»   » ವಿಘ್ನೇಶ್ವರನಿಗೆ ಸನ್ನಿ ಲಿಯೋನ್ ವಿಶೇಷ ಪೂಜೆ

ವಿಘ್ನೇಶ್ವರನಿಗೆ ಸನ್ನಿ ಲಿಯೋನ್ ವಿಶೇಷ ಪೂಜೆ

Written by: ಉದಯರವಿ
Subscribe to Filmibeat Kannada

ಮುಂಬೈನ ಸಿದ್ಧಿವಿನಾಯಕ ಮಂದಿರಕ್ಕೂ ಬಾಲಿವುಡ್ ತಾರೆಗಳಿಗೂ ಬಿಡಿಸಲಾರದ ನಂಟು. ಈಗಾಗಲೆ ಅದೆಷ್ಟೋ ಬಾಲಿವುಡ್ ತಾರೆಗಳು ಈ ಮಂದಿರಕ್ಕೆ ಭೇಟಿ ನೀಡಿ ವಿಘ್ನೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ. ಈಗಷ್ಟೇ ಬಾಲಿವುಡ್ ನಲ್ಲಿ ಕುಂಟಾಬಿಲ್ಲೆ ಆಡುತ್ತಿರುವ ಬೆಡಗಿ ಸನ್ನಿ ಲಿಯೋನ್ ಸಹ ಇತ್ತೀಚೆಗೆ ಭೇಟಿ ನೀಡಿದ್ದರು.

ತಮ್ಮ ಚಿತ್ರಕ್ಕೆ ಯಾವುದೇ ವಿಘ್ನಗಳು ಎದುರಾಗದಿರಲಿ. ಚಿತ್ರೀಕರಣ ಸುಸೂತ್ರವಾಗಿ ನಡೆದು ಕುಂಬಳಕಾಯಿ ಒಡೆಸಿಕೊಳ್ಳಲಿ ಎಂದು ಸಿದ್ಧಿವಿನಾಯಕನಿಗೆ ಬಾಲಿವುಡ್ ತಾರೆಗಳು ಮೊರೆ ಹೋಗುವುದುಂಟು. ಬಾಲಿವುಡ್ ಗೆ ಅಡಿಯಿಟ್ಟ ಬಳಿಕ ಸನ್ನಿ ಲಿಯೋನ್ ಅವರಿಗೂ ಭಕ್ತಿರಸ ಉಕ್ಕಿಬಂದಂತಿದೆ.

ಸನ್ನಿ ಜೊತೆಗೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್

ಸನ್ನಿ ಜೊತೆಗೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್

ರಾಗಿಣಿ ಎಂಎಂಎಸ್ 2 ಚಿತ್ರದಲ್ಲಿ ಅಭಿನಯಿಸುತ್ತಿರುವ ಸನ್ನಿ ತಮ್ಮ ಚಿತ್ರಕ್ಕೆ ಯಾವುದೇ ವಿಘ್ನಗಳು ಎದುರಾಗದಿರಲಿ. ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸನ್ನಿ ಜೊತೆಗೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಅವರೂ ಇದ್ದರು.

ಕಡುನೀಲಿ ಬಣ್ಣದ ಸಲ್ವಾರ್ ಕಮೀಜ್ ನಲ್ಲಿ ತಾರೆ

ಕಡುನೀಲಿ ಬಣ್ಣದ ಸಲ್ವಾರ್ ಕಮೀಜ್ ನಲ್ಲಿ ತಾರೆ

ತಾವು ನೀಲಿ ಚಿತ್ರಗಳ ತಾರೆ ಎಂಬ ಕಾರಣಕ್ಕೋ ಏನೋ ಸಿದ್ಧಿ ವಿನಾಯಕ ಮಂದಿರಕ್ಕೂ ಕಡುನೀಲಿ ಬಣ್ಣದ ಸಲ್ವಾರ್ ಕಮೀಜ್, ಶ್ವೇತವರ್ಣದ ದುಪ್ಪಟದಲ್ಲಿ ಆಗಮಿಸಿ ಎಲ್ಲರ ಗಮನಸೆಳೆದರು. ದುಪ್ಪಟದ ಅಂಚು ಚಿನ್ನದ ಬಣ್ಣದಿಂದ ಕೂಡಿದ್ದು ಅಲ್ಲಿದ್ದ ಹೆಂಗೆಳೆಯರ ಕಣ್ಮನ ಸೆಳೆಯಿತು.

