»   » 'ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ

'ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ

Posted by:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹೀಗಿರುವಾಗಲೇ ಖ್ಯಾತ ನಿರ್ದೆಶಕರ ಮುಂದಿನ ಪ್ರಾಜೆಕ್ಟ್ 'ಮಹಾಭಾರತ' ಎಂಬ ಸುದ್ದಿ ಎಲ್ಲೆಡೆ ಹರಿದಾಡಿದೆ.[ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಹೌದು, ರಾಜಮೌಳಿ ರವರು 'ಬಾಹುಬಲಿ 2' ನಂತರ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಸ್ಟಾರ್ ಕಾಸ್ಟ್ ನಲ್ಲಿ 'ಮಹಾಭಾರತ' ಸಿನಿಮಾ ಮಾಡಲು ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದ್ರೆ ಅಸಲಿ ಇದು ರೂಮರ್ಸ್ ಆಗಿರಬಹುದಾ ಅಥವಾ ನಿಜನಾ ಅನ್ನೋದೆ ಸಿನಿ ಪ್ರಿಯರಿಗೆ ಡೌಟ್ ಆಗಿತ್ತು. ಈ ಪ್ರಾಜೆಕ್ಟ್ ಬಗ್ಗೆ ಇತ್ತೀಚೆಗಷ್ಟೆ ನಿರ್ದೇಶಕ ರಾಜಮೌಳಿ ಬಾಲಿವುಡ್ ಲೈಫ್ ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಅವರೇ ತುಟಿ ಬಿಚ್ಚಿದ್ದಾರೆ. ಸಿನಿ ಪ್ರಿಯರಿಗೆ ಇದ್ದ ಹಲವು ಕುತೂಹಲಗಳಿಗೆ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿರಿ..

'ಮಹಾಭಾರತ'ದ ಬಗ್ಗೆ ರಾಜಮೌಳಿ

'ಮಹಾಭಾರತ'ದ ಬಗ್ಗೆ ರಾಜಮೌಳಿ

"ಹೌದು. ನಾನು 'ಮಹಾಭಾರತ' ಸಿನಿಮಾವನ್ನು ಖಂಡಿತ ಮಾಡುತ್ತೇನೆ. ಇದರ ಬಗ್ಗೆ ಹಲವು ಬಾರಿ ಹೇಳಿದ್ದೇನೆ. 'ಮಹಾಭಾರತ' ಒಂದು ದೊಡ್ಡ ಮಹಾಕಾವ್ಯ. ಅದಕ್ಕೆ ಅತ್ಯುತ್ತಮ ಕಲೆಗಾರಿಕೆ ಅವಶ್ಯಕತೆ ಇದೆ" ಎಂದು ರಾಜಮೌಳಿ ಬಾಲಿವುಡ್ ಲೈಫ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೀರ್ ಖಾನ್ ಭೇಟಿ ಮಾಡಿದ್ದು ಆಗಿದೆ

ಅಮೀರ್ ಖಾನ್ ಭೇಟಿ ಮಾಡಿದ್ದು ಆಗಿದೆ

ರಾಜಮೌಳಿ ಈಗಾಗಲೇ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ರನ್ನು ಒಮ್ಮೆ ಭೇಟಿ ಮಾಡಿ 'ಮಹಾಭಾರತ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಮೀರ್ ಸಹ ರಾಜಮೌಳಿ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ.

ಟ್ವಿಸ್ಟ್ ಏನಂದ್ರೆ...

ಟ್ವಿಸ್ಟ್ ಏನಂದ್ರೆ...

"ನಾನು ಈಗಾಗಲೇ ಹೇಳಿದಂತೆ 'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರ ಹೊರತುಪಡಿಸಿ ಬೇರೇ ಯಾವುದರ ಬಗ್ಗೆಯೂ ಯೋಚಿಸುತ್ತಿಲ್ಲ. 'ಮಹಾಭಾರತ' ಚಿತ್ರವನ್ನು ಖಂಡಿತ ತಕ್ಷಣ ಕೈಗೆತ್ತಿಕೊಳ್ಳುವುದಿಲ್ಲ" - ಎಸ್.ಎಸ್.ರಾಜಮೌಳಿ, 'ಬಾಹುಬಲಿ' ನಿರ್ದೇಶಕ

ಕಿಂಗ್ ಖಾನ್ ಗೂ ಇತ್ತು 'ಮಹಾಭಾರತ' ಇಂಟ್ರೆಸ್ಟ್

ಕಿಂಗ್ ಖಾನ್ ಗೂ ಇತ್ತು 'ಮಹಾಭಾರತ' ಇಂಟ್ರೆಸ್ಟ್

ಇನ್ನೊಂದು ಕುತೂಹಲಕಾರಿ ವಿಷಯ ಅಂದ್ರೆ, ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ಸಹ ಹಿಂದು ಮಹಾಕಾವ್ಯ 'ಮಹಾಭಾರತ'ವನ್ನು ಸಿನಿಮಾ ಮಾಡುವುದಾಗಿ ಹೇಳಿದ್ದರು.

