twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯಕ್ಕೆ ಬರ್ತಾರಂತೆ ಪಾಕ್ ಬೆಡಗಿ ವೀಣಾ ಮಲಿಕ್

    By Rajendra
    |

    ಮೊದಲು ಬಣ್ಣದ ಜಗತ್ತು ಆಮೇಲೆ ರಾಜಕೀಯ ಕಸರತ್ತು ಎಂಬುದು ಸಿನಿಮಾ ತಾರೆಗಳ ಹೊಸ ಮಂತ್ರ. ಈ ಮಂತ್ರವನ್ನು ಈಗ ಪಾಕ್ ಬೆಡಗಿ ವೀಣಾ ಮಲಿಕ್ ಜಪಿಸುತ್ತಿದ್ದಾರೆ. ತಾವೂ ರಾಜಕೀಯಕ್ಕೆ ಬರುವುದಾಗಿ ಹೇಳಿಕೊಂಡಿದ್ದಾರೆ. ಆಕೆ ರಾಜಕೀಯಕ್ಕೆ ಬರಬೇಕು ಎಂಬುದು ಅವರ ತಂದೆಯ ಆಶಯವಾಗಿತ್ತಂತೆ.

    ಅವರ ತಂದೆಯ ಆಶಯನ್ನು ಪೂರ್ಣಗೊಳಿಸಲು ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ರಾಜಕೀಯಕ್ಕೆ ಬರಬೇಕು ಎಂಬ ಆಸೆ ಇದೆ. ಆದರೆ ಈಗಲೇ ರಾಜಕೀಯಕ್ಕೆ ಅಡಿಯಿಡಲು ನಾನಿನ್ನೂ ಪಕ್ವವಾಗಿಲ್ಲ. ನನಗೆ ಸೂಕ್ತ ಅನ್ನಿಸಿದಾಗ ರಾಜಕೀಯಕ್ಕೆ ಧುಮುಕುತ್ತೇನೆ" ಎಂದಿದ್ದಾರೆ.

    ತಾನು ಪಾಕಿಸ್ತಾನದಲ್ಲೇ ಇರಬೇಕು. ಅಲ್ಲೇ ರಾಜಕೀಯ ಪ್ರವೇಶ ಆಗಬೇಕು. ಸದಾ ಸಲ್ವಾರ್ ತೊಡಬೇಕು ಎಂದು ತಮ್ಮ ತಂದೆಯವರು ಬಯಸಿದ್ದರು. ಅವರ ಮುದ್ದಿನ ಮಗಳಾಗಿ ನಾನು ಆದಷ್ಟು ಬೇಗ ಅವರ ಕನಸನ್ನು ನನಸು ಮಾಡುತ್ತೇನೆ.

    ನಾನು ಲಾಯರ್ ಆಗಬೇಕು ಎಂಬುದು ಅವರ ಇನ್ನೊಂದು ಆಶಯ. ಸದಾ ಸಲ್ವಾರ್ ಕುರ್ತಾ ತೊಡುವಂತೆ ಅವರು ಹೇಳುತ್ತಿದ್ದರು. ಹಾಗಾಗಿ ಸಾಧ್ಯವಾದಷ್ಟು ಸಲ್ವಾರ್ ಕಮೀಜ್ ಜೊತೆ ದುಪ್ಪಟವನ್ನೂ ತೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ವೀಣಾ ಮಲಿಕ್ ಅಭಿನಯದ 'ಜಿಂದಗಿ 50:50' ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೇ ಮೇ 24ರಂದು ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಏಕಕಾಲಕ್ಕೆ ಈ ಚಿತ್ರ ಪಾಕಿಸ್ತಾನದಲ್ಲೂ ಬಿಡುಗಡೆಯಾಗುತ್ತಿದ್ದು ವೀಣಾ ಸಂಭ್ರಮವನ್ನು ದುಪ್ಪಟ್ಟು ಮಾಡಿದೆಯಂತೆ. (ಏಜೆನ್ಸೀಸ್)

    English summary
    Pakistan actress Veena Malik says, "I have intentions to join politics, but right now I feel I am very immature. When I feel it's the right time, I shall join politics."
    Thursday, May 16, 2013, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X