»   » ಹಾಟ್ ಫೊಟೋ ಶೂಟ್ ನಲ್ಲಿ ಸನ್ನಿಯ ಸೊಬಗು ನೋಡ್ರಲ್ಲಾ..

ಹಾಟ್ ಫೊಟೋ ಶೂಟ್ ನಲ್ಲಿ ಸನ್ನಿಯ ಸೊಬಗು ನೋಡ್ರಲ್ಲಾ..

Posted by:
Subscribe to Filmibeat Kannada

ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಅವರು ಎಫ್.ಐ.ಆರ್ ಮೂಲಕ ಮೊನ್ನೆ ಮೊನ್ನೆ ಸುದ್ದಿಯಾಗಿದ್ದವರು ಇದೀಗ ಮತ್ತೆ ಬಿಟೌನ್ ನಲ್ಲಿ ಸುದ್ದಿ ಮಾಡಿದ್ದಾರೆ.

ಈ ಬಾರಿ ಸುದ್ದಿ ಮಾಡಿರೋದು ಮಾತ್ರ ಸಖತ್ ಆಗಿರೋ ಹಾಟ್ ಫೊಟೋ ಶೂಟ್ ನಿಂದ. ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ನಟಿ ಸನ್ನಿ ಲಿಯೋನ್ ಅವರು ಈ ಬಾರಿ ಹಾಟ್ ಹಾಟ್ ಫೊಟೋ ಅಪ್ ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.[ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?]

ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಫೊಟೋ ಶೂಟ್ ಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ಬೇಬಿ ಡಾಲ್ ಸನ್ನಿ ಲಿಯೋನ್ ಅವರು ಇದೀಗ ಮ್ಯಾಕ್ಸಿಮ್ ಇಂಡಿಯಾ ಎಂಬ ಮ್ಯಾಗಜೀನ್ ಒಂದು ನಡೆಸಿದ ಫೊಟೋ ಶೂಟ್ ನಲ್ಲಿ ಸಖತ್ ಹಾಟ್ ಪೋಸ್ ನೀಡಿದ್ದಾರೆ.[ಚಿತ್ರಗಳು: 27 ತರಹೇವಾರಿ ಬಿಕಿನಿಯಲ್ಲಿ ಸನ್ನಿಯ ಸೊಗಸು]

ಮಾಡೆಲ್ ಕಿಮ್ ಶರ್ಮಾ ಅವರನ್ನು ಮೀರಿಸುವಂತೆ ಹಾಟ್ ಫೊಟೋ ಶೂಟ್ ನಲ್ಲಿ ಭಾಗವಹಿಸಿದ ಮಾದಕ ಬೆಡಗಿ ಸನ್ನಿ ಅವರು ಮ್ಯಾಗಜೀನ್ ಗಾಗಿ ಮಾಡಿದ ಫೊಟೋ ಶೂಟ್ ನಲ್ಲಿ ಒಂದನ್ನು ಆಯ್ದು ತಮ್ಮ ಫೇಸ್ ಬುಕ್ಕ್ ಗೆ ಅಪ್ ಲೋಡ್ ಮಾಡಿದ್ದಾರೆ.

ಜೊತೆಗೆ ಈ ಫೊಟೋ ಮ್ಯಾಕ್ಸಿಮ್ ಇಂಡಿಯಾ ಮ್ಯಾಗಜೀನ್ ಗೆ ಮಾಡಿದ ಫೊಟೋ ಶೂಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ವಯ್ಯಾರಿ ಸನ್ನಿ ಅವರು 'ಮಸ್ತಿಜಾದೆ' ಸಿನಿಮಾದಲ್ಲಿ ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 27 ತರೇಹವಾರಿ ಬಿಕಿನಿ ಧರಿಸಿ ಕೂಡ ಬಿಟೌನ್ ನಲ್ಲಿ ಸೌಂಡ್ ಮಾಡಿದ್ದರು. ಇದೀಗ ಮ್ಯಾಗಜೀನ್ ಸರದಿ.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

ಒಟ್ನಲ್ಲಿ ಒಂದಲ್ಲಾ ಒಂದು ಕಾರಣಗಳನ್ನು ಇಟ್ಟುಕೊಂಡು ಸುದ್ದಿ ಮಾಡುವ ಸನ್ನಿ ಲಿಯೋನ್ ಪಡ್ಡೆ ಹುಡುಗರಿಗೆ ಖಾಯಂ ನಿದ್ದೆ ಬರದ ಹಾಗೆ ಮಾಡಿದ್ದಾರೆ ಎಂದರೂ ತಪ್ಪೇನಿಲ್ಲ. ನೀವೇನಂತೀರಾ?.

English summary
Bollywood Actress Sunny Leone has surpassed all expectations. She is one of the most hottest girl in Bollywood these days. Here are the hot picture of Sunny from the Maxim India Magazine.
Please Wait while comments are loading...

Kannada Photos

Go to : More Photos