twitter
    Celebs»Darling Krishna»Biography

    ಡಾರ್ಲಿಂಗ್ ಕೃಷ್ಣ ಜೀವನಚರಿತ್ರೆ

    ಡಾರ್ಲಿಂಗ್ ಕೃಷ್ಣ ಎಂದೇ ಕನ್ನಡ ಸಿನಿಪ್ರಿಯರಿಗೆ ಪರಿಚಯವಿರುವ ಸುನೀಲ್ ನಾಗಪ್ಪ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. 1985ರ ಜೂನ್ 12ರಂದು  ಮೈಸೂರನಲ್ಲಿ ಜನಿಸಿದ ಇವರು, ಎಂಬಿಎ ಪದವಿ ಪಡೆದಿದ್ದಾರೆ. ಜಾಕಿ ಮತ್ತು ಹುಡುಗರು ಚಿತ್ರದಲ್ಲಿ ದುನಿಯಾ ಸೂರಿ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಸುನೀಲ್, ನಾಯಕನಟನಾಗಿ ನಟಿಸಿದ ಮೊದಲ ಚಿತ್ರ ಮದರಂಗಿ. ಈ ಚಿತ್ರಕ್ಕೆ ಪ್ರೇಕಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ನಂತರ ಚಾರ್ಲಿ, ಜಾಲಿ ಬಾರು ಮತ್ತು ಪೋಲಿ ಹುಡುಗರು, ಮುಂಬೈ, ಹುಚ್ಚ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು. 

    ಮದುವೆ: 2021ರ ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಅವರು ಮಿಲನಾ ನಾಗರಾಜ್ ಅವರನ್ನು ಪ್ರೀತಿಸಿ ವಿವಾಹವಾದರು. 

    ನಿರ್ದೇಶನ: ಡಾರ್ಲಿಂಗ್ ಕೃಷ್ಣ 2020ರ ಲಾಕ್ಡೌನ್ ಸಮಯದಲ್ಲಿ ಲವ್ ಮಾಕ್ಟೇಲ್ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದರು. ಈ ಸಿನಿಮಾದಲ್ಲಿ ಮಿಲನಾ ನಾಗರಾಜ್, ನಿಧಿಮಾ ಪಾತ್ರ ನಿರ್ವಹಿಸಿದ್ದರು. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು, ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್‌ಗೆ ಒಳ್ಳೆಯ ಯಶಸ್ಸು ಸಿಕ್ಕಿತ್ತು. ಬಳಿಕ 2022ರಲ್ಲಿ ಇದರ ಸೀಕ್ವೆಲ್ ಲವ್ ಮಾಕ್ಟೇಲ್ 2 ಕೂಡ ತೆರೆಕಂಡು ಯಶಸ್ಸು ಗಳಿಸಿತ್ತು. 



     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X