twitter
    For Quick Alerts
    ALLOW NOTIFICATIONS  
    For Daily Alerts

    ಮಿನುಗುವ ಮುನ್ನವೇ ಮುದುಡಿದ ಬಾಲಿವುಡ್ ತಾರೆಯರು

    |

    ಪರದೆಯ ಮೇಲೆ ನಮ್ಮನ್ನು ರಂಜಿಸುವ ಸೆಲೆಬ್ರಿಟಿಗಳ ತೆರೆಯ ಹಿಂದಿನ ನೋವಿನ ಕಥೆಯೇ ಬೇರೆ. ತೆರೆಯ ಮೇಲೆ ಹತ್ತಾರು ಗೂಂಡಾಗಳನ್ನು ಏಕಕಾಲಕ್ಕೆ ಹೊಡೆದುರುಳಿಸುವ ಇವರ ನಿಜ ಜೀವನದ ನೋವು, ದುಃಖ, ದುಮ್ಮಾನಗಳು ತೆರೆಯ ಹಿಂದಕ್ಕಷ್ಟೇ ಸೀಮಿತ.

    ಬಣ್ಣದ ಲೋಕವೆಂಬ ಚಿತ್ರರಂಗ ತನ್ನ ಒಡಲಲ್ಲಿ ಅನೇಕ ದುರಂತಗಳನ್ನು ಅಡಗಿಸಿಕೊಂಡಿದೆ. ತಮ್ಮ ಸಣ್ಣ ವಯಸ್ಸಿನಲ್ಲೇ ಐಷಾರಾಮಿ ಜೀವನದ ಹೊರತಾಗಿಯೂ ಅದೆಷ್ಟೋ ನೋವುಗಳನ್ನು ಸಿನಿಮಾ ಲೋಕದ ಮಂದಿ ಅನುಭವಿಸುತ್ತಿದ್ದಾರೆ.

    ತೆರೆಯ ಮೇಲೆ ಆದರ್ಶಪ್ರಾಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಲಾವಿದರ ನಿಜ ಜೀವನದ ಪಾತ್ರಗಳೇ ಬೇರೆಯದಾಗಿರುತ್ತದೆ. ನಮ್ಮನ್ನೆಲ್ಲಾ ತೆರೆಯ ಮೇಲೆ ರಂಜಿಸಿ, ತಮ್ಮ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿದ ಬಾಲಿವುಡ್ ಜಗತ್ತಿನ ಆರು ಪ್ರಮುಖ ಸೆಲೆಬ್ರಿಟಿಗಳನ್ನು ಸ್ಲೈಡಿನಲ್ಲಿ ನೋಡಿ..

    ಸ್ಮಿತಾ ಪಾಟೀಲ್

    ಸ್ಮಿತಾ ಪಾಟೀಲ್

    ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಪ್ರತಿಭಾನ್ವಿತ ನಟಿ ಸ್ಮಿತಾ ಪಾಟೀಲ್ ಜನಿಸಿದ್ದು 17.10.1955ರಲ್ಲಿ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಗಳಿಸಿದ್ದ ಸ್ಮಿತಾ 13.12.1986ರಲ್ಲಿ (31ನೇ ವಯಸ್ಸಿನಲ್ಲಿ) ನಿಧನರಾದರು. ನಿಶಾಂತ್, ಆಕ್ರೋಶ್, ನಮಕ್ ಹಲಾಲ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈಕೆ ಹಿಂದಿ ನಟ ರಾಜ್ ಬಬ್ಬರ್ ಅವರನ್ನು ಮದುವೆಯಾಗಿದ್ದರು.

    ದಿವ್ಯ ಭಾರತಿ

    ದಿವ್ಯ ಭಾರತಿ

    ದಿವ್ಯ ಓಂ ಪ್ರಕಾಶ್ ಭಾರತಿ 25.02.1974 ರಲ್ಲಿ ಮುಂಬೈನಲ್ಲಿ ಜನಿಸಿದರು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ 22 ಚಿತ್ರಗಳಲ್ಲಿ ನಟಿಸಿದ್ದ ಈಕೆ ಸಾಜಿದ್ ನಾಡಿಯಾವಾಲ ಅವರನ್ನು ಮದುವೆಯಾಗಿದ್ದರು. ಬೊಬ್ಬಿಲಿ ರಾಜ, ರೌಡಿ ಅಲ್ಲಡು, ಶೋಲಾ ಔರ್ ಶಬ್ನಂ ಮುಂತಾದ ಯಶಸ್ವಿ ಚಿತ್ರದಲ್ಲಿ ನಟಿಸಿದ್ದ ದಿವ್ಯ ಭಾರತಿ 05.04.1993ರಲ್ಲಿ (19ನೇ ವಯಸ್ಸಿನಲ್ಲಿ) ಸಾವನ್ನಪ್ಪಿದರು. ಈಕೆಯ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದು ಈಗಿನವರೆಗೂ ಸ್ಪಷ್ಟವಾಗಿಲ್ಲ.

