twitter
    Celebs»Malashri»Biography

    ಮಾಲಾಶ್ರೀ ಜೀವನಚರಿತ್ರೆ

    ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ಮಾಲಾಶ್ರೀ ಕನ್ನಡ ಚಿತ್ರರಂಗದ ಪ್ರಮುಖ ನಟಿ. ಇವರು ಜನಿಸಿದ್ದು 1973ರ ಆಗಸ್ಟ್ 10ರಂದು.  ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು, ಈವರೆಗೆ ಸುಮಾರು 34 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ ಹೆಸರು ಮಾಡಿದ್ದಾರೆ. 

    ನಂತರ 1989ರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅಪಾರ ಮನ್ನಣೆ ತಂದಿತು. ಬಳಿಕ ಗಜಪತಿ ಗರ್ವಭಂಗ, ರಾಮಾಚಾರಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ ಶಕ್ತಿ, ವೀರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಮಾಲಾಶ್ರೀ ಒಂದು ಕಾಲದಲ್ಲಿ ಬಹುಬೇಡಿಕೆಯ ನಾಯಕನಟಿಯಾಗಿ ಮಿಂಚಿದ್ದರು. ಹೀಗೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಇವರು ನಾಯಕನ ಪಾತ್ರಗಳಲ್ಲಿ ಚಿತ್ರಗಳಲ್ಲಿ ನಟಿಸುವುದು ಇವರ ವಿಶೇಷವಾಗಿದೆ. ಇದರಿಂದ ಅವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ.

    ವಿವಾಹ: ಮಾಲಾಶ್ರೀ 1997ರಲ್ಲಿ ನಿರ್ಮಾಪಕ ಕೋಟಿ ರಾಮು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, 2021ರ ಏಪ್ರಿಲ್ 26ರಂದು ರಾಮು ಅವರು ಕೊರೊನಾ ವೈರಸ್‌ನಿಂದ ಕೊನೆಯುಸಿರೆಳೆದರು.  


     

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X