»   » ಮುನ್ನೂರು ಕೋಟಿ ಗಳಿಕೆಯತ್ತ ಶಾರುಖ್ ಚಿತ್ರ

ಮುನ್ನೂರು ಕೋಟಿ ಗಳಿಕೆಯತ್ತ ಶಾರುಖ್ ಚಿತ್ರ

Posted by:
Subscribe to Filmibeat Kannada

ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಬಿರುದಾಂಕಿತ ಶಾರುಖ್ ಖಾನ್ ಅಭಿನಯ ಚಿತ್ರ ಹೊಸ ದಾಖಲೆಗೆ ಪಾತ್ರವಾಗಿದೆ. ಅವರ ಅಭಿನಯದ 'ಹ್ಯಾಪಿ ನ್ಯೂ ಇಯರ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ.

ಈ ಚಿತ್ರದ ವಿಶ್ವದಾದ್ಯಂತ ಬಿಡುಗಡೆಯಾಗಿ ನಿವ್ವಳ ರು.300 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಎರಡೂವರೆ ದಿನಗಳಲ್ಲೇ ರು.100 ಕೋಟಿ ಗಳಿಕೆ ಕ್ಲಬ್ ಸೇರಿ ಹೊಸ ಇತಿಹಾಸ ನಿರ್ಮಿಸಿತ್ತು.


ಶಾರುಖ್ ಜೊತೆ ದೀಪಿಕಾ ಪಡುಕೋಣೆ, ಬೋಮನ್ ಇರಾನಿ, ಸೋನು ಸೂದ್ ತಾರಾಗಣದ ಚಿತ್ರಕ್ಕೆ ವಿಮರ್ಶಕರಿಂದ ಅಂತಹಾ ಮೆಚ್ಚುಗೆ ವ್ಯಕ್ತವಾಗದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿರುವುದನ್ನು ನೋಡಿ ಚಿತ್ರೋದ್ಯಮ ಮೂಕ ವಿಸ್ಮಿತವಾಗಿದೆ.

ಫರಾಹ್ ಖಾನ್ ನಿರ್ದೇಶನದ ಈ ಚಿತ್ರ ಪ್ರಾದೇಶಿಕ ಭಾಷೆಗಳಿಗೂ (ತಮಿಳು, ತೆಲುಗು) ಡಬ್ ಆಗಿದೆ. ತಮಿಳಿನಲ್ಲಿ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದ್ದು ಮೂಲ ತಮಿಳು ಚಿತ್ರಗಳಿಗೂ ಪ್ರಬಲ ಸ್ಪರ್ಧೆ ನೀಡುತ್ತಿದೆ.

ಫರಾಹ್ ಖಾನ್ ಹಾಗೂ ಶಾರುಖ್ ಜೋಡಿಯಲ್ಲಿ ಬಂದಿರುವ ಮೂರನೇ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಬಂದಂತಹ ಮೈ ಹೂಂ ನಾ, ಓಂ ಶಾಂತಿ ಓಂ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದಂತಹವು. (ಏಜೆನ್ಸೀಸ್)

English summary
Shahrukh Khan, Deepika Padukone, Abishek Bachchan, Boman Irani and Sonu Sood lead bollywood movie 'Happy New Year' has raced mountains across the world to bang the 300 crore mark.
Please Wait while comments are loading...

Kannada Photos

Go to : More Photos