Celebs » Mohanlal » Biography
ಜೀವನಚರಿತ್ರೆ
ಮೋಹನ್ ಲಾಲ್ ಅವರು ಜನಿಸಿದ್ದು ೨೧ ಮೇ ೧೯೬೦ ಕೇರಳದಲ್ಲಿ. ತಂದೆ ವಿಶ್ವನಾಥ್ ನಾಯರ್ ತಾಯಿ ಶಾಂತಕುಮಾರಿ. ಇವರ ಬಾಲ್ಯ ವಿದ್ಯಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ.

ಶಿಕ್ಷಣದ ನಂತರ ಇವರು ಚಿತ್ರರಂಗದಲ್ಲಿ ಅಭಿನಹಿಸುವ ಆಸಕ್ತಿ ವಹಿಸಿ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಹೆಸರನ್ನು ಪಡೆಯುತ್ತಾರೆ. ಇವರು ಮಲಯಾಳಂ ಚಿತ್ರರಂಗದಲ್ಲಿ ಅನೇಕ ಚಿತ್ರಗಳಲ್ಲಿ ನಾಯಕನಾಗಿ ಅಭಿನಹಿಸಿದ್ದರೆ.

ಸುಚಿತ್ರ ಅವರನ್ನು ೧೯೮೮ರಲ್ಲಿ ಇವರು ವಿವಾಹವಾಗುತ್ತಾರೆ. ದಂಪತಿಗಳಿಗೆ ಇಬ್ಬರು ಮಕ್ಕಳು. ಪ್ರಣವ್ ಮೋಹನಲಾಲ್, ವಿಸ್ಮಯ ಮೋಹನ್ ಲಾಲ್.

೩೦೦ ಕ್ಕೂ ಹೆಚ್ಛು ಚಿತ್ರಗಳಲ್ಲಿ ನಾಯಕನಾಗಿ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ಮೋಹನ್ ಲಾಲ್.

ಚಿತ್ರರಂಗದಲ್ಲಿ ನಾಯಕ, ನಿರ್ದೇಶಕ, ನಿರ್ಮಾಪಕರಾಗಿ ಅನೇಕ ಚಿತ್ರಗಳನ್ನೂ ನಿರ್ಮಿಸಿ ಒಂದು ವಿಬ್ಬಿನ್ನ ರೀತಿಯಲ್ಲಿ ಹೆಸರನ್ನು ಮಾಡಿದ್ದರೆ ಮೋಹನ್ ಲಾಲ್.

ಕನ್ನಡ, ಹಿಂದಿ, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ ಮೋಹನ್ ಲಾಲ್. ಅಮಿತ ಬಚನ್, ರಾಜ್ ಕುಮಾರ್, ರಜನಿ ಕಾಂತ್, ಹೀಗೆ ಚಿತ್ರರಂಗದ ನಟರ ಜೊತೆಯಲ್ಲಿ ಕೆಲಸ ಮಾಡಿದ್ದರೆ ಮೋಹನ್ ಲಾಲ್.