»   » ಬ್ಲಾಕ್ ಬಸ್ಟರ್ ಚಿತ್ರ 'ಬಾಜಿಗರ್'ಗೆ ಇಪ್ಪತ್ತು ವರ್ಷ

ಬ್ಲಾಕ್ ಬಸ್ಟರ್ ಚಿತ್ರ 'ಬಾಜಿಗರ್'ಗೆ ಇಪ್ಪತ್ತು ವರ್ಷ

Posted by:
Subscribe to Filmibeat Kannada

ನಟ ಶಾರುಖ್ ಖಾನ್ ಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರ 'ಬಾಜಿಗರ್' (12 November 1993). ಈ ಚಿತ್ರ ತೆರೆಕಂಡು ಇಂದಿಗೆ (ನ.12) ಇಪ್ಪತ್ತು ವರ್ಷಗಳು. ಶಾರುಖ್ ವೃತ್ತಿ ಬದುಕು ಆಗಷ್ಟೇ ಬಾಲಿವುಡ್ ನಲ್ಲಿ ತಿರುವು ಪಡೆದುಕೊಳ್ಳುತ್ತಿತ್ತು. 'ಬಾಜಿಗರ್' ಚಿತ್ರಕ್ಕೂ ಮುನ್ನ ಅವರ ಯಾವುದೇ ಚಿತ್ರಗಳು ಅಷ್ಟಾಗಿ ಸದ್ದು ಮಾಡಿರಲಿಲ್ಲ.

ಬಾಜಿಗರ್ ಚಿತ್ರದ ಬಳಿಕ ಶಾರುಖ್ ಇಮೇಜ್ ಬದಲಾಯಿತು. ನೆಗಟೀವ್ ಶೇಡ್ ವುಳ್ಳ ಪಾತ್ರಕ್ಕೆ ಸಾಕಷ್ಟು ವಿಮರ್ಶೆಗಳು ಕೇಳಿಬಂದಿದ್ದವು. ಆದರೆ ಚಿತ್ರ ಯಾವಾಗ ಬಾಕ್ಸ್ ಆಫೀಸಲ್ಲಿ ದುಡ್ಡು ಬಾವುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದರು ಕಿಂಗ್ ಖಾನ್.

Baazigar movie still

ಈ ಚಿತ್ರ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಚೊಚ್ಚಲ ಚಿತ್ರ. ಸೀಮಾ ಚೋಪ್ರಾ ಆಗಿ ಶಿಲ್ಪಾ ಅಮೋಘ ಅಭಿನಯ ನೀಡಿದ್ದರು. ಬಾಜಿಗರ್ ಬಿಡುಗಡೆಯಾಗಿ ಇಪ್ಪತ್ತು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಶಾರುಖ್ ಟ್ವೀಟಿಸಿದ್ದು, "ಬಾಜಿಗರ್ ಗೆ ಇಪ್ಪತ್ತು ವರ್ಷ. ತುಂಬಾ ಧನ್ಯವಾದಗಳು ಅಬ್ಬಾಸ್ ಮುಸ್ತಾನ್, ಕಾಜೋಲ್, ಶಿಲ್ಪಾ (ಶೆಟ್ಟಿ) ಹಾಗೂ ರಾಖಿಜಿ (ರಾಖಿ ಗುಲ್ಜಾರ್)" ಎಂದಿದ್ದಾರೆ.

ಥ್ರಿಲ್, ಸಸ್ಪೆನ್ಸ್, ಕಥೆ ಈ ಮೂರು ಅಂಶಗಳನ್ನಿಟ್ಟುಕೊಂಡು ಮಾಡಿದ ವಿಭಿನ್ನ ಪ್ರಯತ್ನವಿದು. ಬಾಲಿವುಡ್ ಚಿತ್ರಗಳ ಏಕತಾನತೆಯನ್ನು ಮುರಿದ ಚಿತ್ರ ಎಂದು ಹೇಳಬಹುದು. ಅನು ಮಲಿಕ್ ಸಂಗೀತ, ಅಬ್ಬಾಸ್ ಮುಸ್ತಾನ್ ಅವರ ಪಂಚಿಂಗ್ ಡೈಲಾಗ್ಸ್ ಚಿತ್ರದ ಪ್ರಮುಖ ಆಕರ್ಷಣೆ.

ಬಾಜಿಗರ್ ಚಿತ್ರ ಕನ್ನಡಕ್ಕೂ 'ನಾಗರಹಾವು' (2002) ಹೆಸರಿನಲ್ಲಿ ರೀಮೇಕ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಜ್ಯೋತಿಕಾ ಅಭಿನಯಿಸಿದ್ದಾರೆ. ಎಸ್ ಮುರಳಿ ಮೋಹನ್ ಆಕ್ಷನ್ ಕಟ್ ಹೇಳಿರುವ ಚಿತ್ರ (ಏಜೆನ್ಸೀಸ್)

English summary
Superstar Shahrukh Khan became nostalgic to realise that 1993 film Baazigar, which was his breakout role, is two decade old. Remembering the film fondly, SRK tweeted – "Twenty years of Baazigar. Thank you Abbas Mustan, Kajol, Shilpa (Shetty) and Rakhiji (Rakhi Gulzar)"
Please Wait while comments are loading...

Kannada Photos

Go to : More Photos