twitter
    Celebs»Manjula»Biography

    ಮಂಜುಳಾ ಜೀವನಚರಿತ್ರೆ

    ಮಂಜುಳಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ನಟಿ. ಸುಮಾರು ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ. `ಎರಡು ಕನಸು' ಚಿತ್ರದ ಮುಗ್ಧ ಪ್ರೇಮಿ ಲಲಿತಾ ಆಗಿ, `ಸಂಪತ್ತಿಗೆ ಸವಾಲ್' ಚಿತ್ರದ ಗಂಡುಬೀರಿ ದುರ್ಗಾ ಆಗಿ ಹಲವಾರು ಕಾಡುವ ಪಾತ್ರಗಳಿಗೆ ಜೀವ ತುಂಬಿದ ಈ ನಟಿ ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕೆಲ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

    ಬಾಲ್ಯ ಮತ್ತು ಸಿನಿಪಯಣ

    ತುಮಕೂರಿನ ಹೊನ್ನೇನಹಳ್ಳಿಯ ಲಿಂಗಾಯತ ಪರಿವಾರದಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಶಿವಣ್ಣನವರ ಮಗಳಾಗಿ ಜನಿಸಿದ ಇವರು ಬಾಲ್ಯದಿಂದಲೇ ನಾಟಕರಂಗದತ್ತ ಆಸಕ್ತಿ ಹೊಂದಿದ್ದರು. ಬೆಂಗಳೂರಿನ `ಪ್ರಭಾತ್ ಕಲಾವಿದರು' ನಾಟಕ ಸಂಘದಲ್ಲಿ ಅಭಿನಯ ಪ್ರಾರಂಭಿಸಿದ ಇವರು 1966 ರಲ್ಲಿ ತೆರೆಕಂಡ `ಮನೆಕಟ್ಟಿ ನೋಡು' ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ ಇವರು 1972 ರಲ್ಲಿ ತೆರೆಕಂಡ `ಯಾರ ಸಾಕ್ಷಿ' ಚಿತ್ರದಿಂದ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯ ಪ್ರಾರಂಭಿಸಿದರು. ಮುಂದಿನ ವರ್ಷವೇ `ಮೂರುವರೆ ವಜ್ರಗಳು' ಚಿತ್ರದಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸುವ ಅವಕಾಶ ಲಭಿಸಿತು. ನಂತರ ರಾಜ್ ಜೊತೆ ಸತತವಾಗಿ `ಎರಡು ಕನಸು',`ಸಂಪತ್ತಿಗೆ ಸವಾಲ್',ಭಕ್ತ ಕುಂಬಾರ' ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಫ್ರೌಡಿಮೆಯನ್ನು ಪ್ರದರ್ಶಿಸಿದರು. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆ ಅಭಿನಯಿಸದ ಇವರು ತಮ್ಮ ನಟನೆಗೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಇವರು ಚಿತ್ರ ನಿರ್ದೇಶಕ `ಅಮೃತಂ' ಜೊತೆ ಮದುವೆಯಾಗಿದ್ದರು. 1986 ರಲ್ಲಿ ತಮ್ಮ ಮನೆಯಲ್ಲಿ ಗ್ಯಾಸ್ ಸ್ಟೋವ್ ಸ್ಪೋಟದಿಂದ ನಿಧನ ಹೊಂದಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X