twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮಹತ್ಯೆಗೆ ಶರಣಾದ ನಟಿ ಜಿಯಾ ಖಾನ್ ಯಾರು?

    By Rajendra
    |

    ದೀಪ ಬೆಳಗುವ ಮುನ್ನವೇ ಆರಿಹೋಗಿದೆ. ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಇಪ್ಪತ್ತೈದರ ಈ ತಾರೆ ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು ಬಾಲಿವುಡ್ ನಲ್ಲಿ ದಿಗ್ಭ್ರಮೆ ಮೂಡಿಸಿದೆ.

    ಮುಂಬೈನ ಜುಹು ಪ್ರದೇಶದಲ್ಲಿರುವ ಸಾಗರ್ ಸಂಗೀತ್ ಭವನದಲ್ಲಿ ಮಧ್ಯರಾತ್ರಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ಪೊಲೀಸ್ ರಿಪೋರ್ಟ್. ಆತ್ಮಹತ್ಯೆಗೆ ತತ್ ಕ್ಷಣ ಕಾರಣ ತಿಳಿದುಬಂದಿಲ್ಲವಾದರೂ ಮರಣೋತ್ತರ ಪರೀಕ್ಷೆ ಬಳಿಕ ಸೂಕ್ತ ಕಾರಣ ಗೊತ್ತಾಗಲಿದೆ.

    ಜಿಯಾ ಖಾನ್ ಮೂಲ ಹೆಸರು ನಫೀಸಾ. ಚಿತ್ರರಂಗಕ್ಕೆ ಅಡಿಯಿಟ್ಟ ಬಳಿಕ ತಮ್ಮ ಹೆಸರನ್ನು ಜಿಯಾ ಎಂದು ಬದಲಿಸಿಕೊಂಡರು. ಬ್ರಿಟನ್ ಮೂಲದ ಭಾರತೀಯ ನಟಿಯಾದ ಈಕೆ ಹುಟ್ಟಿದ್ದು ಫೆಬ್ರವರಿ 20, 1988ರಲ್ಲಿ. ಈಕೆಯ ಹುಟ್ಟೂರು ಲಂಡನ್ ನ ಚೆಲ್ಸಿಯಾ.

    ಇವರ ತಂದೆ ರಿಜ್ವಿ ಖಾನ್ ಹಾಗೂ ತಾಯಿ ರಬಿಯಾ ಅಮಿನ್. ಈಕೆಯ ತಾಯಿ ರಬಿಯಾ ಅಮಿನ್ ಅವರು ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು. ಇವರು 1980ರಲ್ಲಿ ತೆರೆಕಂಡ 'ದುಲ್ಹಾ ಬಿಕ್ತಾ ಹೈ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.

    ನಿಶ್ಯಬ್ಧ್ ಮೂಲಕ ಭಾರಿ ಗದ್ದಲ ಎಬ್ಬಿಸಿದ್ದರು

    ನಿಶ್ಯಬ್ಧ್ ಮೂಲಕ ಭಾರಿ ಗದ್ದಲ ಎಬ್ಬಿಸಿದ್ದರು

    ಕಲೆ ಎಂಬುದು ಜಿಯಾ ಅವರ ರಕ್ತದಲ್ಲೇ ಬಂದಿತ್ತು. ರಾಮ್ ಗೋಪಾಲ್ ವರ್ಮಾ ಅವರ 'ನಿಶ್ಯಬ್ಧ್' ಚಿತ್ರದ ಮೂಲಕ ಜಿಯಾ ಬಾಲಿವುಡ್ ಗೆ ಎಂಟ್ರಿಕೊಟ್ಟರು. ಚೊಚ್ಚಲ ಚಿತ್ರದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತು.

