ಎಲ್ಲರಿಗೂ ಸಕತ್ ಶಾಕ್ ನೀಡಿದ ಸಲ್ಮಾನ್

Written by: ಜೇಮ್ಸ್ ಮಾರ್ಟಿನ್

ಹೀಗೂ ಉಂಟಾ ! ಎಂದು ನೆರೆದಿದ್ದ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಂತೆ ಹಿಂದಿ ಚಿತ್ರರಂಗದ ಪರಮ ವೈರಿಗಳು ಪರಮಾಪ್ತರಂತೆ ವರ್ತಿಸಿಬಿಟ್ಟಿದ್ದಾರೆ. ವೈಯಕ್ತಿಕ ಅಹಂಗಳನ್ನು ಬದಿಗೊತ್ತಿ ಸಲ್ಮಾನ್ ಖಾನ್ ನೇರವಾಗಿ ಶಾರುಖ್ ಬಳಿ ಬಂದು ಹಸ್ತಲಾಘವ ಮಾಡಿ ವಿಶ್ ಮಾಡಿದ್ದಾರೆ.

ಸಲ್ಮಾನ್ ಹಾಗೂ ಶಾರುಖ್ ಮತ್ತೆ ಒಂದಾಗಲು ಮತ್ತೊಂದು 'ಈದ್' ಬರಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಲ್ಲೂ ಸಣ್ಣದೊಂದು ಶಾಕ್ ನೀಡಿದ್ದಾರೆ. ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ನೇರ ವರದಿ ಮಾಡುತ್ತಿರುವ ಒನ್ ಇಂಡಿಯಾ ಸಂಸ್ಥೆ ವರದಿಗಾರರ ಪ್ರಕಾರ ಇಬ್ಬರು ನಾಯಕ ನಟರು ಪರಸ್ಪರ ಕೈ ಕುಲುಕಿ, ಅಪ್ಪಿಕೊಂಡಿದ್ದರಲ್ಲಿ ಯಾವುದೇ ನಾಟಕೀಯತೆ ಕಂಡು ಬಂದಿಲ್ಲ.[ಸ್ಟಾರ್ ಗಿಲ್ಡ್ 2014 ಪ್ರಶಸ್ತಿ ವಿಜೇತರ ಪಟ್ಟಿ]

ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ನಿರೂಪಕರಾಗಿರುವ ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಸಲ್ಲೂ ಅಲ್ಲೂ ತನ್ನ ತುಂಟತನ ಬಿಡಲಿಲ್ಲ. ಕೊನೆಯಲ್ಲಿ ಶಾರುಖ್ ಖಾನ್ ಬಾಯಲ್ಲಿ 'ಜೈ ಹೋ' ಎಂದು ಹೇಳಿಸಿಬಿಟ್ಟರು. ಮುಂದೇನಾಯ್ತು? ಓದಿ...

Read more about: salman khan, shahrukh khan, award, bollywood, controversy, gossip, james martin, ಸಲ್ಮಾನ್ ಖಾನ್, ಶಾರುಖ್ ಖಾನ್, ಬಾಲಿವುಡ್, ಗಾಸಿಪ್, ವಿವಾದ, ಪ್ರಶಸ್ತಿ, ಜೇಮ್ಸ್ ಮಾರ್ಟಿನ್
English summary
What we saw just now in Star Guild Award 2014 night is be just that! Salman Khan, who is hosting the Star Guild Award show, not only greeted but congratulated Shahrukh Khan on the mega success of his film Chennai Express.
Please Wait while comments are loading...

Kannada Photos

Go to : More Photos