»   » 10 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಹೇಟ್ ಸ್ಟೋರಿ 3 ಟ್ರೈಲರ್

10 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಹೇಟ್ ಸ್ಟೋರಿ 3 ಟ್ರೈಲರ್

Written by: ಸೋನು
Subscribe to Filmibeat Kannada

ಬಿಟೌನ್ ನ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಸಖತ್ ಹಾಟ್ ಬೆಡಗಿ ಸನ್ನಿ ಲಿಯೋನ್ ಫರ್ಫಾಮೆನ್ಸ್ ಅನ್ನೇ ಬೀಟ್ ಮಾಡೋಕೆ ಬಾಲಿವುಡ್ ನಲ್ಲಿ ಒಂದು ಸಿನಿಮಾ ರೆಡಿಯಾಗಿದೆ. ಬಾಲಿವುಡ್ ನಿರ್ದೇಶಕ ವಿಶಾಲ್ ಪಾಂಡ್ಯ ಆಕ್ಷನ್-ಕಟ್ ಹೇಳಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈಗಾಗಲೇ ನೋಡಿದವರ ಸಂಖ್ಯೆ 10 ಮಿಲಿಯನ್ ದಾಟಿದೆ.

ಈ ಮೊದಲು ಇದೇ ನಿರ್ದೇಶಕರು ಹೇಟ್ ಸ್ಟೋರಿ 2 ಮಾಡಿದ್ದು, ಅದರ ಮುಂದುವರಿದ ಭಾಗ 'ಹೇಟ್ ಸ್ಟೋರಿ 3' ಮಾಡಿದ್ದಾರೆ. ಬಾಲಿವುಡ್ ನಟ ಕರಣ್ ಸಿಂಗ್ ಗ್ರೋವರ್, ನಟ ಶರ್ಮನ್ ಜೋಷಿ, ಬಾಲಿವುಡ್ ಹಾಟ್ ಬೆಡಗಿ ಝರೀನ್ ಖಾನ್ ಹಾಗು ಡೈಸಿ ಶಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಹೇಟ್ ಸ್ಟೋರಿ 3' ಚಿತ್ರದ ಟ್ರೈಲರ್ ಎಲ್ಲೆಡೆ ಭಾರಿ ರೆಸ್ಪಾನ್ಸ್ ಪಡೆದುಕೊಂಡಿದೆ.

Watch hindi movie 'Hate Story 3' Official Trailer

ತುಂಬಾ ವಲ್ಗರ್ ಸೀನ್ ಇರುವ ಈ ಚಿತ್ರದ ಟ್ರೈಲರ್ ನ್ನು ನೋಡಿದವರ ಸಂಖ್ಯೆ 10 ಮಿಲಿಯನ್ ದಾಟಿದೆ ಅಂದರೆ ಅಬ್ಬಾ! ಈ ಚಿತ್ರ ಬಿಡುಗಡೆಯಾದ ಫಸ್ಟ್ ಡೇ ಹೌಸ್ ಫುಲ್ ಗ್ಯಾರಂಟಿ.

ನಟ ಕರಣ್ ಸಿಂಗ್ ಗ್ರೋವರ್ 'ಅಲೋನ್' ಚಿತ್ರದಲ್ಲಿ ಕೃಷ್ಣಸುಂದರಿ ಬಿಪಾಷ ಬಸು ಜೊತೆ ಸಖತ್ ಹಾಟ್ ಆಗಿ ರೊಮ್ಯಾನ್ಸ್ ಮಾಡಿ ಸುದ್ದಿಯಾಗಿದ್ದರು. ಇದೀಗ 'ಹೇಟ್ ಸ್ಟೋರಿ 3' ಚಿತ್ರದಲ್ಲಿ ತಮ್ಮ ಜಿಮ್ ಬಾಡಿ ಪ್ರದರ್ಶಿಸುವ ಮೂಲಕ ಮತ್ತಷ್ಟು ಫೇಮಸ್ ಆಗಿದ್ದಾರೆ.

Watch hindi movie 'Hate Story 3' Official Trailer

ಯಾವಾಗಲೂ ಡೀಸೆಂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಶರ್ಮನ್ ಜೋಷಿ ಅವರು ಈ ಚಿತ್ರದಲ್ಲಿ ಮಾತ್ರ ತಮ್ಮ ಸೆಕ್ಸಿ ಬಾಡಿಯನ್ನು ಪ್ರದರ್ಶನಕ್ಕಿಟ್ಟು ನಟಿ ಝರೀನ್ ಖಾನ್ ಅವರೊಂದಿಗೆ ಲಿಪ್ ಲಾಕ್ ಬೇರೆ ಮಾಡಿದ್ದಾರೆ.

ಮಹೇಶ್ ಭಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ವರ್ಷದ ಸಖತ್ ಹಾಟ್ 'ಹೇಟ್ ಸ್ಟೋರಿ 3' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

Watch hindi movie 'Hate Story 3' Official Trailer

ಅದೇನೇ ಇರಲಿ ಒಟ್ನಲ್ಲಿ ಇದೀಗ ಬಿಟೌನ್ ನಲ್ಲಿ 'ಟಾಕ್ ಆಫ್ ದ ಟಾಪಿಕ್' ಆಗಿರುವ 'ಹೇಟ್ ಸ್ಟೋರಿ 3' ಎಲ್ಲಾ ರೆಕಾರ್ಡ್ ಗಳನ್ನು ಬೀಟ್ ಮಾಡುತ್ತ ಅಂತ ಕಾದು ನೋಡಬೇಕಿದೆ. ಸದ್ಯಕ್ಕೆ ಚಿತ್ರದ ನಿರ್ದೇಶಕ ವಿಶಾಲ್ ಪಾಂಡ್ಯ ಅವರು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ. ಅಲ್ಲಿವರೆಗೆ ಅಭಿಮಾನಿ ದೇವರುಗಳು ಈ ಟ್ರೈಲರ್ ನೋಡಿ.

English summary
Watch the Official Trailer of bollywood movie 'Hate Story 3' directed by Vishal Pandya, starring Zareen Khan, Karan Singh Grover, Daisy Shah, Sharman Joshi in lead roles.
Please Wait while comments are loading...

Kannada Photos

Go to : More Photos