»   » ಮೂವತ್ತೆರಡರ ಹರೆಯಕ್ಕೆ ಅಡಿಯಿಟ್ಟ ಸನ್ನಿ ಲಿಯೋನ್

ಮೂವತ್ತೆರಡರ ಹರೆಯಕ್ಕೆ ಅಡಿಯಿಟ್ಟ ಸನ್ನಿ ಲಿಯೋನ್

Written by: ರವಿಕಿಶೋರ್
Subscribe to Filmibeat Kannada

ತಿಳಿನೀಲಿ ಚಿತ್ರಗಳ ತಾರೆ ಎನ್ನಿಸಿಕೊಂಡಿದ್ದ ತಾರೆ ಸನ್ನಿ ಲಿಯೋನ್ ಮೂವತ್ತೆರಡರ ಹರೆಯಕ್ಕೆ ಅಡಿಯಿಟ್ಟಿದ್ದಾರೆ. ಈ ಬಾರಿ ಅವರ ಹುಟ್ಟುಹಬ್ಬ ಸೋಮವಾರ (ಮೇ.13) ಅಕ್ಷಯ ತೃತೀಯದಂದು ಬಂದಿರುವುದು ವಿಶೇಷ.

ಈಗಾಗಾಲೆ ಬಾಲಿವುಡ್ ನಲ್ಲಿ ಹೊಸ ಅಲೆ ಎಬ್ಬಿಸಿರುವ ನಟಿಯಾಗಿ ಸನ್ನಿ ಹೊರಹೊಮ್ಮಿದ್ದಾರೆ. ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್ ಗೆ ಅಡಿಯಿಟ್ಟ ಈ ಕೆನಡಾದ ವಯಸ್ಕರ ಚಿತ್ರಗಳ ರಾಣಿ ಈಗ ಎಂಎಂಎಸ್ 2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸನ್ನಿ ಲಿಯೋನ್ ನಿಜ ನಾಮಧೇಯ ಕರೆಂಜಿತ್ ಕೌರ್ ವಹೋರ. ಇದು ಆಕೆಯ ಪಾಸ್ ಪೋರ್ಟ್ ನಲ್ಲಿರುವ ಹೆಸರು. ಹುಟ್ಟೂರು ಕೆನಡ. ಈಕೆಯ ನಿಕ್ ನೇಮ್ ಕರೆನ್. ಬೆಳ್ಳಿಪರದೆಗೆ ಅಡಿಯಿಟ್ಟ ಈಕೆ ತಮ್ಮ ಹೆಸರನ್ನು ಸನ್ನಿ ಎಂದು ಹೆಸರು ಬದಲಾಯಿಸಿಕೊಂಡರು.

ಹೆಸರಿನಲ್ಲೇ ಸಿಂಹಕಟಿ ಹೊಂದಿರುವ ತಾರೆ

ಹೆಸರಿನಲ್ಲೇ ಸಿಂಹಕಟಿ ಹೊಂದಿರುವ ತಾರೆ

ಇನ್ನು ಈಕೆಯ ಹೆಸರಿನಲ್ಲಿರುವ ಲಿಯೋನ್ ಎಂದರೆ ಆಂಗ್ಲ ಪದ 'Lioness' (ಸಿಂಹಿಣಿ) ಎಂದರ್ಥವಂತೆ. ವಯಸ್ಕರ ಚಿತ್ರಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು.

ಮಕ್ಕಳ ಶುಶ್ರೂಷಕಿಯಾಗಿದ್ದ ಸನ್ನಿ ಲಿಯೋನ್

ಮಕ್ಕಳ ಶುಶ್ರೂಷಕಿಯಾಗಿದ್ದ ಸನ್ನಿ ಲಿಯೋನ್

ವಯಸ್ಕರ ಚಿತ್ರಗಳಿಗೆ ಅಡಿಯಿಡುವುದಕ್ಕೂ ಮುನ್ನ ಸನ್ನಿ ಮಕ್ಕಳ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು. ಹತ್ತೊಂಬತ್ತನೇ ವರ್ಷಕ್ಕೆ ಅಡಿಯಿಡುತ್ತಿದ್ದಂತೆ ಸನ್ನಿ ಲಿಯೋನ್ ವಯಸ್ಕರ ಚಿತ್ರಗಳಿಗೆ ಪಾದಾರ್ಪಣೆ ಮಾಡಿದರು.

