twitter
    Celebs»Priya Anand»Biography

    ಪ್ರಿಯಾ ಆನಂದ್ ಜೀವನಚರಿತ್ರೆ

    ಪ್ರಿಯಾ ಆನಂದ್ ತಮಿಳು,ತೆಲುಗು,ಹಿಂದಿ,ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಚೆನ್ನೈನಲ್ಲಿ ಜನಿಸಿದ ಇವರು ಅಮೇರಿಕಾದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾರೆ. ಸುಮಾರು 7 ಭಾಷೆಗಳನ್ನು ಬಲ್ಲ ಇವರು ಸ್ಪಾನಿಶ್ ಭಾಷೆಯನ್ನು ಕೂಡ ಮಾತನಾಡುತ್ತಾರೆ.

    ತಂದೆ ಭಾರದ್ವಾಜ ಆನಂದ್ ಮರಾಠಿಯವರಾದೆ,ತಾಯಿ ರಾಧಾ ತಮಿಳಿನವರು.ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯಿದ್ದ 2008 ರಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಡೈರಿ ಮಿಲ್ಕ್ ,ಪ್ರಿನ್ಸ್ ಜ್ಯುವೆಲರಿ ಮುಂತಾದ ಜಾಹೀತಾರುಗಳಲ್ಲಿ ನಟಿಸಿದರು.2009 ರಲ್ಲಿ ತೆರೆಕಂಡ ತಮಿಳು ಚಿತ್ರ `ವಾಮನಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.

    ಪುನೀತ್ ರಾಜಕುಮಾರ್ ಅಭಿನಯದ `ರಾಜಕುಮಾರ' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದ ಪ್ರಿಯಾ ನಂತರ ಗಣೇಶ್ ಅಭಿನಯದ `ಆರೆಂಜ್' ಚಿತ್ರದಲ್ಲಿ ನಟಿಸಿದ್ದಾರೆ.

    ಹಿಂದಿಯಲ್ಲಿ `ರಂಗ್ರೇಜ್',`ಪಕ್ರಿ',`ಇಂಗ್ಲೀಷ್ ವಿಂಗ್ಲೀಷ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ತಮಿಳು,ತೆಲುಗು,ಹಿಂದಿ,ಇಂಗ್ಲೀಷ್,ಮರಾಠಿ,ಬಂಗಾಳಿ ಮತ್ತು ಸ್ಪಾನಿಶ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X