    ಮಧುಬಾಲ

    ಮಧುಬಾಲ

    ಭಾರತೀಯ ಸಿನಿಮಾದ 'ಅನಾರ್ಕಲಿ' ಎಂದೇ ಹೆಸರಾಗಿದ್ದ ಅಪ್ರತಿಮ ಸುಂದರಿ ಮುಮ್ತಾಜ್ ಜಹಾನ್ ಆಲಿಯಾಸ್ ಮಧುಬಾಲ. 14.02.1933ರಲ್ಲಿ ದೆಹಲಿಯಲ್ಲಿ ಜನಿಸಿದ ಈಕೆ ತನ್ನ 36ನೇ ವಯಸ್ಸಿನಲ್ಲಿ ಅಂದರೆ 23.02.1969ರಲ್ಲಿ (33ನೇ ವಯಸ್ಸಿನಲ್ಲಿ) ಇಹಲೋಕ ತ್ಯಜಿಸಿದರು. ಬಸಂತಿ, ಮೊಗಲ್-ಇ-ಆಜಾಂ, ಚಲ್ತಿಕಾ ನಾಮ್ ಗಾಡಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಧುಬಾಲ ಕಿಶೋರ್ ಕುಮಾರ್ ಅವರನ್ನು ವರಿಸಿದ್ದರು.

    ಮೀನಾ ಕುಮಾರಿ

    ಮೀನಾ ಕುಮಾರಿ

    ಮಹಾಜಾಬೀನ್ ಬಾನು ಆಲಿಯಾಸ್ ಮೀನಾ ಕುಮಾರಿ ಎನ್ನುವ ಹೆಸರು ಭಾರತೀಯ ಚಿತ್ರರಂಗದಲ್ಲಿ ಮರೆಯಲಾಗದ್ದು. 01.08.1932ರಲ್ಲಿ ಮುಂಬೈನಲ್ಲಿ ಜನಿಸಿದ ಮೀನಾ ಕುಮಾರಿ ಪರಿಣೀತಾ, ಬೈಜು ಭಾವ್ರಾ, ಚಾರ್ ದಿಲ್ ಚಾರ್ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಕೀಜಾ ಮುಂತಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಜನಪ್ರಿಯರಾಗಿದ್ದರು. ಕುಡಿತಕ್ಕೆ ಶರಣಾಗಿದ್ದ ಮೀನಾ ಕುಮಾರಿ 31.03.1972 (39ನೇ ವಯಸ್ಸಿನಲ್ಲಿ) ದುರಂತ ಸಾವನ್ನಪ್ಪಿದರು.

    ಗುರುದತ್

    ಗುರುದತ್

    ಗುರುದತ್ ಶಿವಶಂಕರ್ ಪಡುಕೋಣೆ 09.07.1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗ ಕಂಡ ಓರ್ವ ಅಮೋಘ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ಗುರುದತ್ ಕಲಾತ್ಮಕ ಮತ್ತು ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಎತ್ತಿದ ಕೈ. ಹಿನ್ನೆಲೆ ಗಾಯಕಿಯಾಗಿದ್ದ ಗೀತಾ ರಾಯ್ ಅವರನ್ನು ಗುರುದತ್ ಲಗ್ನವಾಗಿದ್ದರು. ಇವರ ಅನೇಕ ಉತ್ತಮ ಚಿತ್ರಗಳಲ್ಲಿ ಪ್ಯಾಸಾ, ಸುಹಾಗನ್, ಸಾಹಿಬ್ ಬೀಬಿ ಔರ್ ಗುಲಾಮ್, ಚೌದ್ವೀ ಕಾ ಚಾಂದ್. ಅತಿಯಾದ ಮದ್ಯವ್ಯಸನಿಯಾಗಿದ್ದ ಗುರುದತ್ 10.10.1964ರಲ್ಲಿ (38ನೇ ವಯಸ್ಸಿನಲ್ಲಿ) ಸಾವನ್ನಪ್ಪಿದರು. ಇವರ ಸಾವು ಆತ್ಮಹತ್ಯೆ ಎನ್ನುವ ಗುಮಾನಿ ಕೂಡಾ ಇತ್ತು.

    ಗೀತಾ ಬಾಲಿ

    ಗೀತಾ ಬಾಲಿ

    ಹರಿಕೀರ್ತನ್ ಕೌರ್ ಆಲಿಯಾಸ್ ಗೀತಾ ಬಾಲಿ ಜನಿಸಿದ್ದು ಪಂಜಾಬಿನ ಅಮೃತಸರದಲ್ಲಿ. ಬದ್ನಾಮಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಈಕೆ ಕಪೂರ್ ಖಾಂದಾನಿನ ಶಮ್ಮಿ ಕಪೂರ್ ಅವರನ್ನು ಮದುವೆಯಾದರು. 21.01.1965 (35ನೇ ವಯಸ್ಸಿನಲ್ಲಿ) ಸಾವನ್ನಪ್ಪಿದ ಈಕೆಯ ಖ್ಯಾತ ಸಿನಿಮಾಗಳೆಂದರೆ ಬಾಜಿ, ಭಗವಾನ್ ದಾದಾ, ಜಾಲ್.

    English summary
    We are seeing stars on the silver screen playing larger than life roles, but their real life is different. This list of top six Bollywood stars who died in young.
    Wednesday, May 22, 2013, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X