»   » ಥೈಲ್ಯಾಂಡ್ ನಲ್ಲಿ ಕಾಲು ಜಾರಿದ ವೀಣಾ ಮಲಿಕ್ !

ಥೈಲ್ಯಾಂಡ್ ನಲ್ಲಿ ಕಾಲು ಜಾರಿದ ವೀಣಾ ಮಲಿಕ್ !

Written by: ರವಿಕಿಶೋರ್
Subscribe to Filmibeat Kannada

ಹೇಳಿಕೇಳಿ ಹಾಟ್ ಬೆಡಗಿ. ಇನ್ನು ಕಾಲು ಜಾರಿದರೆ ಏನಾಗಬೇಡ. ಪಾಕಿಸ್ತಾನದ ಹಾಟ್ ಬಾಂಬ್ ವೀಣಾ ಮಲಿಕ್ ಕಾಲು ಜಾರಿ ಬಿದ್ದಿದ್ದಾರೆ. ಬೇರೆ ತಾರೆಗಳು ಕಾಲು ಜಾರಿದ್ದರೆ ಏನಾಗುತ್ತಿತ್ತೋ ಏನೋ ಗೊತ್ತಿಲ್ಲ. ಆದರೆ ವೀಣಾಗೆ ಮಾತ್ರ ಕಾಲು ಉಳುಕಿದೆ.

'ಸಿಲ್ಕ್ ಸಖತ್ ಹಾಟ್' ಎಂಬ ಕನ್ನಡ ಚಿತ್ರದಲ್ಲಿ ವೀಣಾ ಮಲಿಕ್ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಹಾಡಿನ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ಭರದಿಂದ ಸಾಗಿದೆ. ಸೆಟ್ಸ್ ನಲ್ಲಿ ವೀಣಾ ಕುಣಿದ ರಭಸಕ್ಕೆ ಆಕೆಯ ಕಾಲಿನ ಬೆರಳಿಗೆ ಗಾಯವಾಗಿದೆ.

ಕೂಡಲೆ ವೈದ್ಯರನ್ನು ಕರೆಸಿ ಕಾಲಿಗೆ ಬ್ಯಾಂಡೇಜ್ ಮಾಡಲಾಯಿತು. ಈ ಘಟನೆಯ ಕಾರಣ ಕೆಲ ಗಂಟೆಗಳ ಸಮಯ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಈ ಚಿತ್ರದಲ್ಲಿ ವೀಣಾ ಮಲಿಕ್ ಕಾಯಾ ವಾಚಾ ಮನಸಾ ಪಾಲ್ಗೊಂಡಿದ್ದರು. ಆದರೆ ಅವರ ಕಾಲಿಗೆ ಗಾಯವಾಗಿದ್ದು ಚಿತ್ರತಂಡಕ್ಕೂ ನೋವು ತಂದಿದೆ ಎಂದಿದ್ದಾರೆ ಚಿತ್ರದ ನಿರ್ಮಾಪಕರು.

ಪ್ರಣಯಭರಿತ ಸನ್ನಿವೇಶಗಳಿಗೆ ಕಷ್ಟವಾಗಿದೆ

ಪ್ರಣಯಭರಿತ ಸನ್ನಿವೇಶಗಳಿಗೆ ಕಷ್ಟವಾಗಿದೆ

ಈ ಬಗ್ಗೆ ಮಾತನಾಡಿರುವ ವೀಣಾ ಮಲಿಕ್, "ಚಿತ್ರೀಕರಣದಲ್ಲಿ ಗಾಯಗೊಳ್ಳುವುದು ನನಗೇನು ಹೊಸದಲ್ಲ. ಆದರೆ ಈಗ ಆಗಿರುವ ಗಾಯ ಚಿತ್ರೀಕರಣದ ಮೇಲೂ ಪ್ರಭಾವ ಬೀರಿದೆ. ಏಕೆಂದರೆ ಈ ಹಾಡು ರೊಮ್ಯಾಂಟಿಕ್ ಆಗಿದ್ದು ಕಾಲಿಗೆ ಗಾಯವಾಗಿರುವ ಕಾರಣ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತಿದೆ" ಎಂದಿದ್ದಾರೆ.

ಬ್ಯಾಂಡೇಜ್ ಹಾಕಿಕೊಂಡೇ ಕುಣಿದ ವೀಣಾ ಮಲಿಕ್

ಬ್ಯಾಂಡೇಜ್ ಹಾಕಿಕೊಂಡೇ ಕುಣಿದ ವೀಣಾ ಮಲಿಕ್

ಕಾಲಿಗೆ ಗಾಯವಾಗಿ ನೋವಾಗುತ್ತಿದ್ದರೂ ಕಷ್ಟಪಟ್ಟು ವೀಣಾ ಅಭಿನಯಿಸಿದ್ದಾರೆ. ಬ್ಯಾಂಡೇಜ್ ಹಾಕಿಕೊಂಡೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೋವಿನಲ್ಲೂ ಪ್ರಣಯ ಉಕ್ಕಿಸಿದ್ದಾರೆ. ಹಾಟ್ ಸನ್ನಿವೇಶಗಳಲ್ಲಿ ಅಭಿನಯಿಸಿ ಶಹಬಾಹ್ ಅನ್ನಿಸಿಕೊಂಡಿದ್ದಾರೆ.

