»   » ಮದುವೆ ಆಗದೇ ಅಪ್ಪನಾದ ಅಪರೂಪದ ಬಾಲಿವುಡ್ ನಟ

ಮದುವೆ ಆಗದೇ ಅಪ್ಪನಾದ ಅಪರೂಪದ ಬಾಲಿವುಡ್ ನಟ

Written by: ಸೋನು ಗೌಡ
Subscribe to Filmibeat Kannada

ಮದುವೆಯಾಗಿ ತಂದೆಯಾಗೋದು ಅಥವಾ ದತ್ತು ಮಕ್ಕಳನ್ನು ಪಡೆದುಕೊಂಡು ತಂದೆಯಾಗೋದು ದೊಡ್ಡ ವಿಷಯವಲ್ಲ. ಆದರೆ ಮದುವೆಯಾಗದೇ ತಂದೆಯಾಗೋದು ಅಂದರೆ ಕೊಂಚ ವಿಶೇಷ ಅಂತ ಅನಿಸುತ್ತಿದೆ ಅಲ್ವಾ?. ಇದೀಗ ಬಾಲಿವುಡ್ ನಟ ಒಬ್ಬರು ಮದುವೆಯಾಗದೇ ಒಂದು ಗಂಡು ಮಗುವಿನ ತಂದೆ ಆಗಿದ್ದಾರೆ.

ಹೌದು ಬಾಲಿವುಡ್ ನ ಖ್ಯಾತ ನಟ ತುಷಾರ್ ಕಪೂರ್ ಅವರು ಬಾಡಿಗೆ ತಾಯಿಯ ಸಹಾಯದಿಂದ ತಂದೆಯಾಗಿದ್ದಾರೆ. ಪ್ರನಾಳೀಯ ಫಲೀಕರಣ ವಿಧಾನ (vitro fertilization procedure) ಸರೋಗಸಿ (ಬಾಡಿಗೆ ಗರ್ಭ) ಸಹಾಯದಿಂದ ಮುದ್ದಾದ ಮಗುವಿಗೆ ತಂದೆಯಾಗಿದ್ದು, ಮಗುವಿಗೆ 'ಲಕ್ಷ್ಯ' ಎಂದು ನಾಮಕರಣ ಮಾಡಿದ್ದಾರೆ.[ಜೆನಿಲಿಯಾಗೆ ಮತ್ತೆ ಮಗು ಆಯ್ತು, ತಾಯಿ ಮಗು ಆರೋಗ್ಯ]

Tusshar Kapoor Becomes The Father Of A Baby Boy

ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಗಂಡು ಮಗು ಜನಿಸಿರುವ ಕಾರಣ ತುಷಾರ್ ಕಪೂರ್ ಅವರು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಮಗು ಜನಿಸಿದ ಖುಷಿಯನ್ನು ತುಷಾರ್ ಕಪೂರ್ ಅವರ ತಂದೆ ಜಿತೇಂದ್ರ ಮತ್ತು ತಾಯಿ ಶೋಭಾ ಕಪೂರ್ ಅವರು ಕೂಡ ಸಂಭ್ರಮದಿಂದ ಆಚರಿಸಿದ್ದಾರೆ.

ಮೊದಲ ಮಗುವನ್ನು ಎತ್ತಿ ಮುದ್ದಾಡುವ ಆಸೆಯಲ್ಲಿರುವ ತುಷಾರ್ ಕಪೂರ್ ಅವರ ತಂದೆ-ತಾಯಿ ತಮ್ಮ ಮಗನ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ತುಷಾರ್ ಕಪೂರ್ ಅವರ ದಿಟ್ಟ ನಡೆಯನ್ನು ಆಸ್ಪತ್ರೆಯ ವೈದ್ಯರು ಕೂಡ ಪ್ರಶಂಸಿಸಿದ್ದಾರೆ.

Tusshar Kapoor Becomes The Father Of A Baby Boy

'ಇತ್ತೀಚೆಗೆ ಸಿಂಗಲ್ ಪೇರೆಂಟ್ ಜಾಸ್ತಿಯಾಗಿದ್ದು, ಒಬ್ಬ ಸೆಲೆಬ್ರಿಟಿಯಾಗಿ ತುಷಾರ್ ಕಪೂರ್ ಅವರು ಇಂತಹ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಜಸ್ಲೋಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

"ಸಿಂಗಲ್ ಪೇರೆಂಟ್ ಆಗಿರಬೇಕೆಂಬ ಕನಸು ನನ್ನಲ್ಲಿ ಹಲವು ದಿನಗಳಿಂದ ಇತ್ತು ಅದೀಗ ನನಸಾಗಿದೆ, ನನಗೆ ಈಗ 40 ವರ್ಷ, ನಾನು ಅರ್ಜೆಂಟಾಗಿ ತಂದೆ ಆಗಬೇಕಿತ್ತು, ಹಾಗಾಗಿ ನಾನು ವೈದ್ಯರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡೆ".

Tusshar Kapoor Becomes The Father Of A Baby Boy

"ನನ್ನ ಈ ನಿರ್ಧಾರದಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ನಮ್ಮ ಕುಟುಂಬಕ್ಕೆ ಒಬ್ಬರು ನೂತನ ಸದಸ್ಯರು ಆಯ್ಕೆ ಆದ್ರು. ನನ್ನ ಮಗ ನೋಡಲು ಥೇಟ್ ನನ್ನಂತೆ ಇದ್ದಾನೆ. ನನಗೆ ಈ ಸಂತಸವನ್ನು ಹೇಗೆ ಆಚರಿಸಿಕೊಳ್ಳಬೇಕೆಂದು ತೋಚುತ್ತಿಲ್ಲ" ಎಂದು ತುಷಾರ್ ಕಪೂರ್ ತಮ್ಮ ಸಂಭ್ರಮವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

English summary
Bollywood Actor Tusshar Kapoor is now a proud father to a baby boy, thanks to surrogacy. The Kapoors are very happy with this development and they named the baby boy Laksshya.
Please Wait while comments are loading...

Kannada Photos

Go to : More Photos