twitter
    Celebs»Mano Murthy»Biography

    ಮನೋ ಮೂರ್ತಿ ಜೀವನಚರಿತ್ರೆ

    ಮನೋ ಮೂರ್ತಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ. ಸಾಕಷ್ಟು ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಇವರು `ಮುಂಗಾರು ಮಳೆ' ಚಿತ್ರದ ಸಂಗೀತದಿಂದ ಪ್ರಸಿದ್ಧರಾದರು. ಚಿತ್ರರಂಗಕ್ಕೆ ಬರುವ ಮುನ್ನ ಯಶಸ್ವಿ ಉದ್ಯಮಿಯಾಗಿದ್ದ ಇವರು ಅಮೇರಿಕಾದ ಕ್ಯಾಲಿಫೊರ್ನಿಯದಲ್ಲಿ 3 ಸಂಸ್ಥೆಗಳನ್ನು ಸಹ ಸಂಸ್ಥಾಪಿಸಿದ್ದರು. ಇವರ ಇತ್ತೀಚಿನ `ಅಲೆಗ್ರೋ ಸಿಸ್ಟಮ್ಸ್' ಎಂಬ ಅಂತರ್ಜಾಲ ಕಂಪನಿಯನ್ನು ಸಿಸ್ಕೋ ಕಂಪನಿ ಖರೀದಿ ಮಾಡಿತು.

    ಬಾಲ್ಯ ಮತ್ತು ಶಿಕ್ಷಣ

    ಬೆಂಗಳೂರಿನ ಕೆ.ಆರ್.ಸರ್ಕಲ್ ನಲ್ಲಿರುವ ಯುನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಪದವಿ ಪಡೆದ ಇವರು ಕ್ಯಾಲಿಫೊರ್ನಿಯ ಮತ್ತು ಸ್ಟ್ಯಾನಫೋರ್ಢ ಯುನಿವರ್ಸಿಟಿಯಲ್ಲಿ ಗ್ರ್ಯಾಜುವೇಟ್ ಕೆಲಸ ಮಾಡಿದ್ದಾರೆ. ಬಾಲ್ಯದಿಂದಲೇ ಸಂಗೀತದಲ್ಲಿ ಆಳವಾದ ಆಸಕ್ತಿಯಿದ್ದ ಇವರು ಯುವಿಸಿಈ ಕಾಲೇಜಿನಲ್ಲಿದ್ದಾಗಲೇ ಡ್ರಮ್ ಬಾರಿಸುತ್ತಿದ್ದರು.

    ಚಿತ್ರಜೀವನ

    ನಾಗತಿಹಳ್ಳಿ ಚಂದ್ರಶೇಖರರವರ `ಅಮೇರಿಕಾ ಅಮೇರಿಕಾ' ಚಿತ್ರದಿಂದ ಸಂಗೀತ ಜೀವನ ಪ್ರಾರಂಭಿಸಿದರು. ಈ ಚಿತ್ರದ `ನೂರು ಜನ್ಮಕೂ' ಮತ್ತು `ಯಾವ ಮೋಹನ ಮುರಳಿ' ಗೀತೆಗಳು ತುಂಬಾ ಜನಪ್ರಿಯವಾದವು. ನಂತರ ನಾಗತಿಹಳ್ಳಿಯವರ `ನನ್ನ ಪ್ರೀತಿಯ ಹುಡುಗಿ' ಚಿತ್ರಕ್ಕೆ ಸಂಗೀತ ನೀಡಿದರು. ಈ ಚಿತ್ರದ ಕಾರ್ ಕಾರ್ ಹಾಡು ಹಿಟ್ ಆಯಿತು. ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ `ಪ್ರೀತಿ ಪ್ರೇಮ ಪ್ರಣಯ' ಮತ್ತು ಸೂಪರ್ ಹಿಟ್ ಕಾಮಿಡಿ ಚಿತ್ರ `ಜೋಕ್ ಫಾಲ್ಸ್' ಚಿತ್ರಕ್ಕೆ ಸಂಗೀತ ನೀಡಿದರು. `ಮುಂಗಾರು ಮಳೆ' ಮತ್ತು `ಚೆಲುವಿನ ಚಿತ್ತಾರ' ಚಿತ್ರಗಳ ಸಂಗೀತ ತುಂಬಾ ಜನಪ್ರಿಯವಾದವು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X