»   » ಸಚಿನ್ ಜೊತೆ ಸನ್ನಿ ಲಿಯೋನ್ ಬೋಲ್ಡ್ ಅವತಾರ

ಸಚಿನ್ ಜೊತೆ ಸನ್ನಿ ಲಿಯೋನ್ ಬೋಲ್ಡ್ ಅವತಾರ

Written by: ರವಿಕಿಶೋರ್
Subscribe to Filmibeat Kannada
ಈಗಾಗಲೆ ಬಾಲಿವುಡ್ ನಲ್ಲಿ ಜಿಸ್ಮ್ 2 ಚಿತ್ರದ ಮೂಲಕ ಚಿತ್ರರಸಿಕರ ಕಣ್ಣು ಅರಳಿಸಿರುವ ತಾರೆ ಸನ್ನಿ ಲಿಯೋನ್. ಈಗ ಮತ್ತೊಂದು ಚಿತ್ರದ ಮೂಲಕ ಚಿತ್ರರಸಿಕರ ನಿದ್ದೆಗೆಡಿಸಲು ಬರುತ್ತಿದ್ದಾರೆ. ಸಚಿನ್ ಜೋಶಿ ಜೊತೆಗಿನ ಜಾಕ್ ಪಾಟ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಗೋವಾದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಸನ್ನಿ ಲಿಯೋನ್ ಬೋಲ್ಡ್ ಆಗಿ ಅಭಿನಯಿಸಿದ್ದಾರೆ. "ಈ ದೃಶ್ಯದ ಬಗ್ಗೆ ನಾನೇನೂ ಹೆಚ್ಚಿಗೆ ಮಾತನಾಡಲ್ಲ. ಪ್ರೇಕ್ಷಕರಿಗೆ ಬಿಟ್ಟಿದ್ದೇನೆ. ಆದರೆ ಈ ದೃಶ್ಯ ಅಶ್ಲೀಲವಾಗಿ ಮಾತ್ರ ಇಲ್ಲ" ಎಂದಿದಾರೆ ಸಚಿನ್.

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಸಹ ಅಭಿನಯಿಸುತ್ತಿರುವುದು. ಜಾಕ್ ಪಾಟ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಪೋಷಿಸುತ್ತಿರುವ ಡೇನಿಯಲ್ ತುಂಬಾ ಎಕ್ಸೈಟ್ ಆಗಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಸನ್ನಿ, "ತಮ್ಮ ಪತಿಗೆ ಯಾವ ರೀತಿಯ ಡ್ರೆಸ್ ತೊಡಬೇಕು. ಹೇಗೆ ಅಭಿನಯಿಸಬೇಕು ಎಂದು ಸಲಹೆ ನೀಡುತ್ತಿದ್ದೇನೆ" ಎಂದಿದ್ದಾರೆ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಕೈಝಾದ್ ಗುಸ್ತಾದ್. ಈ ಹಿಂದೆ ಅವರು 'ಭೂಮ್' ಚಿತ್ರವನ್ನು ನಿರ್ದೇಶಿಸಿದ್ದರು. ಅದಾದ ಬಳಿಕ ಅವರು ಬಾಲಿವುಡ್ ಚಿತ್ರಜಗತ್ತಿನಿಂದ ತುಂಬಾ ದೂರ ಉಳಿದಿದ್ದರು. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಅವರದು ನಯನುಡಿಯರಿತ ಪಾತ್ರ ಎನ್ನುತ್ತಾರೆ ನಿರ್ದೇಶಕರು.

English summary
Sunny Leone has done another bold scene in a mainstream cinema. The porn-star turned actress was earlier seen in a daring bare role in the Bollywood film Jism 2. This time, it is in the upcoming movie called Jackpot with Sachin Joshi.
Please Wait while comments are loading...

Kannada Photos

Go to : More Photos