    ಬೋಲ್ಡ್ ನಟನೆಗೆ ಹೆಸರಾಗಿದ್ದ ಜಿಯಾ ಖಾನ್

    ಬೋಲ್ಡ್ ನಟನೆಗೆ ಹೆಸರಾಗಿದ್ದ ಜಿಯಾ ಖಾನ್

    ಚೊಚ್ಚಲ ಚಿತ್ರಕ್ಕೆ ಭಾರಿ ವಿವಾದಕ್ಕೆ ಗುರಿಯಾದರೂ ಮಿಶ್ರ ಪ್ರತಿಕ್ರಿಯೆಗೆ ವ್ಯಕ್ತವಾಗಿತ್ತು. ಆದರೆ ಜಿಯಾ ಅವರು ತಮ್ಮ ಮೈಮಾಟ, ಬೋಲ್ಡ್ ನಟನೆ, ಸೆಕ್ಸ್ ಅಫೀಲ್ ನಿಂದ ಎಲ್ಲರ ಗಮನಸೆಳೆದಿದ್ದರು. ಇದು ಆಕೆಯ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿತ್ತು.

    ಅಮೀರ್ ಖಾನ್ ಜೊತೆಗೂ ಅಭಿನಯಿಸಿದ್ದಾರೆ

    ಅಮೀರ್ ಖಾನ್ ಜೊತೆಗೂ ಅಭಿನಯಿಸಿದ್ದಾರೆ

    ಬಳಿಕ ಈಕೆಗೆ ಅಮೀರ್ ಖಾನ್ ಜೊತೆಗಿನ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ ಸಿಕ್ಕಿತು. ಅದು ತಮಿಳಿನ ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ ನಿರ್ದೇಶನದ 'ಘಜನಿ' ಚಿತ್ರ. ಮೊದಲೇ ಇದು ಹೀರೋ ಓರಿಯಂಟೆಟ್ ಫಿಲಂ ಆಗಿದ್ದ ಇದರಲ್ಲಿ ಜಿಯಾ ಎರಡನೇ ನಾಯಕಿ ಪಾತ್ರ ಸಿಕ್ಕಿತ್ತು.

    ಜಿಯಾ ಅಭಿನಯದ ಕೊನೆಯ ಚಿತ್ರ ಹೌಸ್ ಫುಲ್

    ಜಿಯಾ ಅಭಿನಯದ ಕೊನೆಯ ಚಿತ್ರ ಹೌಸ್ ಫುಲ್

    ಅಲ್ಲಿಂದ ಈಕೆಯ ಕೆರೆಯರ್ ಗ್ರಾಫ್ ಅಧೋಮುಖವಾಗತೊಡಗಿತು. ಪೋಷಕ ಪಾತ್ರಗಳಿಗೆ ತೃಪ್ತಿಪಡಬೇಕಾಯಿತು. ಸಜಿದ್ ಖಾನ್ ಅವರ ಮಲ್ಟಿ ಸ್ಟಾರರ್ ಕಾಮಿಡಿ ಚಿತ್ರ 'ಹೌಸ್ ಫುಲ್'ನಲ್ಲಿ ಅಭಿನಯಿಸಿದ್ದರು. ಜಿಯಾ ಖಾನ್ ಅಭಿನಯದ ಕೊನೆಯ ಚಿತ್ರವಿದು.

    ಫಿಲಂಫೇಸ್ ಪ್ರಶಸ್ತಿಗೂ ಪಾತ್ರವಾಗಿದ್ದ ತಾರೆ

    ಫಿಲಂಫೇಸ್ ಪ್ರಶಸ್ತಿಗೂ ಪಾತ್ರವಾಗಿದ್ದ ತಾರೆ

    ರಾಮ್ ಗೋಪಾಲ್ ವರ್ಮಾ ಅವರ ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ನಟಿ ಫಿಲಂ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದರು. ಮೊದಲು ತಮ್ಮ ಹೆಸರನ್ನು ಜಿಯಾ ಎಂದು ಬದಲಿಸಿಕೊಂಡು ಕಡೆಗೆ ನಫೀಸಾ ಖಾನ್ ಎಂದು ಬದಲಿಸಿಕೊಂಡಿದ್ದರು.

