»   » ಚಿರನಿದ್ರೆಗೆ ಬಾಲಿವುಡ್ ಹಿರಿಯಜ್ಜಿ ಜೊಹ್ರಾ ಸೆಹಗಲ್

ಚಿರನಿದ್ರೆಗೆ ಬಾಲಿವುಡ್ ಹಿರಿಯಜ್ಜಿ ಜೊಹ್ರಾ ಸೆಹಗಲ್

Posted by:
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಹಿರಿಯಜ್ಜಿ ಜೊಹ್ರಾ ಸೆಹಗಲ್ (102) ತಮ್ಮ ಸುದೀರ್ಘ ಜೀವನ ಪಯಣ ಮುಗಿಸಿದ್ದಾರೆ. ಗುರುವಾರ ಸಂಜೆ 4.30ಕ್ಕೆ ನವದೆಹಲಿಯಲ್ಲಿ ಅವರು ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದ್ದಾರೆ.

ಹೃದ್ರೋಗದಿಂದ ಬಳಲುತ್ತಿದ್ದ ಅವರು ದಕ್ಷಿಣ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರವಷ್ಟೇ ವೈದ್ಯ ಪರೀಕ್ಷೆಯಲ್ಲಿ ಅವರಿಗೆ ನ್ಯೂಮೋನಿಯ ಇರುವುದು ಗೊತ್ತಾಗಿತ್ತು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಭಾರತೀಯ ಚಿತ್ರೋದ್ಯಮದಲ್ಲಿ ಜೊಹ್ರಾ ಅವರು ಎಲ್ಲರ ಪ್ರೀತಿ ಪಾತ್ರ ಗೌರವಕ್ಕೆ ಪಾತ್ರರಾದವರು. ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಚಿರಸ್ಮರಣೀಯ ಪಾತ್ರಗಳನ್ನು ಜೊಹ್ರಾ ಪೋಷಿಸಿದ್ದಾರೆ. 'ಚೀನಿ ಕಮ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ತಾಯಿಯಾಗಿ ಪೋಷಿಸಿದ್ದ ಪಾತ್ರ ಮರೆಯುವಂತಿಲ್ಲ.

veteran-actress-zohra-sehgal-dies-at-102-delhi

ಅವರ ನಿಧನಕ್ಕೆ ತಕ್ಷಣ ಸ್ಪಂದಿಸಿದ ಬಿಗ್ ಬಿ, "ಜೊಹ್ರಾ ಸೆಹಗಲ್ ಅವರು 102 ವರ್ಷಕ್ಕೆ ನಿಧನರಾಗಿದ್ದು...ಆಹಾ ಎಂಥಹಾ ಪ್ರಯಾಣ ನನ್ನ ಅತ್ಯಂತ ಪ್ರೀತಿ ಪಾತ್ರದ ಸಹನಟಿ..." ಎಂದಿದ್ದಾರೆ. 1935ರಲ್ಲಿ ಉದಯ್ ಶಂಕರ್ ಅವರೊಂದಿಗೆ ನೃತ್ಯಗಾರ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜೊಹ್ರಾ ಬೆಳ್ಳಿಪರದೆ ಮೇಲೆ ಪೋಷಕ ತಾರೆಯಾಗಿ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಕೇವಲ ಬಾಲಿವುಡ್ ನಲ್ಲಷ್ಟೇ ಅಲ್ಲದೆ ಹಾಲಿವುಡ್ ಚಿತ್ರಗಳಲ್ಲೂ ಜೊಹ್ರಾ ಅವರು ತಮ್ಮ ಛಾಪು ಮೂಡಿಸಿದವರು. ಸಂಜಯ್ ಲೀಲಾ ಭನ್ಸಾಲಿ ಅವರ ಸಾವರಿಯ (2007) ಚಿತ್ರದ ಬಳಿಕ ಅವರು ಸಾಕಷ್ಟು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದರು.

ಜೊಹ್ರಾ ಅವರ ಆತ್ಮಕಥೆ 'Zohra Sehgal:Fatty' ಕೃತಿಯನ್ನು ಅವರ ಪುತ್ರಿ ಕಿರಣ್ ಬರೆದಿದ್ದಾರೆ. ಜೊಹ್ರಾ ಅವರು ಕೊನೆಯುಸಿರುವವ ತನಕವೂ ಯಾವುದೇ ಸರ್ಕಾರಿ ಸೇವೆ, ಸೌಲಭ್ಯಗಳನ್ನು ಬಯಸಲಿಲ್ಲ ಎಂದು ಅವರ ಪುತ್ರಿ ತಿಳಿಸಿದ್ದಾರೆ. ಜೊಹ್ರಾ ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್)

English summary
Vteran actress Zohra Sehgal died in Delhi on Thursday of cardiac arrest at the age of 102, a family member said. A heart patient, Sehgal was admitted to the Max Hospital in south Delhi's Saket area after being diagnosed with pneumonia Wednesday. She died of a heart attack at 4.30 p.m. Thursday.
Please Wait while comments are loading...

Kannada Photos

Go to : More Photos