twitter
    Celebs»Arjun Janya»Biography

    ಅರ್ಜುನ್ ಜನ್ಯ ಜೀವನಚರಿತ್ರೆ

    ಅರ್ಜುನ್ ಜನ್ಯ ಕನ್ನಡ ಚಿತ್ರರಂಗದ ಸಂಗೀತ ಸಂಯೋಜಕರು, ಗಾಯಕರು, ಸಂಗೀತ ನಿರ್ದೇಶಕರು ಆಗಿದ್ದಾರೆ.ಕನ್ನಡ ಚಿತ್ರರಂಗದ ಎ ಆರ್ ರೆಹಮಾನ್ ಎನ್ನುವ ಹೆಗ್ಗಳಿಕೆ ಪಡೆದಿರುವ ಅರ್ಜುನ್ ಜನ್ಯ ತಮ್ಮ ಸಂಗೀತ ನಿರ್ದೇಶನದಿಂದ ಮನೆ ಮಾತಾಗಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ.

    ಇವರು  ಜನಿಸಿದ್ದು 13 ಮೇ ಬೆಂಗಳೂರಿನಲ್ಲಿ.ಇವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರ ಜೊತೆಯಲ್ಲಿ ಕೀಬೋರ್ಡ್ ಕಲಿಯುತ್ತಿದ್ದರು. ಇವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರಿಗೆ  ಸಂಗೀತ ಸಂಯೋಜನೆ ಮಾಡಬೇಕೆಂಬ ಛಲ ಹುಟ್ಟಿಕೊಂಡಿತು.


    2006 ರಲ್ಲಿ ಬಿಡುಗಡೆಗೊಂಡ "ಆಟೋಗ್ರಾಫ್ ಪ್ಲೀಸ್ "ಚಿತ್ರಕ್ಕೆ ಮೊದಲ ಸಂಗೀತ ನಿರ್ದೇಶನ ಮಾಡಿದರು. ಅಲ್ಲಿಂದ ಮುಂದೆ ಹಲವಾರು ಚಿತ್ರಗಳ ಹಾಡುಗಳಿಗೆ ಸಂಗೀತ ಸಂಯೋನೆ ಮಾಡಿದ್ದಾರೆ. 2009 ರಲ್ಲಿ ತೆರೆಕಂಡ ಬಿರುಗಾಳಿ ಚಿತ್ರದ ಮೂಲಕ ಅವರ ಹೆಸರು ಕರ್ನಾಟಕದೆಲ್ಲೆಡೆ ಪಸರಿಸಿತು .ಈ ಬಿರುಗಾಳಿ ಚಿತ್ರದ ಎಲ್ಲಾ ಹಾಡುಗಳು ಮೆಚ್ಚುಗೆಗೆ ಪಾತ್ರವಾಯಿತು. ಇದರ ನಂತರ 2010ರಲ್ಲಿ ಬಂದ ಸಂಚಾರಿ ಚಿತ್ರದ ಹಾಡುಗಳು ಕನಾಟಕದ ಜನರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದಕೊಂಡವು.


    ಅರ್ಜುನ್ ಜನ್ಯಗೆ ಬ್ರೇಕ್ ನೀಡಿದ ಸಿನಿಮಾ ಅಂದರೆ, 'ಕೆಂಪೇಗೌಡ'. ಅದು ಅವರ 14ನೇ ಸಿನಿಮಾವಾಗಿತ್ತು.ಈ ಮೊದಲ ಚಿತ್ರಗಳಲ್ಲಿ  ಹಾಡುಗಳು ಒಂದು ಮಟ್ಟಕ್ಕೆ ಹಿಟ್ ಆದರೂ ಕೆಲವು ಸಿನಿಮಾ ಫ್ಲಾಪ್ ಆಗುತ್ತಿತ್ತು. ತಾಳ್ಮೆಯಿಂದ ಕಾದ ಜನ್ಯ ಬದುಕಿನಲ್ಲಿ 'ಕೆಂಪೇಗೌಡ' ಬಿರುಗಾಳಿಯಂತೆ ಬಂತು.


    ಸಂಗೀತ ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ, ಗಾಯಕರಾಗಿ ಖ್ಯಾತಿ ಗಳಿಸಿರುವ ಇವರು ಹಲವು ದೊಡ್ಡ-ದೊಡ್ಡ ಗಾಯನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹ ಕಾಣಿಸಿಕೊಳ್ಳತ್ತಾರೆ. ಹೀಗೆ ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.


    ಗಣೇಶ್ ಅಭಿನಯದ'99' ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುತ್ತಿದ್ದು, , ಈ ಸಿನಿಮಾ ಜನ್ಯ ಅವರ ನೂರನೇ ಸಿನಿಮಾವಾಗಿದೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X