twitter
    Celebs»Meena»Biography

    ಮೀನಾ ಜೀವನಚರಿತ್ರೆ

    ಮೀನಾ ದಕ್ಷಿಣ ಚಿತ್ರರಂಗದ ಪ್ರಮುಖ ಬಹುಬಾಷಾ ನಟಿ. ಬಾಲ ಕಲಾವಿದೆಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ನಂತರ ನಾಯಕಿಯಾಗಿ ಕೀರ್ತಿ ಪಡೆದರು. ರವಿಚಂದ್ರನ್ ರವರ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.


    ಮೀನಾ ಅವರು 1976 ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ತಮಿಳಿನ ದುರೈ ರಾಜ್ ಆದರೆ, ತಾಯಿ ಮಲಯಾಳಂ ಮೂಲದ ರಾಜಮಲ್ಲಿಕಾ. ಬಾಲಕಿಯಾಗಿದ್ದಾಗಲೇ ನಟನೆಗೆ ಇಳಿದ ಮೀನಾ, ಶಾಲೆಗೆ ಹೋಗಿದ್ದು 8ನೇ ತರಗತಿಯವರೆಗೆ ಮಾತ್ರ. ನಂತರ ದೂರಶಿಕ್ಷಣದ ಮೂಲಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತಮಿಳು, ತೆಲುಗು ಮಲಯಾಳಂ, ಕನ್ನಡ, ತೆಲಗು ಮತ್ತು ಹಿಂದಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಮೀನಾ ಭರತನಾಟ್ಯ ಕಲಾವಿದೆ ಕೂಡ. ನಟಿ ಮೀನಾ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಪುಟ್ನಂಜ, ಸುದೀಪ್ ಅಭಿನಯದ ಸ್ವಾತಿ ಮುತ್ತು, ಮೈ ಆಟೋಗ್ರಾಫ್, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.  


    ಮಲಯಾಳಂ, ತೆಲುಗು, ತಮಿಳಿನಲ್ಲಿಯೇ ಮೀನಾ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ತಮಿಳಿನ 'ಕಾದಲ್ ಸದುಗುಡು' ಸಿನಿಮಾಕ್ಕೆ ಅವರು ಹಾಡು ಹಾಡಿದ್ದರು.1982ರಿಂದ ನೂರಾರು ಸಿನಿಮಾಗಳಲ್ಲಿ ಮೀನಾ ನಟಿಸಿದ್ದಲ್ಲದೆ, ಟಿವಿ ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X