twitter
    Celebs»Anu Prabhakar»Biography

    ಅನು ಪ್ರಭಾಕರ್ ಜೀವನಚರಿತ್ರೆ

    ಅನು ಪ್ರಭಾಕರ್ ಕನ್ನಡ ಚಿತ್ರರಂಗದ ನಟಿ. ಇವರು 1980 ನವೆಂಬರ್ 9ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಎಮ್.ವಿ ಪ್ರಭಾಕರ್ ಮತ್ತು ತಾಯಿ ಗಾಯತ್ರಿ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿರ್ಮಲಾ ರಾಣಿ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದ ಇವರು,ಕನ್ನಡದ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಹಾಗೂ ಇಂಗ್ಲಿಷ್‌ನ್ ಡಾರ್ಕ್ ಜಂಗಲ್ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. 

     

    ಸಿನಿಜೀವನ

    ಇವರು 1999ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ಅಭಿನಯದ 'ಹೃದಯ ಹೃದಯ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಚಂದನವನ ಪ್ರವೇಶಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಂತರ ರಮೇಶ್ ಅರವಿಂದ್ ಕೆಲ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡರು.  ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಹಲವು ಅಭಿನಯಿಸಿ ಸೈ ಎನಿಸಿಕೊಂಡರು. 

     

    ಮದುವೆ: 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವರಿಸಿದ್ದ ಅನು ಪ್ರಭಾಕರ್, 2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ನಂತರ 2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಈ ಜೋಡಿ ಈಗ ಮುದ್ದಾದ ಹೆಣ್ಣುಮಗುವಿದೆ. 

     

    ಪ್ರಶಸ್ತಿಗಳು

    ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ನಟಿ -(ಪರೀಕ್ಷೆ) 2000-01.

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ಸಹಾಯಕ ನಟಿ - (ಮುಸ್ಸಂಜೆ ಮಾತು)

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X