ಥೈಲ್ಯಾಂಡ್ ನಲ್ಲಿ ಒಳ್ಳೆಯ ಹವಾಗುಣ

ಥೈಲ್ಯಾಂಡ್ ನಲ್ಲಿ ಒಳ್ಳೆಯ ಹವಾಗುಣ

ಥೈಲ್ಯಾಂಡ್ ನಲ್ಲಿ ಒಳ್ಳೆಯ ಹವಾಗುಣವಿದೆ. ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣ ಇದು. ನನ್ನ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಥೈಲ್ಯಾಂಡ್ ಸಹ ಒಂದು ಎಂದು ವೀಣಾ ಮಲಿಕ್ ಹೇಳಿದ್ದಾರೆ.

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

ಜೆಸ್ಸಿ ಗಿಫ್ಟ್ ಸಂಗೀತ ಇರುವ ಈ ಚಿತ್ರವನ್ನು ತ್ರಿಶೂಲ್ ನಿರ್ದೇಶಿಸಿದ್ದಾರೆ. ವೀಣಾ ಮಲಿಕ್ ಜೊತೆ ಅಕ್ಷಯ್ ಅಭಿನಯಿಸುತ್ತಿರುವ ಚಿತ್ರವಿದು. ಆರ್.ವಿ.ವೆಂಕಟಪ್ಪ ಚಿತ್ರದ ನಿರ್ಮಾಪಕರು. ಈ ಚಿತ್ರ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಎನ್ನುತ್ತಿದೆ ಚಿತ್ರತಂಡ. ಸೆನ್ಸಾರ್ ಮಂಡಲಿ 'ಎ' ಸರ್ಟಿಫಿಕೇಟ್ ನೀಡಿದೆ.

ಪಡ್ಡೆಗಳನ್ನು ಪಲ್ಟಿ ಹೊಡೆಸುತ್ತಿರುವ ದೃಶ್ಯಗಳು

ಪಡ್ಡೆಗಳನ್ನು ಪಲ್ಟಿ ಹೊಡೆಸುತ್ತಿರುವ ದೃಶ್ಯಗಳು

ಚಿತ್ರದಲ್ಲಿ ಪಡ್ಡೆಗಳ ಮೈ ಬೆಚ್ಚಗೆ, ಮನಸ್ಸನ್ನು ಹಗುರ ಮಾಡುವ ಹಲವಾರು ದೃಶ್ಯಗಳಿವೆ. ಅಕ್ಷಯ್ ಹಾಗೂ ವೀಣಾ ನಡುವಿನ ಚುಂಬನ ದೃಶ್ಯಗಳಂತೂ ಪಡ್ಡೆಗಳು ಪಲ್ಟಿ ಮೇಲೆ ಪಲ್ಟಿ ಹೊಡೆಯುವಂತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಜುಲೈನಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ.

ತ್ರಿಶೂಲ್ ಆಕ್ಷನ್ ಕಟ್ ಹೇಳಿರುವ ಚಿತ್ರ

ತ್ರಿಶೂಲ್ ಆಕ್ಷನ್ ಕಟ್ ಹೇಳಿರುವ ಚಿತ್ರ

ತ್ರಿಶೂಲ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಪ್ಪ ನಿರ್ಮಿಸುತ್ತಿದ್ದಾರೆ. ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವವರು ನಟ ಅಕ್ಷಯ್. ಸನಾ ಖಾನ್, ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

ಸಿಲ್ಕ್ ಸ್ಮಿತಾ ಈ ಚಿತ್ರದ ಸ್ಫೂರ್ತಿ

ಸಿಲ್ಕ್ ಸ್ಮಿತಾ ಈ ಚಿತ್ರದ ಸ್ಫೂರ್ತಿ

ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

ಶೀರ್ಷಿಕೆ ಈಗ ಶಾರ್ಟ್ ಅಂಡ್ ಸ್ವೀಟ್

ಶೀರ್ಷಿಕೆ ಈಗ ಶಾರ್ಟ್ ಅಂಡ್ ಸ್ವೀಟ್

ಈ ಚಿತ್ರಕ್ಕೆ ಮೊದಲು ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿತ್ತು. ಏಕಾಏಕಿ ತಮ್ಮ ಡರ್ಟಿ ಪಿಕ್ಚರ್ ಚಿತ್ರದ ಹೆಸರನ್ನಿಟ್ಟರೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸುಮ್ಮನಿರ್ತಾರಾ. ಆಕೆ ಕೋರ್ಟ್ ನಲ್ಲಿ ದಾವಾ ಹೂಡಿ ಗೆದ್ದರು. ಬಳಿಕ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

English summary
Veena Malik, who is busy with the shooting of her debut Kannada movie Silk Sakkath Hot Maga, which was earlier called as Dirty Picture Silk Sakkath Hot, is injured on the sets of the movie.
Please Wait while comments are loading...

Kannada Photos

Go to : More Photos