twitter
    For Quick Alerts
    ALLOW NOTIFICATIONS  
    For Daily Alerts

    ಜನರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿದ ಸಲ್ಮಾನ್

    By Suneetha
    |

    1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಪರವಾಗಿ ಮಾಡಿದ್ದ ಟ್ವಿಟ್‌ಗಳನ್ನು ಸಲ್ಮಾನ್ ಖಾನ್ ವಾಪಸ್ ಪಡೆದಿದ್ದಾರೆ.

    ಯಾಕೂಬ್ ಗಲ್ಲಿಗೇರಿಸುವ ವಿಚಾರದಲ್ಲಿ ಸಲ್ಮಾನ್ ಖಾನ್ ಟ್ವಿಟ್‌ ಮಾಡಿರುವುದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ವಿಷಾದ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲ ತಾಣದಲ್ಲಿಯೂ ಈ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿತ್ತು.[ಯಾಕೂಬ್ ಮೆಮನ್ ಗಲ್ಲು: ಸಲ್ಮಾನ್ ಖಾನ್ Tweets]

    SalmanKhan

    ಮುಂಬೈ ಸ್ಪೋಟ ಪ್ರಕರಣದಲ್ಲಿ ಅಪರಾಧಿಯಾಗಿ ತಲೆಮರೆಸಿಕೊಂಡಿರುವ ಟೈಗರ್ ಮೆಮನ್ ನಿಜವಾದ ಅಪರಾಧಿ. ಆತನ ಬದಲಿಗೆ ಸಹೋದರ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಬಾರದು ಅಂತ ಸಲ್ಮಾನ್ ಖಾನ್ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಬರೆದುಕೊಂಡಿದ್ದರು.

    ' ಸಲ್ಮಾನ್ ಮಾಡಿರುವ ಟ್ವೀಟ್ ಗಳನ್ನು ನಾನು ಒಪ್ಪುವುದಿಲ್ಲ ಎಂದು ಸಲ್ಮಾನ್ ಖಾನ್ ಅಪ್ಪ ಚಿತ್ರ ಸಾಹಿತಿಯೂ ಆಗಿರುವ ಸಲೀಮ್ ಖಾನ್ ಹೇಳಿದ್ದರು'.

    'ಸಲ್ಮಾನ್ ಖಾನ್ ಬರೆದಿರುವುದೆಲ್ಲವೂ ಅನರ್ಥಕಾರಿಯಾಗಿದೆ. ಈ ವಿಚಾರದ ಬಗ್ಗೆ ಸಲ್ಮಾನ್ ಸ್ವಲ್ಪ ಮಟ್ಟಿಗೆ ಅಜ್ಞಾನಿಯಾಗಿದ್ದಾನೆ. ಜನರು ಈತನ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು'. ಎಂದು ಸಲ್ಮಾನ್ ತಂದೆ ಸಲೀಮ್ ಖಾನ್ ಮನವಿ ಮಾಡಿಕೊಂಡಿದ್ದಾರೆ.[ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್]

    ಮಾತ್ರವಲ್ಲದೇ 'ನಾನು ಬೇಕೂಂತ ಇಂತಹ ಟ್ವೀಟ್ ಗಳನ್ನು ಮಾಡಲಿಲ್ಲ ಬದಲಾಗಿ ಮುಂಬೈ ಸರಣಿ ಸ್ಪೋಟದಲ್ಲಿ ತುಂಬಾ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಈ ತರಹದ ಟ್ವೀಟ್ ಮಾಡಿದ್ದಾಗಿ, ಸಲ್ಮಾನ್ ಖಾನ್ ಮತ್ತೆ ರಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.['ಬಾಹುಬಲಿ', 'ಭಜರಂಗಿ ಭಾಯ್ ಜಾನ್' ಸಕ್ಸಸ್ ಹಿಂದಿನ ಸೂತ್ರಧಾರ]

    ಒಟ್ನಲ್ಲಿ 'ಭಜರಂಗಿ ಭಾಯ್ ಜಾನ್' ಚಿತ್ರದ ಭರ್ಜರಿ ಯಶಸ್ಸಿನ ನಡುವೆ, ಈ ಮೂಲಕನೂ ಪಬ್ಲಿಸಿಟಿ ಪಡೆದುಕೊಳ್ಳುತ್ತಿರುವ 'ಬಾಕ್ಸಾಫೀಸ್ ಸುಲ್ತಾನ' ಬಿಟೌನ್ ನಲ್ಲಿ ಸುಖಾ-ಸುಮ್ಮನೆ ಸುದ್ದಿಯಾಗುತ್ತಿದ್ದಾರೆ.

    English summary
    Bollywood star Salman Khan has retracted his controversial tweets over the death sentence of 1993 Mumbai blasts accused Yakub Memon, following furore over his remarks, and has 'apologised unconditionally' for his remarka.
    Monday, July 27, 2015, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X