twitter
    Celebs»Pawan Kumar»Biography

    ಪವನ್ ಕುಮಾರ್ ಜೀವನಚರಿತ್ರೆ

    ಪವನ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಿರ್ದೇಶಕ ,ನಿರ್ಮಾಪಕ,ನಟ ಮತ್ತು ಸಂಭಾಷಣಾಕಾರ. 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು PES ಕಾಲೇಜಿನಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ.ನಂತರ ಯೋಗರಾಜ್ ಭಟ್‌ರಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು. ಭಟರ್ `ಮನಸಾರೆ' ಮತ್ತು `ಪಂಚರಂಗಿ' ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಇವರೇ.

    2007 ರಲ್ಲಿ ತೆರೆಕಂಡ ದಿನೇಶ್ ಬಾಬು ನಿರ್ದೇಶನದ `ಮಿ. ಗರಗಸ' ಚಿತ್ರದ ಮೂಲಕ ನಟನೆಗೆ ಇಳಿದರು. `ಇಂತಿ ನಿನ್ನ ಪ್ರೀತಿಯ',ಮನಸಾರೆ',`ಸರ್ಕಸ್',`ಪಂಚರಂಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.2011 ರಲ್ಲಿ ತೆರೆಕಂಡ `ಲೈಫು ಇಷ್ಟೇನೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮುನ್ನೆಲೆಗೆ ಬಂದರು.2013 ರಲ್ಲಿ ತೆರೆಕಂಡ `ಲೂಸಿಯಾ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕು ಪವನ ಕುಮಾರ್ ಮನೆಮಾತಾದರು.ಲೂಸಿಯಾ ಚಿತ್ರದ ನಿರ್ದೇಶನಕ್ಕಾಗಿ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದರು.ಇದು ಕನ್ನಡದ ಮೊದಲ ಸಾಮೂಹಿಕ ಹೂಡಿಕೆ(Crowd-Fund) ಮೊತ್ತದ ಚಿತ್ರವಾಗಿತ್ತು

    ನಂತರ 2016 ರಲ್ಲಿ ತೆರೆಕಂಡ `ಯು ಟರ್ನ' ಚಿತ್ರ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಇದೇ ಚಿತ್ರವನ್ನು ತೆಲಗು ಮತ್ತು ತಮಿಳಿನಲ್ಲಿ ಕೂಡ ನಿರ್ದೇಶಿಸಿದ್ದಾರೆ.`ಪವನ್ ಕುಮಾರ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು `ಒಂದು ಮೊಟ್ಟೆ ಕಥೆ' ಚಿತ್ರವನ್ನು ನಿರ್ಮಿಸಿದ್ದಾರೆ.

    2010 ರಲ್ಲಿ ಸೌಮ್ಯ ಜಗನ್ನಾಥ ಎಂಬುವವರನ್ನು ಮದುವೆಯಾದ ಪವನ್‌ರಿಗೆ ಲಾಸ್ಯ ಎಂಬ ಪುತ್ರಿಯಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X