twitter
    Celebs»Jayaprada»Biography

    ಜಯಪ್ರಧ ಜೀವನಚರಿತ್ರೆ

    ಜಯಪ್ರದ ಭಾರತೀಯ ಚಿತ್ರರಂಗದ ಪ್ರಮುಖ ನಟಿ ಮತ್ತು ಮಾಜಿ ಸಂಸದೆ. ಹಿಂದಿ ಚಿತ್ರರಂಗ ಮಾತ್ರವಲ್ಲದೇ ದಕ್ಷಿಣ ಭಾರತದ ತಮಿಳು,ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.


    1962 ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಲಲಿತಾ ರಾಣಿ. ತಂದೆ ಕೃಷ್ಣ ರಾವ್ ತೆಲುಗು ಚಿತ್ರದ ಫೈನಾನ್ಸಿಯರ್ ಮತ್ತು ತಾಯಿ ನೀಲವೇಣಿ ಗೃಹಿಣಿ. ಲಲಿತಾ 14 ವರ್ಷದವರಿದ್ದಾಗ ಶಾಲೆಯ ಕಾರ್ಯಕ್ರಮದಲ್ಲಿ ಇವರ ನೃತ್ಯ ನೋಡಿದ ಒಬ್ಬ ನಿರ್ದೇಶಕ ತಮ್ಮ ಚಿತ್ರದಲ್ಲಿ ಮೂರು ನಿಮಿಷದ ಒಂದು ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡರು. ಈ ಚಿತ್ರದ ಈ ದೃಶ್ಯಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕು ಇವರಿಗೆ ಸಾಕಷ್ಟು ಚಿತ್ರಗಳ ಆಫರ್ ಬರತೊಡಗಿತು. ಕೇವಲ 17 ನೇ ವಯಸ್ಸಿನಲ್ಲಿಯೇ ಹಲವು ಚಿತ್ರಗಳಲ್ಲಿ ನಟಿಸಿ ಸ್ಚಾರ್ ನಟಿಯಾದರು.


    ನಂತರ ತಮಿಳು,ಹಿಂದಿ,ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು.ಕನ್ನಡದಲ್ಲಿ ಇವರು ನಟಿಸಿದ ಮೊದಲ ಚಿತ್ರ ಡಾ.ರಾಜಕುಮಾರ್‌ರವರು ಅಭಿನಯಿಸಿದ `ಸನಾದಿ ಅಪ್ಪಣ್ಣ', ನಂತರ ರಾಜ್ ಜೊತೆ `ಹುಲಿಯ ಹಾಲಿನ ಮೇವು',`ಕವಿರತ್ನ ಕಾಳಿದಾಸ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್‌ರ ಕೊನೆಯ ಚಿತ್ರ `ಶಬ್ಧವೇಧಿ'ಯಲ್ಲೂ ಕೂಡ ಇವರೇ ನಾಯಕಿಯಾಗಿ ನಟಿಸಿದ್ದು ವಿಶೇಷ.


    ಹಲವು ನಿರ್ದೇಶಕರಿಂದ ಭಾರತ ಚಿತ್ರರಂಗ ಕಂಡ ಅತ್ಯಂತ ಕ್ಯೂಟ್ ನಟಿ ಎಂದು ಕರೆಯಿಸಿಕೊಳ್ಳುವ ಜಯಪ್ರದಾ ರಾಜಕಾರಣದಲ್ಲೂ ಹೆಸರು ಮಾಡಿದ್ದಾರೆ. ತೆಲುಗು ದೇಶಂ ಪಕ್ಷದಿಂದ ಆರಂಭವಾದ ಇವರ ರಾಜಕೀಯ ಜೀವನದಲ್ಲಿ ಎರಡು ಬಾರಿ ಲೋಕಸಭಾ ಮತ್ತು ಒಂದು ಭಾರಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸದ್ದಾರೆ.


    ಸಾಹಸಸಿಂಹ ವಿಷ್ಣುವರ್ಧನ್‌ರ `ಈ ಬಂಧನ' ಚಿತ್ರದ ಮೂಲಕ ಕನ್ನಡಕ್ಕೆ ಮತ್ತೆ ಬಂದಿದ್ದ ಇವರು ನಟ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಮಿಂಚಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X