»   » ತ್ರಿಲೋಕ ಸುಂದರಿ ಶ್ರೀದೇವಿ ಅಪರೂಪ ಚಿತ್ರಗಳು

ತ್ರಿಲೋಕ ಸುಂದರಿ ಶ್ರೀದೇವಿ ಅಪರೂಪ ಚಿತ್ರಗಳು

Written by: ಉದಯರವಿ
Subscribe to Filmibeat Kannada

ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಪ್ರೇಕ್ಷಕರನ್ನು ತಮ್ಮ ಮೋಹಕ ಚೆಲುವಿನಿಂದ ಸೆಳೆದಿದ್ದ ತಾರೆ ಶ್ರೀದೇವಿ. ಚಾಂದನಿ, ಮಿ.ಇಂಡಿಯಾ ಮತ್ತು ಛಾಲ್ ಬಾಜ್ ಚಿತ್ರಗಳು ಇಂದಿಗೂ ಶ್ರೀದೇವಿಯನ್ನು ಆರಾಧಿಸುವ ಅಭಿಮಾನಿಗಳನ್ನು ಕಾಡುತ್ತಲೇ ಇವೆ.

ಈ ತ್ರಿಲೋಕ ಸುಂದರಿ ಹುಟ್ಟಿದ್ದು ತಮಿಳುನಾಡಿನ ಶಿವಕಾಶಿಯಲ್ಲಿ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಳೆಯಾಳಂ ಚಿತ್ರಗಳಲ್ಲೂ ತಮ್ಮದೇ ಆದಂತಂಹ ಛಾಪು ಮೂಡಿಸಿದ್ದಾರೆ. ಅನಿಲ್ ಕಪೂರ್ ಹಾಗೂ ಸಂಜಯ್ ಕಪೂರ್ ಅವರ ಸಹೋದರ ಬೋನಿ ಕಪೂರ್ ಅವರನ್ನು ಕೈಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ತಾರೆ

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ತಾರೆ

ತಮ್ಮ ನಾಲ್ಕನೇ ವಯಸ್ಸಿಗೇ ಬೆಳ್ಳಿಪರದೆಗೆ ಅಡಿಯಿಟ್ಟ ಶ್ರೀದೇವಿ ಅಭಿನಯದ ಮೊದಲ ಚಿತ್ರ ತಮಿಳಿನ 'ಕಂದನ್ ಕರುಣಯ್'. ಈ ಚಿತ್ರದಲ್ಲಿ ಶಿವಾಜಿ ಗಣೇಶನ್ ಜೊತೆ ಅಭಿನಯಿಸಿದ್ದರು. ಇದಾದ ಬಳಿಕ ಹಲವಾರು ತಮಿಳು ತೆಲುಗು ಚಿತ್ರಗಳಲ್ಲೂ ಅಭಿನಯಿಸಿದರು.

ಮಲಯಾಳಂನಲ್ಲೂ ಛಾಪು ಮೂಡಿಸಿದ ಶ್ರೀದೇವಿ

ಮಲಯಾಳಂನಲ್ಲೂ ಛಾಪು ಮೂಡಿಸಿದ ಶ್ರೀದೇವಿ

ಮಲಯಾಳಂನ 'ಪೂಂಬಟ್ಟ' (1971) ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಕೇರಳ ಸರಕಾರ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಖ್ಯಾತಿಯ ಉತ್ತಂಗಕ್ಕೇರಿದ ಶ್ರೀದೇವಿ

ಖ್ಯಾತಿಯ ಉತ್ತಂಗಕ್ಕೇರಿದ ಶ್ರೀದೇವಿ

ತಮಿಳು ಚಿತ್ರರಂಗದ ಖ್ಯಾತನಾಮರಾದ ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಹಾಗೂ ಜೆ ಜಯಲಲಿತಾ ಜೊತೆ ಅಭಿನಯಿಸುವ ಮೂಲಕ ತಾವೂ ಖ್ಯಾತಿಯ ಉತ್ತಂಗಕ್ಕೆ ಏರಿದರು. ಈ ಮೂಲಕ ತಮ್ಮ ವೃತ್ತಿ ಜೀವನದ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡರು.