'ಮಹಾಭಾರತ'ದ ಬಗ್ಗೆ ಎಸ್‌ಆರ್‌ಕೆ ಹೇಳಿದ್ದೇನು?

'ಮಹಾಭಾರತ'ದ ಬಗ್ಗೆ ಎಸ್‌ಆರ್‌ಕೆ ಹೇಳಿದ್ದೇನು?

" ''ಮಹಾಭಾರತ' ವನ್ನು ಸಿನಿಮಾ ಆಗಿ ನಿರ್ಮಿಸುವುದು ನನ್ನ ಕನಸು. ಆದರೆ ಆ ಚಿತ್ರ ನಿರ್ಮಿಸಲು ನನ್ನಲ್ಲಿ ಸಾಕಷ್ಟು ಬಜೆಟ್ ಇಲ್ಲ. ಬಟ್ ಸಿನಿಮಾ ಮಾಡಲು ಆಸಕ್ತಿ ಹೆಚ್ಚಾಗೆ ಇದ್ದರೂ, ಹಣ ಹಾಕುವಷ್ಟು ಶಕ್ತನಾಗಿದ್ದೇನೆಂದು ಯೋಚಿಸಿಲ್ಲ" ಎಂದು ಶಾರುಖ್ ಖಾನ್ ಈ ಹಿಂದೆ ಹೇಳಿದ್ದರು.

ವಿದೇಶಿ ನಿರ್ಮಾಪಕರ ಜೊತೆ 'ಮಹಾಭಾರತ' ಪ್ರಾಜೆಕ್ಟ್

ವಿದೇಶಿ ನಿರ್ಮಾಪಕರ ಜೊತೆ 'ಮಹಾಭಾರತ' ಪ್ರಾಜೆಕ್ಟ್

"ನನ್ನೊಬ್ಬನಿಂದ ಸಾಧ್ಯವಾಗದಿದ್ದರೇ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತೇನೆ. ಆದರೆ ಭಾರತದ ನಿರ್ಮಾಪಕರೊಂದಿಗೆ ಅಲ್ಲ.. ವಿದೇಶಿ ನಿರ್ಮಾಪಕರೊಂದಿಗೆ. ಕಾರಣ ಭಾರತದ ನಿರ್ಮಾಪಕರು ಮತ್ತು ಭಾರತೀಯ ಸಿನಿಮಾ ಸೀಮಿತ ಮಾರುಕಟ್ಟೆ ಹೊಂದಿವೆ. ಆದ್ದರಿಂದ ಇದು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಗಬೇಕೆಂದರೆ, ವಿದೇಶಿ ನಿರ್ಮಾಪಕರ ಜೊತೆಯಲ್ಲೇ ಚಿತ್ರ ನಿರ್ಮಾಣ ಮಾಡಬೇಕಾಗುತ್ತದೆ" ಎಂದಿದ್ದರು ಶಾರುಖ್ ಖಾನ್.

'ಬಾಹುಬಲಿ' ಗಿಂತ ದೊಡ್ಡ ಪ್ರಮಾಣದಲ್ಲಿ 'ಮಹಾಭಾರತ'

'ಬಾಹುಬಲಿ' ಗಿಂತ ದೊಡ್ಡ ಪ್ರಮಾಣದಲ್ಲಿ 'ಮಹಾಭಾರತ'

ಶಾರುಖ್ ಖಾನ್ 'ಮಹಾಭಾರತ' ದ ಸಿನಿಮಾ ಬಗ್ಗೆ, ಇದು 'ಬಾಹುಬಲಿ' ಸಿನಿಮಾಗಿಂತ ದೊಡ್ಡ ಮಟ್ಟದಲ್ಲಿ ಮೂಡಿಬರಬೇಕು ಎಂದು ಸಹ ಹೇಳಿದ್ದರು.

English summary
The Baahubali director SS Rajamouli confirms talking to Aamir Khan about his dream project ‘Mahabharata’. Here is What he said..
Please Wait while comments are loading...

Kannada Photos

Go to : More Photos