ಮಂಡಳಿ ವಿರುದ್ಧ ಉರಿದು ಬಿದ್ದಿದೆ.

    ಟ್ವಿಟ್ಟರ್ ಸವಿತಾ ಭಾಬಿ ಟ್ರೆಂಡ್

    ಟ್ವಿಟ್ಟರ್ ಸವಿತಾ ಭಾಬಿ ಟ್ರೆಂಡ್

    'ಬಾರ್ ಬಾರ್ ದೇಖೊ' ಚಿತ್ರದ ಸೆನ್ಸಾರ್ ಸಮಸ್ಯೆಯಿಂದ ಟ್ವಿಟ್ಟರ್ ನಲ್ಲಿ ಸವಿತಾ ಭಾಬಿ ಫುಲ್ ಟ್ರೆಂಡ್ ಆಗಿದ್ದಾರೆ. ಎಲ್ಲರೂ ಟ್ವಿಟ್ಟರ್ ತುಂಬಾ ಸವಿತಾ ಭಾಬಿ ಬಗ್ಗೆನೇ ಮಾತು-ಕತೆ ನಡೆಸಿದ್ದಾರೆ.

    ಮುಂದಿನ ವಾರ ರಿಲೀಸ್

    ಮುಂದಿನ ವಾರ ರಿಲೀಸ್

    ನಿತ್ಯಾ ಮೆಹ್ರಾ ನಿರ್ದೇಶನದ 'ಬಾರ್ ಬಾರ್ ದೇಖೊ' ಮುಂದಿನ ವಾರ (ಸೆಪ್ಟೆಂಬರ್ 9) ದಂದು ಎಲ್ಲಾ ಕಡೆ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ. ಈಗಾಗಲೆ ಚಿತ್ರದ 'ಕಾಲಾ ಚಷ್ಮಾ' ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

    English summary
    Hindi Movie "Baar Baar Dekho" starring Actor Sidharth Malhotra and Actress Katrina Kaif has been granted a 'U/A' certificate by Censor Board Of Film Certification (CBFC) but not without cuts. CBFC asked the makers to remove a visual showing bra from the film. The board also asked to delete a reference to ‘Savita Bhabhi’, a pornographic cartoon character.
    Tuesday, August 30, 2016, 15:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X