twitter
    Celebs»Pooja Gandhi»Biography

    ಪೂಜಾ ಗಾಂಧಿ ಜೀವನಚರಿತ್ರೆ

    ಪೂಜಾ ಗಾಂಧಿ ಕನ್ನಡ ಚಿತ್ರರಂಗದ ಪ್ರಮುಖ ನಟಿ. ಇವರು ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಮೂಲತಃ ಉತ್ತರ ಪ್ರದೇಶದ ಮೀರತ್‌ನವರಾದ ಪೂಜಾ ಗಾಂಧಿ 1983ರ  ಅಕ್ಟೋಬರ್ 07ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮೀರತ್ ಮತ್ತು ಸೋಫಿಯಾ ಕಾನ್ವೆಂಟ್ ಶಾಲೆಯಲ್ಲಿ ಮುಗಿಸಿದರು.  

     

    ನಟನೆ

    2001ರಲ್ಲಿ ಹಿಂದಿ ಸಿನಿಮಾ ಮೂಲಕ ನಟನೆಗೆ ಎಂಟ್ರಿಕೊಟ್ಟ ಪೂಜಾ ಗಾಂಧಿ, ನಂತರ ಬೆಂಗಾಲಿ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದರು. 2006ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಸಿನಿಮಾ ಅವರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿತು. ಈ ಚಿತ್ರದಲ್ಲಿ ಪೂಜಾ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ನಟಿಸಿದ್ದು, ಅಭೂತಪೂರ್ವ ಯಶಸ್ಸು ಕಂಡಿತ್ತು. ಜೊತೆಗೆ ಈ ಸಿನಿಮಾದ ಮೂಲಕ 'ಮಳೆ ಹುಡುಗಿ' ಎಂದೇ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. 

     

    ಮುಂಗಾರು ಮಳೆ ಬಳಿಕ ಮಿಲನಾ, ಕೃಷ್ಣ, ಆಕ್ಸಿಡೆಂಟ್, ಹನಿಹನಿ, ನೀ ಟಾಟಾ ನಾ ಬಿರ್ಲಾ, ಬುದ್ದಿವಂತ, ಜನುಮದ ಗೆಳತಿ, ಗೋಕಿಲ, ಇನಿಯ, ಮಿನುಗು, ಶ್ರೀ ಹರಿಕಥೆ, ತಾಜ್‌ಮಹಲ್ ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಜೊತೆಗೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಅಭಿನಯಿಸಿದರು. 

     

    2012ರಲ್ಲಿ ತೆರೆಕಂಡ 'ದಂಡುಪಾಳ್ಯ' ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದರು. ನಂತರ 2015ರಲ್ಲಿ 'ಅಭಿನೇತ್ರಿ' ಎಂಬ ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಇದು ಅವರ ನಿರ್ಮಾಣದ ಮೊದಲ ಕನ್ನಡ ಸಿನಿಮಾ. ಸದ್ಯ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

     

    ಕನ್ನಡ ಪ್ರೀತಿ

    ಸದ್ಯ ಪೂಜಾ ಗಾಂಧಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ತಮ್ಮ ಕನ್ನಡ ಪ್ರೀತಿಯಿಂದ ಗಮನ ಸೆಳೆಯುತ್ತಿದ್ದಾರೆ. ಇವರ ಮಾತೃಭಾಷೆ ಹಿಂದಿ. ಬೆಂಗಳೂರಿನಲ್ಲಿ ನೆಲಸಿರುವ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಮಾತನಾಡುತ್ತಾರೆ. ಜೊತೆಗೆ ಕನ್ನಡದಲ್ಲಿ ಸ್ಪಷ್ಟವಾಗಿ ಬರೆಯುವುದನ್ನೂ ಕಲಿತಿದ್ದಾರೆ. ಜೊತೆಗೆ ಪರಭಾಷಿಕರಿಗೆ ಕನ್ನಡ ಕಲಿಯುವುದರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X