ಹಾಗೆ ಬಂದು ಹೀಗೆ ಹೋಗಲು ಹತ್ತು ಲಕ್ಷ ಕೇಳಿದ್ದರಂತೆ

ಹಾಗೆ ಬಂದು ಹೀಗೆ ಹೋಗಲು ಹತ್ತು ಲಕ್ಷ ಕೇಳಿದ್ದರಂತೆ

ಬಾಲಿವುಡ್ ನ ನೀಲಿ ಚಿತ್ರವೊಂದಕ್ಕೂ ಸನ್ನಿ ಸಹಿ ಹಾಕಿದ್ದರಂತೆ. ಆ ಚಿತ್ರದಲ್ಲಿ ಸನ್ನಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. 'ಕಲಿಯುಗ್' ಎಂಬ ಆ ಚಿತ್ರದಲ್ಲಿ ಹಾಗೆ ಬಂದು ಹೀಗೆ ಹೋಗಲು ಸನ್ನಿ ಲಿಯೋನ್ ಕೇಳಿದ್ದದ್ದು ಬರೋಬ್ಬರಿ ಹತ್ತು ಲಕ್ಷ ರುಪಾಯಿ. ಅಷ್ಟೆಲ್ಲಾ ಆಗಲ್ಲ ಬಿಡಿ ಎಂದು ನಿರ್ದೇಶಕ ಮೋಹಿತ್ ಸೂರಿ ಗೋಣು ಅಲ್ಲಾಡಿಸಿದ್ದರು.

ಪ್ರಭಾವಿ ಪೋರ್ನ್ ಸ್ಟಾರ್ ಗಳಲ್ಲಿ 12ನೇ ಸ್ಥಾನ

ಪ್ರಭಾವಿ ಪೋರ್ನ್ ಸ್ಟಾರ್ ಗಳಲ್ಲಿ 12ನೇ ಸ್ಥಾನ

ಪುರುಷರ ನಿಯತಕಾಲಿಕೆ 'ಮ್ಯಾಕ್ಸಿಮ್' ಪ್ರಕಾರ ಜಗತ್ತಿನ ಅತ್ಯಂತ ಪ್ರಭಾವಿ ಪೋರ್ನ್ ಸ್ಟಾರ್ ಗಳಲ್ಲಿ ಸನ್ನಿ ಲಿಯೋನ್ ಗೆ 12 ಸ್ಥಾನ ನೀಡಿದೆ. 'ಬಿಗ್ ಬಾಸ್' ಮೂಲಕ ಕಿರುತೆರೆಗೂ ಸನ್ನಿ ಅಡಿಯಿಟ್ಟಿದ್ದಾರೆ. ಕಿರುತೆರೆಯಲ್ಲಿ ಕಾಣಿಸಿಕೊಂಡ ಮೊದಲ ನೀಲಿ ಚಿತ್ರಗಳ ನಟಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಶ್ರೀಮಂತ ನೀಲಿ ತಾರೆಗಳಲ್ಲಿ 19ನೇ ಸ್ಥಾನ

ಶ್ರೀಮಂತ ನೀಲಿ ತಾರೆಗಳಲ್ಲಿ 19ನೇ ಸ್ಥಾನ

ಕೆನಡಾ ಮೂಲದ ಈ ತಾರೆ ವಿಶ್ವದ ಶ್ರೀಮಂತ ನೀಲಿ ಚಿತ್ರಗಳ ತಾರೆಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಒಟ್ಟು ಇಪ್ಪತ್ತು ಮಂದಿ ತಾರೆಗಳಲ್ಲಿ ಸನ್ನಿಗೆ ಸಿಕ್ಕಿರುವುದು 19ನೇ ಸ್ಥಾನ. ವಿಶ್ವದ ಶ್ರೀಮಂತ ನೀಲಿ ಚಿತ್ರ ತಾರೆಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಸನ್ನಿಯ ಆಸ್ತಿ ರು.8 ಕೋಟಿ ಅಷ್ಟೆ.

ಹದಿನಾರರಲ್ಲೇ ಕನ್ಯತ್ವ ಕಳೆದುಕೊಂಡ ಸನ್ನಿ ಲಿಯೋನ್

ಹದಿನಾರರಲ್ಲೇ ಕನ್ಯತ್ವ ಕಳೆದುಕೊಂಡ ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರ ತೀರಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಹದಿನಾರನೇ ವಯಸ್ಸಿನಲ್ಲೇ ಬ್ಯಾಸ್ಕೆಟ್ ಬಾಲ್ ಪಟುವೊಬ್ಬನ ಜೊತೆ ಜೂಟಾಟ ಆಡಿದ ಸುದ್ದಿ ಇದೆ. ಆಗಲೇ ಆಕೆಯ ಕನ್ಯತ್ವ ಕಾಣೆಯಾಗಿತ್ತು ಎಂಬ ಗುಸುಗುಸು ಸುದ್ದಿಗಳು ಇವೆ.

English summary
Bollywood actress Sunny Leone is turning 32 today. It’s all going to be a happy hour for Sunny, as her item number ‘Laila teri le legi’ has become a huge hit. She is busy shooting her second Bollywood movie ‘Ragini MMS 2’
Please Wait while comments are loading...

Kannada Photos

Go to : More Photos