twitter
    Celebs»Narasimha Raju»Biography

    ನರಸಿಂಹ ರಾಜು ಜೀವನಚರಿತ್ರೆ

    ನರಸಿಂಹ ರಾಜು ಕನ್ನಡದ ಚಿತ್ರರಂಗದಲ್ಲಿ  ಹಾಸ್ಯ ಚಕ್ರವರ್ತಿ  ಎಂದೇ ಖ್ಯಾತರಾಗಿದ್ದಾರೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಹಾಸ್ಯ ನಟನೆಗೆ ಒಂದು ಘನತೆ ತಂದು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಸಮಕಾಲೀನ ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆದ ಕನ್ನಡದ ಏಕೈಕ ಹಾಸ್ಯ ನಟ ಇವರು. ತಮ್ಮ 25 ವರ್ಷಗಳ ಸಿನಿಪಯಣದಲ್ಲಿ ಸುಮಾರು 250 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಹಿನ್ನಲೆ 1923 ಜುಲೈ 11 ರಂದು ಮೈಸೂರು ರಾಜ್ಯದ ತಿಪಟೂರಿನಲ್ಲಿ ಜನಿಸಿದರು. ಪೂರ್ಣ ಹೆಸರು ತಿಪಟೂರು ರಾಮರಾಜು ನರಸಿಂಹರಾಜು. ತಂದೆ ರಾಮರಾಜು ಪೋಲಿಸ್ ಕಾನಸ್ಟೇಬಲ್ , ತಾಯಿ ವೆಂಕಟಲಕ್ಷ್ಮಿ ಗೃಹಿಣಿ. ಬಾಲ್ಯದಲ್ಲಿ ಬಡತನವಿದ್ದದ್ದರಿಂದ ಇವರ ಚಿಕ್ಕಪ್ಪ ಲಕ್ಷ್ಮಿಪತಿರಾಜು ಇವರು ಕೇವಲ ನಾಲ್ಕು ವರ್ಷವಿದ್ದಾಗಲೇ ಚಂದ್ರ ಮೌಳೇಶ್ವರ ಡ್ರಾಮಾ ಕಂಪನಿಗೆ ಸೇರಿಸಿದರು. ಈ ಪ್ರವಾಸಿ ನಾಟಕ ತಂಡ ಸೇರಿದ ನರಸಿಂಹ ರಾಜುರವರು ಪ್ರಹ್ಲಾದ, ಲೋಹಿತಾಶ್ವ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದರು. ನಂತರ ದೊಡ್ಡವರಾದ ಮೇಲೆ ತಮ್ಮದೇ ಸ್ವಂತ ನಾಟಕ ಕಂಪನಿ ಆರಂಭಿಸಿ ಗೋರ ಕುಂಬಾರ ,ಸತ್ಯ ಹರಿಶ್ಚಂದ್ರ ಮುಂತಾದ ನಾಟಕಗಳನ್ನು ಪ್ರದರ್ಶಿಸಿದರು. ನಂತರ ತಮ್ಮ ಕಂಪನಿ ನಷ್ಟವಾದಾಗ`ಎಡತೊರೆಯ ಡ್ರಾಮಾ ಕಂಪನಿ' ಸೇರಿದರು. ಹೀಗೆ ಸುಮಾರು 27 ವರ್ಷಗಳ ಕಾಲ ವಿವಿಧ ನಾಟಕ ಕಂಪನಿಗಳಲ್ಲಿ ಹಲವಾರು ಪಾತ್ರ ಮಾಡಿದರು.

    ಸಿನಿಪಯಣ ಒಮ್ಮೆ ಮೈಸೂರಿನ ಟೌನ ಹಾಲ್ ನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನ ನೋಡಲು ಬಂದಿದ್ದ ಹೆಚ್.ಎಲ್.ಎನ್.ಸಿಂಹರವರು, ಡಾ. ರಾಜಕುಮಾರ್ ,ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅಭಿನಯ ನೋಡಿ ತಮ್ಮ ಬೇಡರ ಕಣ್ಣಪ್ಪ ಚಿತ್ರಕ್ಕೆ ಈ ಮೂವರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಈ ಮೂವರು ಮದ್ರಾಸ್ ಗೆ ಹೋಗಿ ಸ್ಕ್ರೀನ್ ಟೆಸ್ಟ್ ನೀಡಿ ಚಿತ್ರದಲ್ಲಿ ಅಭಿನಯಿಸಲು ಆಯ್ಕೆಯಾದರು. ಇಲ್ಲಿಂದ ನರಸಿಂಹ ರಾಜು ಹಿಂದೆ ನೋಡಿದ್ದೇ ಇಲ್ಲ.ಅಂದಿನ ದಿನಗಳಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ ಕನ್ನಡ ಚಿತ್ರಗಳಲ್ಲಿ  ಸೃಷ್ಟಿಸಿದ ಹಾಸ್ಯ ಧಾರೆ ಅವಿಸ್ಮರಣೀಯವಾದುದು. ರಾಜ್ ರ ಪ್ರತಿ ಚಿತ್ರಗಳಲ್ಲೂ ನರಸಿಂಹ ರಾಜು ಇರಲೇ ಬೇಕಿತ್ತು. ಒಂದು ಸಂದರ್ಶನದಲ್ಲಿ ಡಾ.ರಾಜಕುಮಾರ್ `` ಮೊದಲು ನಿರ್ಮಾಪಕರು ತಮ್ಮ ಚಿತ್ರಗಳಿಗೆ ನರಸಿಂಹರಾಜು ಕಾಲ್ ಶೀಟ್ ಪಡೆದ ಮೇಲೆ  ನಾಯಕನಟರನ್ನು ಸಂಪರ್ಕಿಸುತ್ತಿದ್ದರು'' ಎಂದು ಹೇಳಿದ್ದು ನರಸಿಂಹರಾಜುರವರಿಗೆ ಇದ್ದ ಜನಪ್ರಿಯತೆಯನ್ನು ತಿಳಿಸುತ್ತದೆ. ಪ್ರೊಫೆಸರ್ ಹುಚ್ಚುರಾಯ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಟಿಸಿದ್ದರು.

    ಕೊನೆಯ ದಿನಗಳು ತಮ್ಮ ಮಗ ಅಪಘಾತದಲ್ಲಿ ನಿಧನರಾಗಿದ್ದು ನರಸಿಂಹರಾಜುರವರ ಮನಸ್ಸಿಗೆ ಬಹುವಾದ ಆಘಾತ ನೀಡಿತು. 1979 ಜುಲೈ 11  ರಂದು ಬೆಳಿಗ್ಗೆ 4.30 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ತಮ್ಮ 56 ನೇ ವಯಸ್ಸಿನಲ್ಲಿ ನಿಧನರಾದರು. ಇವರ ಪುತ್ರಿ ಸುಧಾ ನರಸಿಂಹರಾಜು ಮತ್ತು ಮೊಮ್ಮಗ ಅವಿನಾಶ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X