ಜೂಲಿ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ

ಜೂಲಿ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ

ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದ್ದ ಶ್ರೀದೇವಿ ಹಿಂದಿ ಚಿತ್ರರಂಗಕ್ಕೆ ಅಡಿಯಿಟ್ಟದ್ದು 1975ರಲ್ಲಿ. 'ಜೂಲಿ' ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುವ ಮೂಲಕ. ಹಿರಿಯ ತಾರೆ ಲಕ್ಷ್ಮಿ ಅವರಿಗೆ ಸಹೋದರಿಯಾಗಿ ಈ ಚಿತ್ರದಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ.

ರಜನಿ, ಕಮಲ್ ಜೊತೆ ಅಭಿಯನ

ರಜನಿ, ಕಮಲ್ ಜೊತೆ ಅಭಿಯನ

ಪೂರ್ಣ ಪ್ರಮಾಣದ ನಾಯಕಿಯಾಗಿ ಶ್ರೀದೇವಿ ಅಭಿನಯದ ಮೊದಲ ಚಿತ್ರ 'ಗಾಯತ್ರಿ' (1977). ಇದಾದ ಬಳಿಕ 'ಕವಿಕ್ಕುಯಿಲ್' ಎಂಬ ಚಿತ್ರದಲ್ಲಿ ಅಭಿನಯಿಸಿದರು. ಆನಂತರ '16 ವಾಯತ್ತಿನಿಲೆ' ಚಿತ್ರದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆ ಅಭಿನಯಿಸಿದ್ದರು. ಇದೊಂದು ತ್ರಿಕೋನ ಪ್ರೇಮಕಥೆ.

ಐಶ್ವರ್ಯಾ ರೈ ಹಾಗೂ ವಾಜಪೇಯಿ ಜೊತೆ

ಐಶ್ವರ್ಯಾ ರೈ ಹಾಗೂ ವಾಜಪೇಯಿ ಜೊತೆ

ಶ್ರೀದೇವಿ ಅವರ ಅಪರೂಪದ ಫೋಟೋಗಳಲ್ಲಿ ಇದೂ ಒಂದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಶ್ರೀದೇವಿ ಹಾಗೂ ಐಶ್ವರ್ಯಾ ರೈ ಸಿಡಿಸಿದ ನಗೆಬುಗ್ಗೆ.

ಕಿಂಗ್ ಖಾನ್ ಜೊತೆ ಲಕ್ಸ್ ಸುಂದರಿಯರು

ಕಿಂಗ್ ಖಾನ್ ಜೊತೆ ಲಕ್ಸ್ ಸುಂದರಿಯರು

ಇದು ಜನಪ್ರಿಯ ಸೌಂದರ್ಯ ಸಾಬೂನು ಲಕ್ಸ್ ಜಾಹೀರಾತು. ಶಾರುಖ್ ಖಾನ್ ಜೊತೆ ಶ್ರೀದೇವಿ, ಜೂಹಿ ಚಾವ್ಲಾ, ಕರೀನಾ ಕಪೂರ್ ಹಾಗೂ ಹೇಮಾ ಮಾಲಿನಿ ಅವರನ್ನು ಕಾಣಬಹುದು.


ಮದುವೆಯಾದ ಬಳಿಕ ಬೆಳ್ಳಿಪರದೆಯಿಂದ ದೂರ ಸರಿದ ಶ್ರೀದೇವಿ ಸುದೀರ್ಘ ಸಮಯದ ಬಳಿಕ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟರು. ಈ ಚಿತ್ರ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಶ್ರೀದೇವಿ ತಮ್ಮ ಹಿರಿ ಮಗಳು ಜಾಹ್ನವಿಯನ್ನು ಬೆಳ್ಳಿಪರದೆಗೆ ತರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
English summary
Sridevi Kapoor, one of the most brilliant actresses of all times is often cited as "The First Female Superstar of the Indian Cinema". The girl, who began acting at a tender age of four, went on to act in Tamil, Telugu, Hindi, Malayalam and Kannada films. Check out rare and unseen pictures of Sridevi by clicking on the slider.
Please Wait while comments are loading...

Kannada Photos

Go to : More Photos