ಸನ್ನಿ ಮೇಲೆ ಶಿವಸೇನಾ ಕಾರ್ಯಕರ್ತರ ಕೆಂಗಣ್ಣು

ಸನ್ನಿ ಮೇಲೆ ಶಿವಸೇನಾ ಕಾರ್ಯಕರ್ತರ ಕೆಂಗಣ್ಣು

ಹಣೆಗೆ ತಿಲಕ ಇಟ್ಟುಕೊಂಡು ಅಪ್ಪಟ ಭಾರತೀಯ ನಾರಿಯಂತೆ ಸನ್ನಿ ಲಿಯೋನ್ ಸಿದ್ಧಿ ವಿನಾಯಕನ ಮುಂದೆ ಕೈಜೋಡಿಸಿ ನಿಂತಿದ್ದರು. ಪೂಜೆ, ಅರ್ಚನೆ ಮುಗಿಸಿಕೊಂಡು ಅವರೇನೋ ಹೊರಟರು. ಆದರೆ ಸನ್ನಿ ಲಿಯೋನ್ ಸಿದ್ಧಿವಿನಾಯಕ ಮಂದಿರಕ್ಕೆ ಬಂದದ್ದು ಶಿವಸೇನಾ ಕಾರ್ಯಕರ್ತರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ.

ಸನ್ನಿ ಮೇಲೆ ಸಾಮ್ನಾ ಪತ್ರಿಕೆ ಸಿಡಿಮಿಡಿ

ಸನ್ನಿ ಮೇಲೆ ಸಾಮ್ನಾ ಪತ್ರಿಕೆ ಸಿಡಿಮಿಡಿ

ನಿಜವಾದ ಭಕ್ತಿ ಭಾವದಿಂದ ಮಂದಿರಕ್ಕೆ ಬಂದರೆ ಓಕೆ. ಆದರೆ ಸನ್ನಿ ಲಿಯೋನ್ ಕೇವಲ ಪ್ರಚಾರಕ್ಕಾಗಿ ಮಾತ್ರ ಮಂದಿರಕ್ಕೆ ಬಂದಿದ್ದಾರೆ ಎಂದು ಶಿವಸೇನಾ ಕಾರ್ಯಾಕರ್ತರು ಕೆಂಪು ಬಾವುಟ ತೋರಿಸಿ ಪ್ರತಿಭಟಿಸಿದರು. ಪ್ರಚಾರಕ್ಕಾಗಿ ಮಂದಿರಕ್ಕೆ ಭೇಟಿ ನೀಡುವ ತಾರೆಗಳಿಗೆ ದೇವಸ್ಥಾನಗಳಲ್ಲಿ ನಿಷೇಧ ಹೇರಬೇಕು ಎಂದರು ಶಿವಸೇನೆಯ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲೂ ಕಿಡಿಕಾರಲಾಗಿದೆ.

ರಾಗಿಣಿ ಎಂಎಂಎಸ್ ಚಿತ್ರಕ್ಕಾಗಿ 1 ಕೋಟಿ ಸಂಭಾವನೆ

ರಾಗಿಣಿ ಎಂಎಂಎಸ್ ಚಿತ್ರಕ್ಕಾಗಿ 1 ಕೋಟಿ ಸಂಭಾವನೆ

ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ರಾಗಿಣಿ ಎಂಎಂಎಸ್ 2 ಚಿತ್ರಕ್ಕೆ ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕನ್ನಡಕ್ಕೂ ಬರ್ತಾರಂತೆ ಸನ್ನಿ ಲಿಯೋನ್

ಕನ್ನಡಕ್ಕೂ ಬರ್ತಾರಂತೆ ಸನ್ನಿ ಲಿಯೋನ್

ರಾಗಿಣಿ ಎಂಎಂಎಸ್ ಚಿತ್ರದ ಬಳಿಕ ಸನ್ನಿ ಲಿಯೋನ್ ಕನ್ನಡ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಸನ್ನಿಯನ್ನು ಕನ್ನಡಕ್ಕೆ ಕರೆತರುತ್ತಿರುವ ನಿರ್ಮಾಪಕ ಕೆ ಮಂಜು. ಕನ್ನಡ ಹಾಗೂ ಹಿಂದಿ ದ್ವಿಭಾಷಾ ಚಿತ್ರ ಇದಾಗಿದ್ದು ಸನ್ನಿಗೆ ರು.1.5 ಕೋಟಿ ಸಂಭಾವನೆ. ನೀಡಲಾಗಿದೆಯಂತೆ.

English summary
Bollywood actor Sunny Leone visited the famous Siddhivinayak temple along with Ekta Kapoor to seek blessings. She was wearing a blue and magenta kameez and salwar with a white dupatta with golden border, and a tilak adorned her forehead.
Please Wait while comments are loading...

Kannada Photos

Go to : More Photos