twitter
    Celebs»Jaggesh»Biography

    ಜಗ್ಗೇಶ್ ಜೀವನಚರಿತ್ರೆ

    ನವರಸನಾಯಕನೆಂದೇ ಖ್ಯಾತಿಯಾಗಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ. ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವ ಇವರು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

    ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಬಾಲ್ಯ - ಕುಟುಂಬ

    1963,ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ. ಇವರು ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು(ಜಡೆ ಮಾಯಸಂದ್ರ).ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರಿದ್ದಾರೆ. ಇವರ ಸಹೋದರ ಕೋಮಲ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.. ಇವರು ಪರಿಮಳರವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಇವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.


    ಸಿನಿಪ್ರವೇಶ

    1982 ರಲ್ಲಿ ನಿರ್ದೇಶಕ ಕೆ.ವಿ ರಾಜು ಮತ್ತು ರಾಜಕಿಶೋರ್ ಅವರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದರು. ಇವುಗಳಲ್ಲಿ`ರಣಧೀರ',`ಸಾಂಗ್ಲಿಯಾನ',`ರಣರಂಗ',ಯುದ್ಧಕಾಂಡ',`ಪರಶುರಾಮ್',`ರಾಣಿ ಮಹಾರಾಣಿ',ಸೋಲಿಲ್ಲದ ಸರದಾರ' ಚಿತ್ರಗಳು ಪ್ರಮುಖವಾದವು.

     

    1992 `ಭಂಡ ನನ್ನ ಗಂಡ' ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅದೇ ವರ್ಷದಲ್ಲಿ ತೆರೆಕಂಡ `ತರ್ಲೆ ನನ್ಮಗ' ಚಿತ್ರ ಇವರಿಗೆ ನಾಯಕನಾಗಿ ಬಿಗ್‌ ಬ್ರೇಕ್ ನೀಡಿತು. ನಂತರ `ಸರ್ವರ್ ಸೋಮಣ್ಣ',ರೂಪಾಯಿ ರಾಜ',`ಇಂದ್ರನ ಗೆದ್ದ ನರೇಂದ್ರ',`ಪಟೇಲ',ಕುಬೇರ' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪು ಮೂಡಿಸಿದರು.

     

    2006 ರಲ್ಲಿ ಇವರ ನೂರನೇ ಚಿತ್ರ ಮಠ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ಮನುಷ್ಯನಲ್ಲಿರುವ ಅವಗುಣಗಳ ಅನಾವರಣಗೊಳಿಸಿ ಅವುಗಳ ತ್ಯಾಗದಿಂದ ಹೇಗೆ ನೆಮ್ಮದಿ ಬದುಕು ಬಾಳಬಹುದು ಎಂದು ಬಿಂಬಿಸಿತು.

    2012 ರಲ್ಲಿ ತಮ್ಮ ಪುತ್ರ ಗುರುರಾಜ್‌ರ `ಗುರು' ,2017 ರಲ್ಲಿ ತೆರೆಕಂಡ `ಮೇಲುಕೋಟೆ ಮಂಜ' ಚಿತ್ರಗಳನ್ನು ನಿರ್ದೇಶನ ಮಾಡಿ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದರು. ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ತೀರ್ಪುಗಾರರಾಗಿ ಪ್ರಸ್ತುತರಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X