twitter
    Celebs»Ganesh»Biography

    ಗಣೇಶ್ ಜೀವನಚರಿತ್ರೆ

    ಗಣೇಶ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ. ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಇವರು 1980ರ ಜುಲೈ 2ರಂದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು, ಗಣೇಶ್ ತೃತೀಯ ಪುತ್ರರಾಗಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ.

     

     

    ಕಿರುತೆರೆ
    ಗಣೇಶ್ ಪ್ರಥಮ ಬಾರಿಗೆ ಕ್ಯಾಮರಾವನ್ನು ಎದುರಿಸಿದ್ದು "ಗುಟ್ಟು" ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು. ನಂತರ ಉದಯ ಟಿವಿಯಲ್ಲಿ ಪ್ರಸಾರವಾದ ಕಾಮಿಡಿ ಟೈಮ್ ಎಂಬ ಕಾರ್ಯಕ್ರಮದ ನಿರೂಪಕರಾಗಿ ಕರ್ನಾಟಕದ ತುಂಬಾ ಮನೆ ಮಾತಾದರು.

     

    ಸಿನಿಮಾ

    2006ರಲ್ಲಿ ಬಿಡುಗಡೆಯಾದ 'ಚೆಲ್ಲಾಟ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಮುಖ್ಯಪಾತ್ರದಲ್ಲಿ ನಟಿಸಿದರು. ಚಿತ್ರವೂ ತಕ್ಕಮಟ್ಟಿಗೆ ಗೆಲುವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಅದೇ ವರ್ಷದಲ್ಲಿ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದ 'ಮುಂಗಾರುಮಳೆ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ದೊರೆಯಿತು. ಈ ಚಿತ್ರವು ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆಗೆ ಒಳಗಾಗಿ ದೊಡ್ಡ ಗೆಲುವನ್ನೇ ಪಡೆದು ಗಣೇಶ್ ಅವರು ಗೋಲ್ಡನ್ ಸ್ಟಾರ್ ಆಗಿ ಹೊರಹೊಮ್ಮಿದರು. ನಂತರ ಅನೇಕ ಚಿತ್ರಗಳು ಇವರ ಕೈ ಸೇರಿದವು.


    ಮದುವೆ

    ಗಣೇಶ್ 2008ರಲ್ಲಿ ಶಿಲ್ಪಾ ಎನ್ನುವರನ್ನು ವಿವಾಹವಾದರು. ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಪತ್ನಿ ಶಿಲ್ಪಾ ಗಣೇಶ್ ಗೋಲ್ಡನ್ ಮೂವೀಸ್ ಅಡಿಯಲ್ಲಿ ಪತಿಯ ಕೆಲ ಚಿತ್ರಗಳನ್ನು ನಿರ್ಮಿಸಿದ್ದಾರೆ. ಮಕ್ಕಳು ಕೂಡ ಬಾಲನಟರಾಗಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

     

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X