    ಅರ್ಧಕ್ಕೆ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ್ದ ಜಿಯಾ

    ಅರ್ಧಕ್ಕೆ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ್ದ ಜಿಯಾ

    ಲಂಡನ್ ನಲ್ಲೇ ವಿದ್ಯಾಭ್ಯಾಸ ಮಾಡಿದ ಜಿಯಾ ಖಾನ್ ಫಿಲಂ ಸ್ಟಡೀಸ್ ಹಾಗೂ ಲಿಟರೇಚರ್ ನಲ್ಲಿ ಶಿಕ್ಷಣ ಪಡೆದಿದ್ದಾರೆ. ನ್ಯೂಯಾರ್ಕ್ ನ ಲೀ ಸ್ಟ್ರಾಸ್ ಬರ್ಗ್ ಅಕಾಡೆಮಿ ಆಫ್ ಡ್ರಾಮೆಟಿಕ್ ಆರ್ಟ್ಸ್ ನಲ್ಲಿ ಕಲಿಯಲು ಹೋದರಾದರೂ ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸಿದರು. ಕಾರಣ ಆಕೆಗೆ ಮುಂಬೈನಿಂದ ಚಿತ್ರವೊಂದಕ್ಕೆ ಆಫರ್ ಬಂದಿತ್ತು.

    ಹದಿನಾರರಲ್ಲೇ ಅವಕಾಶ ಅರಸಿ ಬಂದಿತ್ತು

    ಹದಿನಾರರಲ್ಲೇ ಅವಕಾಶ ಅರಸಿ ಬಂದಿತ್ತು

    ರಾಮ್ ಗೋಪಾಲ್ ವರ್ಮಾ ಅವರ ಚಿತ್ರಕ್ಕೂ ಮೊದಲೇ ಜಿಯಾ ಅವರಿಗೆ ಅವಕಾಶ ಬಂದಿತ್ತು. ಅದು ಮುಕೇಶ್ ಭಟ್ ಅವರ 'ತುಮ್ಸಾ ನಹಿ ದೇಖಾ' ಎಂಬ ಚಿತ್ರದಲ್ಲಿ. ಆಗ ಜಿಯಾ ಅವರಿಗೆ ಕೇವಲ 16 ವರ್ಷ ವಯಸ್ಸು. ತಮ್ಮ ವಯಸ್ಸಿಗೆ ಮೀರಿದ ಪಾತ್ರ ಎಂಬ ಕಾರಣಕ್ಕೆ ಅಭಿನಯಿಸಲಿಲ್ಲ.

    ಚಾನ್ಸ್ ಪೆ ಡಾನ್ಸ್ ಚಿತ್ರ ಮಿಸ್ ಮಾಡಿಕೊಂಡಿದ್ದರು

    ಚಾನ್ಸ್ ಪೆ ಡಾನ್ಸ್ ಚಿತ್ರ ಮಿಸ್ ಮಾಡಿಕೊಂಡಿದ್ದರು

    ಕೆನ್ ಘೋಷ್ ಅವರ 'ಚಾನ್ಸ್ ಪೆ ಡಾನ್ಸ್' ಚಿತ್ರದಲ್ಲೂ ಶಾಹಿದ್ ಕಪೂರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಕಡೆ ಗಳಿಗೆಯಲ್ಲಿ ಆ ಪಾತ್ರ ಜೆನಿಲಿಯಾ ಡಿಸೋಜಾ ಪಾಲಾಗಿತ್ತು.

    English summary
    Actress Jiah Khan alias Nafisa bio data. She is a British-Indian actress, was born on 20 February 1988 in Chelsea, London.She was the daughter of Ali Rizvi Khan, an Indian American and a small time actress in 1980s Rabiya Amin.
    Tuesday, June 4, 2013, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X