twitter
    Celebs»Bhavana»Biography

    ಭಾವನಾ ಮೆನನ್ ಜೀವನಚರಿತ್ರೆ

    ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಭಾವನಾ 1986 ಜೂನ್ 6 ರಂದು ಕೇರಳದಲ್ಲಿ ಜನಿಸಿದರು.

    ತಾಯಿ ಪುಷ್ಪಾ ಗೃಹಿಣಿಯಾದರೆ, ತಂದೆ ಅಸಿಸ್ಟಂಟ್ ಸಿನಿಮ್ಯಾಟೋಗ್ರಾಫರ್ ಜಿ.ಬಾಲಚಂದ್ರನ್. ತಮ್ಮ 16 ನೇ ವಯಸ್ಸಿನಲ್ಲಿ `ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. 2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕಿಚ್ಚ ಸುದೀಪ್ ರ `ವಿಷ್ಣುವರ್ಧನ', ಗಣೇಶ್ ರ `ರೋಮಿಯೊ' ಮುಂತಾದ ಚಿತ್ರಗಳಲ್ಲಿ ನಟಿಸಿದರು.

    2017 ಫೆಬ್ರವರಿ 17 ರಂದು ಥ್ರಿಸ್ಸೂರಿನಿಂದ ಕೊಚ್ಚಿ ಹೋಗುವ ರಸ್ತೆಯಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ಭಾವನಾರ ಕಾರನ್ನು ಅಡ್ಡಗಟ್ಟಿ ತಡೆದು ಭಾವನರನ್ನು ಕಿಡ್ನಾಪ್ ಮಾಡಿ ಎರಡುವರೆ ಗಂಟೆ ಕಾರಿನಲ್ಲಿ ಕಿರುಕಳ ಕೊಟ್ಟು ,ಅಸಭ್ಯವಾಗಿ ಚಿತ್ರಗಳನ್ನು ತೆಗೆದು ನಂತರ ಕಾಕಿನಾಡದ ಹತ್ತಿರ ಬಿಟ್ಟು ಓಡಿಹೋದರು. ತಕ್ಷಣ ಭಾವನಾ ಹತ್ತಿರದ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದರು. ಈ ಘಟನೆ ಮಲಯಾಳಂ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತು. ಮತ್ತು ಈ ಘಟನೆಯ ಸಂಬಂದಿಸಿದಂತೆ ಮಲಯಾಳಂ ಚಿತ್ರರಂಗದ ಒಬ್ಬ ಟಾಪ್ ನಟನ ಕೈವಾಡದ ಕುರಿತಾಗಿಯೂ ಕೇಳಿ ಬಂತು.

    ಈ ಘಟನೆಗಳಿಂದ ಚೇತರಿಸಿಕೊಂಡು ಭಾವನಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾದರು. ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಕೈಹಿಡಿದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X